Tech Tips: ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮುನ್ನ ಎಚ್ಚರ: ತಪ್ಪದೆ ಹೀಗೆ ಮಾಡಿ
Smartphone Tricks: ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬೇರೆಯವರಿಗೆ ಮಾರುವ ಅಥವಾ ವಿನಿಮಯ ಮಾಡುವ ಮುನ್ನ, ಅದರಲ್ಲಿರುವ ಫೈಲುಗಳನ್ನು ಅಳಿಸಿಹಾಕಲೇಬೇಕು. ಇಲ್ಲವಾದಲ್ಲಿ ಅವರು ನಿಮ್ಮ ಇಮೇಲ್‌ಗೆ ಲಾಗಿನ್ ಆಗಬಹುದು.
Updated on: Jan 21, 2024 | 6:55 AM

ನೀವು ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಯೋಚನೆಯಲ್ಲಿದ್ದರೆ, ಅನುಸರಿಸಲೇಬೇಕಾದ ವಿಧಾನಗಳ ಬಗ್ಗೆ ಇಲ್ಲಿ ತಿಳಿಸಿಕೊಡುತ್ತೇವೆ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಯೋಣ.

ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬೇರೆಯವರಿಗೆ ಮಾರುವ ಅಥವಾ ವಿನಿಮಯ ಮಾಡುವ ಮುನ್ನ, ಅದರಲ್ಲಿರುವ ಫೈಲುಗಳನ್ನು ಅಳಿಸಿಹಾಕಲೇಬೇಕು. ಇಲ್ಲವಾದಲ್ಲಿ ಅವರು ನಿಮ್ಮ ಇಮೇಲ್‌ಗೆ ಲಾಗಿನ್ ಆಗಬಹುದು, ಸಂದೇಶಗಳನ್ನು ನೋಡಬಹುದು ಹಾಗೂ ಇತರ ಫೈಲ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ನಿಮ್ಮ ಫೋನ್ನಲ್ಲಿರುವ ಎಲ್ಲ ಫೈಲುಗಳು ಬ್ಯಾಕಪ್ ಇಟ್ಟುಕೊಳ್ಳಬೇಕು. ಕೆಲವು ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ಗೆ ಬ್ಯಾಕಪ್ ಮಾಡಿಕೊಳ್ಳುವ ಆಯ್ಕೆಯಿದ್ದರೆ, ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಸರ್ವರ್‌ನಲ್ಲೇ ಬ್ಯಾಕಪ್ ಇರಿಸಿಕೊಳ್ಳುವ ಆಯ್ಕೆಯಿರುತ್ತದೆ.

ಸ್ಮಾರ್ಟ್‌ಫೋನ್ ಅನ್ನು ಮಾರುವ ಮುನ್ನ ನಿಮ್ಮ ಸ್ಮಾರ್ಟ್‌ಫೋನಿನ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡುವುದು ಕಡ್ಡಾಯ. ನೀವು ಸ್ಮಾರ್ಟ್‌ಫೋನ್ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಫೋನಿನಲ್ಲಿನ ನಿಮ್ಮ ಡೇಟಾ ಸಂಪೂರ್ಣವಾಗಿ ಅಳಿಸಿಹೊಗುತ್ತದೆ, ಹಾಗಾಗಿ, ಮರೆಯದೇ ಫ್ಯಾಕ್ಟ್ರಿ ರೀಸೆಟ್ ಮಾಡಿ.

ಶೋರೂಂನಿಂದ ಸ್ಮಾರ್ಟ್‌ಫೋನ್ ಹೊರತಂದರೆ ಸಾಕು ಆ ಮೊಬೈಲ್ ಬೆಲೆ ಶೇ. 40 ರಷ್ಟು ಇಳೆಕೆಯಾಗುತ್ತದೆ ಎನ್ನುತ್ತವೆ ಸೆಕೆಂಡ್ ಹ್ಯಾಂಡ್ ಬೆಲೆಗಳನ್ನು ಹೇಳುವಂತಹ ಸೈಟ್‌ಗಳು. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಫೋನ್‌ನ ಒಳಭಾಗ ಮತ್ತು ಹೊರಭಾಗವನ್ನು ಚೆನ್ನಾಗಿ ಸ್ವಚ್ಛಮಾಡಿಕೊಳ್ಳಿ. ತಪ್ಪದೆ ಫಿಂಗರ್ ಪ್ರಿಂಟ್ ಕಲೆಗಳನ್ನು ನಿವಾರಿಸಿ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡಿ.

ನಿಮ್ಮ ಮೊಬೈಲ್ನಲ್ಲಿರುವ ಯಾವುದೇ ಫೈಲ್ ಅಥವಾ ಕಾಂಟೆಕ್ಟ್ ನಿಮಗೆ ಬೇಡ ಎಂದಾದಲ್ಲಿ ಸೆಟ್ಟಿಂಗ್ಸ್ಗೆ ತೆರಳಿ ಸ್ಮಾರ್ಟ್ಫೋನನ್ನು ಸಂಪೂರ್ಣ ರಿಸೆಟ್ ಕೊಡಬಹುದು. ಹೀಗೆ ಮಾಡಿದರೆ ಮೊಬೈಲ್ನಲ್ಲಿರುವ ಎಲ್ಲ ಫೈಲ್ಸ್ ಡಿಲೀಟ್ ಆಗಿ ಹೊಸದರಂತೆ ಇರುತ್ತದೆ.









