Kannada News Photo gallery ಕ್ರೀಡಾ ನಿರೂಪಕಿ ಸಂಜನಾ ಜೊತೆ ಬುಮ್ರಾ ಮದುವೆ.. ಕ್ರೀಡಾ ನಿರೂಪಕಿಯರನ್ನ ವರಿಸಿರುವ ಇತರೆ ಕ್ರಿಕೆಟಿಗರು ಯಾರ‍್ಯಾರು ಗೊತ್ತಾ?
ಕ್ರೀಡಾ ನಿರೂಪಕಿ ಸಂಜನಾ ಜೊತೆ ಬುಮ್ರಾ ಮದುವೆ.. ಕ್ರೀಡಾ ನಿರೂಪಕಿಯರನ್ನ ವರಿಸಿರುವ ಇತರೆ ಕ್ರಿಕೆಟಿಗರು ಯಾರ‍್ಯಾರು ಗೊತ್ತಾ?
ಜಸ್ಪ್ರೀತ್ ಬುಮ್ರಾ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಇದೇ ತಿಂಗಳ 14 ಮತ್ತು 15 ರಂದು ಮದುವೆಯಾಗಲಿದ್ದಾರೆ. ಆದರೆ ಕ್ರಿಕೆಟಿಗ ಕ್ರೀಡಾ ನಿರೂಪಕನನ್ನು ಮದುವೆಯಾದವರಲ್ಲಿ ಬುಮ್ರಾ ಅವರೇ ಮೊದಲಿಗರಲ್ಲ.
1 / 6
ಜಸ್ಪ್ರೀತ್ ಬುಮ್ರಾ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಇದೇ ತಿಂಗಳ 14 ಮತ್ತು 15 ರಂದು ಮದುವೆಯಾಗಲಿದ್ದಾರೆ. ಆದರೆ ಕ್ರಿಕೆಟಿಗ ಕ್ರೀಡಾ ನಿರೂಪಕನನ್ನು ಮದುವೆಯಾದವರಲ್ಲಿ ಬುಮ್ರಾ ಅವರೇ ಮೊದಲಿಗರಲ್ಲ. ಬದಲಿಗೆ ಇನ್ನೂ ಹಲವು ಕ್ರಿಕೆಟ್ ಆಟಗಾರರು ಕ್ರೀಡಾ ನಿರೂಪಕಿಯರನ್ನು ವರಿಸಿದ್ದಾರೆ.
2 / 6
ಭಾರತದ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ, ಸ್ಟಾರ್ ಕ್ರೀಡಾ ನಿರೂಪಕರಲ್ಲಿ ಒಬ್ಬರಾದ ಮಾಯಂತಿ ಲ್ಯಾಂಗರ್ ಅವರನ್ನು 2012 ರಲ್ಲಿ ವಿವಾಹವಾದರು. ಬಿನ್ನಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರ ಪತ್ನಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ದೀರ್ಘಕಾಲದಿಂದ ಕ್ರೀಡಾ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ತಾಯ್ತನದ ಖುಷಿಯಲ್ಲಿರುವ ಮಾಯಂತಿ ಲ್ಯಾಂಗರ್ ಕೊಂಚ ಸಮಯದವರೆಗೆ ಕ್ರೀಡಾ ನಿರೂಪಕಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ.
3 / 6
ನ್ಯೂಜಿಲೆಂಡ್ ಕ್ರಿಕೆಟಿಗ ಮಾರ್ಟಿನ್ ಗುಪ್ಟಿಲ್ ಅವರು 2014 ರಲ್ಲಿ ಲಾರಾ ಮೆಕ್‌ಗೋಲ್ಡೆರಿಕ್ ಅವರನ್ನು ವಿವಾಹವಾದರು. ಲಾರಾ ನ್ಯೂಜಿಲೆಂಡ್ ಸ್ಟಾರ್ ಆಂಕರ್ ಆಗಿದ್ದಾರೆ. ಕ್ರೀಡಾ ಪತ್ರಕರ್ತೆಯಲ್ಲದೆ, ಅವರು ರೇಡಿಯೊ ಹೋಸ್ಟ್ ಸಹ ಆಗಿದ್ದಾರೆ.
4 / 6
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಮೊರ್ನೆ ಮರ್ಕೆಲ್ ಅವರು ಸಹ ಚಾನೆಲ್ 9 ರ ಕ್ರೀಡಾ ನಿರೂಪಕಿಯಾದ ರೋಸ್ ಕೆಲ್ಲಿಯೊಂದಿಗೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು. ನಂತರ ಈ ಇಬ್ಬರೂ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
5 / 6
ಆಸ್ಟ್ರೇಲಿಯಾದ ಕ್ರಿಕೆಟಿಗ ಶಾನ್ ಮಾರ್ಷ್ ಅವರು ಚಾನೆಲ್ ಸಾವೆನ್ನ ಕ್ರೀಡಾ ನಿರೂಪಕಿ ರೆಬೆಕ್ಕಾ ಒ'ಡೊನೊವನ್ ಅವರನ್ನು 2015 ರಲ್ಲಿ ವಿವಾಹವಾದರು. ರೆಬೆಕ್ಕಾ ಮಾಜಿ ಮಿಸ್ ಯೂನಿವರ್ಸ್ ಆಗಿದ್ದು, ಕ್ರಿಕೆಟ್ ಪಂದ್ಯಾವಳಿಗಳ ನಿರೂಪಕಿಯಾಗಿ ತುಂಬಾ ವರ್ಷಗಳವರೆಗೆ ಕಾರ್ಯನಿರ್ವಹಿಸಿದ್ದಾರೆ.
6 / 6
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಮತ್ತು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರ ಪತ್ನಿ ಲೀ ಫರ್ಲಾಂಗ್ ಕೂಡ ಕ್ರೀಡಾ ನಿರೂಪಕರಾಗಿದ್ದರು. ಸ್ವಲ್ಪ ಸಮಯದ ನಂತರ, ಅವರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು. 24 ಆಗಸ್ಟ್ 1986 ರಂದು ನ್ಯೂ ಸೌತ್ ವೇಲ್ಸ್ನಲ್ಲಿ ಜನಿಸಿದ ಲೀ 2010 ರಲ್ಲಿ ವ್ಯಾಟ್ಸನ್ ಅವರನ್ನು ವಿವಾಹವಾದರು.
Published On - 12:19 pm, Thu, 11 March 21