Kannada News Photo gallery International Yoga Day: Haveri's Hanagal Yogi Raju Petakar Performs Yoga for Hours in Water, See Photos
International Yoga Day: ನೀರಿನಲ್ಲೇ ಗಂಟೆಗಟ್ಟಲೆ ಯೋಗ ಮಾಡುವ ಹಾನಗಲ್ ಯೋಗಿ!
ಹಾವೇರಿ, ಜೂನ್ 21: ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗವನ್ನು ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದು ಭಾರತ. ಈಗ ಯೋಗ ಹಲವು ಆಯಾಮ ಪಡೆದುಕೊಂಡಿದೆ. ಯೋಗವನ್ನು ನೀರಿನಲ್ಲಿಯೇ ಮಾಡುವ ಮೂಲಕ ಹಾನಗಲ್ ವ್ಯಕ್ತಿಯೊಬ್ಬರು ವಿಶೇಷ ಸಾಧನೆ ಮಾಡಿದ್ದಾರೆ. ನೀರಿನಲ್ಲಿಯೇ ಗಂಟೆಗಟ್ಟಲೆ ಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತು ‘ಟಿವಿ9’ ಹಾವೇರಿ ವರದಿಗಾರ ಅಣ್ಣಪ್ಪ ಬಾರ್ಕಿ ನೀಡಿರುವ ವಿಶೇಷ ವರದಿ, ಚಿತ್ರಗಳು ಇಲ್ಲಿವೆ.
ನೀರಿನಲ್ಲಿ ಗಂಟೆಗಟ್ಟಲೆ ಯೋಗ ಮಾಡುವ ಮೂಲಕ ಸಾಧನೆ ಮಾಡಿದ ವ್ಯಕ್ತಿ ಹಾವೇರಿ ಜಿಲ್ಲೆ ಹಾನಗಲ್ ನಗರವಾಸಿ ರಾಜು ಪೇಟಕರ್. ಜಲ ಯೋಗದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ.
1 / 5
ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಇಂದು ಈಡೀ ವಿಶ್ವವೇ ಭಾರತ ಕಡೆ ನೋಡುವಂತೆ ಮಾಡಿದ್ದು ಯೋಗ. ಈ ಯೋಗದ ಮಹತ್ವ ಅರಿತು ಜಗತ್ತು ಜೂನ್ 21 ರಂದು ವಿಶ್ವದಲ್ಲೆಡೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಲ್ಲಿ ಯೋಗಾಸನ ಪ್ರಣಾಯಾಮ ಧ್ಯಾನ ಸೇರಿದಂತೆ ಹಲವು ವಿಭಾಗಗಳಿವೆ. ಈಗ ಸಾಮಾನ್ಯವಾಗಿ ಯೋಗಾಭ್ಯಾಸ ಮಾಡುವ ಜನರು ಬಹಳಷ್ಟು ಜನರಿದ್ದಾರೆ. ಆದರೆ, ಜಲಯೋಗ ಮಾಡುವ ಜನರು ಬಹಳಷ್ಟು ವಿರಳ.
2 / 5
ರಾಜು ಪೇಟಕರ್ ಜಲಯೋಗವನ್ನು ಕರಗತ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ನೆಲದ ಮೇಲೆ ಯೋಗಾಸನ ಮಾಡುತ್ತಿದ್ದ ಪೇಟಕರ್ ತಮ್ಮ ಪ್ರಯೋಗವನ್ನು ನೀರಿನಲ್ಲಿ ಮಾಡಲು ಆರಂಭಿಸಿದ್ದಾರೆ. ನೀರಿನಲ್ಲಿ ಪದ್ಮಾಸನ ಮತ್ತು ಶವಾಸನ ಸೇರಿದಂತೆ ವಿವಿಧ ಆಸನಗಳನ್ನು ಸರಾಗವಾಗಿ ಮಾಡುತ್ತಾರೆ. ಸುಮಾರು 40 ವರ್ಷಗಳಿಂದ ನೀರಿನಲ್ಲಿ ಜಲಯೋಗ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಆರೋಗ್ಯ ಸುಧಾರಿಸುತ್ತದೆ. ಮನಸ್ಸು ಉಲ್ಲಾಸವಾಗುತ್ತದೆ ಎನ್ನುತ್ತಾರೆ ಅವರು.
3 / 5
ರಾಜು ಪೇಟಕರ್ ಅವರ ಜಲಯೋಗ ನೋಡಿದ ಯುವಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಜಲಯೋಗದಿಂದ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ರಕ್ಷಣೆ ಮಾಡಬಹುದು. ಎಲ್ಲರೂ ಯೋಗಾಭ್ಯಾಸ ಮಾಡಬೇಕು. ಯೋಗದಿಂದ ಸಾಕಷ್ಟು ಅನುಕೂಲ ಇದೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರಿಂದ ಯೋಗದಿಂದ ಸಾಕಷ್ಟು ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು . ಜಲಯೋಗ ನೋಡಿ ನಮಗೆ ಹೆಮ್ಮೆಯಾಗಿದೆ ಎಂದು ಅವರು ಹೇಳಿದ್ದಾರೆ.
4 / 5
ಒಟ್ಟಿನಲ್ಲಿ ಯೋಗದಲ್ಲಿ ಎಲ್ಲವೂ ಇದೆ. ಯೋಗ ಮತ್ತು ಜಲಯೋಗದಲ್ಲಿ ಸಾಧನೆ ಮಾಡಿರುವ ರಾಜು ಪೇಟಕರ್ ಅವರಿಂದ ಯುವಕರೂ ಆಕರ್ಷಿತರಾಗಿದ್ದಾರೆ. ತಾವೂ ಸಹ ನೀರಿನಲ್ಲಿ ನಾವು ಯೋಗ ಮಾಡುವುದನ್ನು ಕಲಿಯಬೇಕು ಎಂದಿದ್ದಾರೆ.