ಐಫೋನ್ 16 ಕ್ಯಾಮೆರಾ ಬಗ್ಗೆ ಹೊರಬಿತ್ತು ಶಾಕಿಂಗ್ ನ್ಯೂಸ್: ಏನದು ನೋಡಿ
iPhone 16 Series: ಐಫೋನ್ 16 ಸರಣಿಯಲ್ಲಿ ಅತ್ಯುತ್ತಮ ಫೋಟೋಗಳನ್ನು ತೆಗೆದುಕೊಳ್ಳಲು ಆಪ್ಟಿಕಲ್ ಜೂಮ್ ಅನ್ನು 3x ನಿಂದ 5x ಗೆ ಹೆಚ್ಚಿಸಲಾಗುತ್ತದಂತೆ. ಐಫೋನ್ 16 ಪ್ರೊ ಸರಣಿಗೆ ಬಳಸಲಾದ 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದು.
1 / 6
ಟೆಕ್ ಮಾರುಕಟ್ಟೆಯಲ್ಲಿ ಐಫೋನ್‌ಗೆ ಇರುವಂತಹ ಕ್ರೇಜ್ ಅಷ್ಟಿಷ್ಟಲ್ಲ. ವರ್ಷಕ್ಕೆ ಒಂದು ಐಫೋನ್ ಸರಣಿಯನ್ನು ಬಿಡುಗಡೆ ಮಾಡುವ ಕಂಪನಿ, ಇತ್ತೀಚೆಗಷ್ಟೆ ತನ್ನ 15 ಸರಣಿಯನ್ನು ಪರಿಚಯಿಸಿತ್ತು. ಆ್ಯಪಲ್ ಕಂಪನಿಯ ಈ ಹೊಸ ಫೋನ್ ದಾಖಲೆ ಮಟ್ಟದಲ್ಲಿ ಮಾರಾಟ ಆಗುತ್ತಿದೆ.
2 / 6
ಐಫೋನ್ 15 ಸರಣಿ ಬಿಡುಗಡೆಯಾದ ಸಮಯದಲ್ಲಂತು ಸ್ಟೋರ್ ಮುಂದೆ ಕ್ಯೂ ನಿಂತು ಫೋನ್ ಖರೀದಿಸಿದ್ದರು. ಆ್ಯಪಲ್ ಕಂಪನಿಯ ಮುಂದಿನ ಫೋನ್ ಐಫೋನ್ 16 ಸರಣಿ (iPhone 16 Series). ಈ ಫೋನಿನ ತಯಾರಿ ಈಗಷ್ಟೆ ಆರಂಭವಾಗಲಿದೆ. ಹೀಗಿರುವಾಗ ಇದರ ಕೆಲ ಫೀಚರ್ಸ್ ಸೋರಿಕೆಯಾಗಿದೆ.
3 / 6
ಐಫೋನ್ 16 ಸರಣಿ ಲಾಂಚ್ ಆಗಲು ಇನ್ನೂ ಸಾಕಷ್ಟು ಸಮಯವಿದ್ದರೂ ಇದೀಗ ಈ ಫೋನ್ ಗೆ ಸಂಬಂಧಿಸಿದ ಸುದ್ದಿಯೊಂದು ಟೆಕ್ ಮಾರುಕಟ್ಟೆಯಲ್ಲಿ ವೈರಲ್ ಆಗುತ್ತಿದೆ. ಐಫೋನ್ 16 ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಕೆಲವು ಸೋರಿಕೆಗಳು ಸಖತ್ ಸೌಂಡ್ ಮಾಡುತ್ತಿದೆ. ವಿನ್ಯಾಸ, ಫೀಚರ್ಸ್ ಮತ್ತು ವಿಶೇಷಣಗಳ ಕುರಿತು ಕೆಲವು ಸುದ್ದಿಗಳು ಹರಿದಾಡುತ್ತಿವೆ.
4 / 6
ಮುಂದಿನ ಐಫೋನ್ 16 ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಮತ್ತು ಐಫೋನ್ 16 ಪ್ಲಸ್ ಇರಲಿವೆ. ಐಫೋನ್ 16 ಪ್ರೊ 6.3 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ, ಪ್ರೊ ಮ್ಯಾಕ್ಸ್ 6.9 ಇಂಚಿನ ಡಿಸ್ ಪ್ಲೇ, ಐಫೋನ್ 16 6.1 ಇಂಚಿನ ಡಿಸ್ಪ್ಲೇ ಮತ್ತು ಐಫೋನ್ 16 ಪ್ಲಸ್ 6.7 ಇಂಚಿನ ಡಿಸ್ಪ್ಲೇಯಿಂದ ಕೂಡಿರುತ್ತದೆ ಎಂದು ವರದಿಯಾಗಿದೆ.
5 / 6
ಅಲ್ಲದೇ ಸ್ಯಾಮ್ಸಂಗ್ ನೀಡಿರುವ OLED ಸ್ಕ್ರೀನ್ ಈ ಸರಣಿಯ ಫೋನ್ಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಮೈಕ್ರೋ ಎಲ್ಇಡಿ ಡಿಸ್ಪ್ಲೇ ತಂತ್ರಜ್ಞಾನ ಇದರಲ್ಲಿರಲಿದೆ. ಐಫೋನ್ 16 ಸರಣಿಯು 3 ನ್ಯಾನೊಮೀಟರ್ A18 ಚಿಪ್ ಅನ್ನು ನೀಡುತ್ತದೆ. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ‘ಟೆಟ್ರಾ-ಪ್ರಿಸ್ಮ್’ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ ಎಂದು ವದಂತಿಗಳಿವೆ.
6 / 6
ಅತ್ಯುತ್ತಮ ಫೋಟೋಗಳನ್ನು ತೆಗೆದುಕೊಳ್ಳಲು ಆಪ್ಟಿಕಲ್ ಜೂಮ್ ಅನ್ನು 3x ನಿಂದ 5x ಗೆ ಹೆಚ್ಚಿಸಲಾಗುತ್ತದಂತೆ. ಐಫೋನ್ 16 ಪ್ರೊ ಸರಣಿಗೆ ಬಳಸಲಾದ 48 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಬಹುದು ಎಂದು ತೋರುತ್ತದೆ. 2024 ರಲ್ಲಿ ಬಿಡುಗಡೆಯಾಗಲಿರುವ ಐಫೋನ್ 16 ಸರಣಿಯ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.