ಈಗ ಬೇವಿನ ಮರ ಹಣ್ಣು ಬಿಡುವ ಕಾಲ, ದ್ರಾಕ್ಷಿಯಂತೆ ಕಾಣುವ ಆ ಬೇವಿನ ಹಣ್ಣನ್ನು ಒಮ್ಮೆ ತಿಂದು ನೋಡಿ!

|

Updated on: Jun 19, 2023 | 9:42 AM

1 / 7
ಬೇಸಿಗೆ ಕಾಲದ ಆಜುಬಾಜು ಬೇವಿನ ಮರದಲ್ಲಿ ದ್ರಾಕ್ಷಿ ಗೊಂಚಲುಗಳಂತೆ ಬೇವಿನ ಕಾಯಿ, ಹಣ್ಣು ಕಂಡುಬರುತ್ತವೆ. ಬೇವಿನ ಕಾಯಿ ಕಹಿ ನಿಜ ಆದರೆ ಹಣ್ಣು ಮಾತ್ರ ಸಿಹಿಯಾಗಿರುತ್ತೆ. ಥೇಟ್ ಚಳ್ಳೆಹಣ್ಣಿನಂತೆಯೇ ತಿರುಳು ಹೊಂದಿರುವ ಬೇವಿನ ಹಣ್ಣಿನ ಒಳಭಾಗ ಅಂಟು ಅಂಟಾಗಿರುತ್ತದೆ. ಬೀಜ ದೊಡ್ಡ ಗಾತ್ರದ್ದಿರುತ್ತದಾದರೂ ಹಣ್ಣಿನ ತಿರುಳು ಸಿಹಿಯಾಗಿರುತ್ತೆ.

2 / 7
ಇಡೀ ಬೇವಿನ ಮರ, ಎಲೆ, ಹೂ, ಕಾಯಿ ಎಲ್ಲವೂ ಕಹಿಯಾಗಿರುತ್ತದೆ ನಿಜಾ. ಆದರೆ ಅದರ ಹಣ್ಣು ಸಿಹಿಯಾಗಿರುತ್ತೆ. ಹಣ್ಣು ಸಿಹಿಯಾಗಿರುವುದಾದರೂ ಸ್ವಲ್ಪ ಬೇವಿನ ವಾಸನೆ ಇರುವುದೂ ಸಹಜವೇ.

3 / 7
ಬೇವಿನ ಹಣ್ಣನ್ನು ಕುತೂಹಲಕ್ಕೆ ತಿಂದು ನೋಡಬಹುದು. ಹಾಗಂತ ದ್ರಾಕ್ಷಿ ಹಣ್ಣುಗಳನ್ನು, ಚಳ್ಳೆಹಣ್ಣುಗಳನ್ನು, ಕವಳೆ ಹಣ್ಣುಗಳನ್ನು ಇತರೆ ಹಣ್ಣುಗಳನ್ನು ತಿಂದಂತೆ ತಿನ್ನಲಾಗುವುದಿಲ್ಲ.

4 / 7
ಹಾಗೆ ನೊಡಿದರೆ ಇಡೀ ಬೇವಿನ ಮರವೇ ಬಹುಪಯೋಗಿಯಾಗಿದೆ. ಇದರ ಪ್ರತಿಯೊಂದೂ ಭಾಗವೂ ಉಪಯುಕ್ತವೇ. ಬಡವರ ಸಾಗುವಾನಿ ಕಟ್ಟಿಗೆ ಎಂದೇ ಬೇವಿನ ಮರ ಹೆಸರು ಪಡೆದಿದೆ.

5 / 7
ಬೇವಿನ ಹಣ್ಣು ತಿನ್ನುವುದು ಒಳ್ಳೆಯದೇ? ಹಣ್ಣನ್ನು ಮೂಲವ್ಯಾಧಿ, ಕರುಳಿನ ಹುಳುಗಳು, ಮೂತ್ರನಾಳದ ಅಸ್ವಸ್ಥತೆಗಳು, ರಕ್ತಸಿಕ್ತ ಮೂಗು, ಕಫ, ಕಣ್ಣಿನ ಕಾಯಿಲೆಗಳು, ಮಧುಮೇಹ, ಗಾಯಗಳು ಮತ್ತು ಕುಷ್ಠರೋಗಗಳಿಗೆ ಬಳಸಲಾಗುತ್ತದೆ.

6 / 7
ಸುಮ್ಮನೆ ಒಂದೆರಡು ತಿಂದು ರುಚಿ ನೋಡಬಹುದು. ಅಂದಹಾಗೆ ಇದರ ಬೀಜದಿಂದಲೇ ಬೇವಿನ ಎಣ್ಣೆಯನ್ನು ತಯಾರಿಸಲಾಗುತ್ತೆ.

7 / 7
ಎಲ್ಲದಕ್ಕೂ ಮುಖ್ಯವಾಗಿ ಬೇವಿನ ಮರ ಬೇಸಿಗೆಯಲ್ಲಿ ಅತ್ಯಂತ ತಂಪು ನೆರಳು ನೀಡುವ ಮರ. ಇದರಂತೆ ಯಾವ ಮರವೂ ತಂಪು ನೀಡುವುದಿಲ್ಲ.  ಹೀಗಾಗಿ ಪ್ರತಿ ಗ್ರಾಮಗಳಲ್ಲಿ ಬೇವಿನ ಮರಗಳೇ ಹೆಚ್ಚು ಕಾಣಸಿಗುವುದು. ಅದಕ್ಕೇ ಅಲ್ಲವೇ ನಮ್ಮ ಜನಪದರು "ಬ್ಯಾಸಗಿ ದಿವಸಕ ಬೇವಿನ ಮರ ತಂಪ..." ಅಂತ ಹಾಡಿ ಹೊಗಳಿರುವುದು.

Published On - 8:29 am, Mon, 19 June 23