Updated on: Aug 13, 2022 | 5:54 PM
ಕಾಲ ಬದಲಾದಂತೆ ಕೋಲ (ವೇಷ) ಕೂಡ ಬದಲಾಗುತ್ತೆ ಎಂಬ ಮಾತಿದೆ. ಈ ಮಾತು ಅಕ್ಷರಶಃ ಸತ್ಯ ಎಂಬುದಕ್ಕೆ ಟ್ರೆಂಡ್ಗಳ ಬದಲಾವಣೆಯೇ ಸಾಕ್ಷಿ. ಇಂದು ಟ್ರೆಂಡ್ನಲ್ಲಿರುವ ವೇಷಭೂಷಣಗಳು ಕೆಲ ವರ್ಷಗಳ ನಂತರ ಬದಲಾಗುತ್ತೆ. ಇಂತಹ ಬದಲಾವಣೆಗಳು ಜಗದ ನಿಯಮ ಎಂದರೂ ತಪ್ಪಾಗಲಾರದು. ಹೀಗೆ ಬದಲಾವಣೆಯೊಂದಿಗೆ ಸಖತ್ ಡಿಫರೆಂಟ್ ಆಗಿ ಕಾಣಬೇಕೆಂದು ಅನೇಕರು ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ಮಾಡಿಕೊಂಡಿರುವ ಟ್ಯಾಟೂ ಮತ್ತು ಶಸ್ತ್ರಚಿಕಿತ್ಸೆಗಳ ರೂಪಾಂತರಗಳನ್ನು ನೋಡಿದ್ರೆ ಅಚ್ಚರಿಯಾಗುತ್ತೆ. ಇದಾಗ್ಯೂ ವಿಭಿನ್ನ ಲುಕ್ಗಳ ಮೂಲಕ ತಮ್ಮಿಷ್ಟದಂತೆ ಬದುಕುವ ಇಂತಹ ಒಂದು ದೊಡ್ಡ ವರ್ಗವೇ ಇದೆ. ಈ ವರ್ಗಕ್ಕೆ ಸೇರಿದವರಲ್ಲಿ ಆಸ್ಟ್ರೇಲಿಯಾದ ಅಂಬರ್ ಲ್ಯೂಕ್ ಕೂಡ ಒಬ್ಬರು.
ವಿಶೇಷ ಎಂದರೆ ಮಾಡೆಲ್ ಆಗಿದ್ದ ಅಂಬರ್ ಲ್ಯೂಕ್ಗೆ ಬಟ್ಟೆ ಧರಿಸುವುದೇ ಇಷ್ಟವಿರಲಿಲ್ವಂತೆ. ಹಾಗೆಯೇ ನಗ್ನಳಾಗಿ ಓಡಾಡಿಕೊಳ್ಳಲು ಅವಕಾಶ ಇರಲಿಲ್ಲ. ಆಗ ಹೊಳೆದಿದ್ದೇ ಟ್ಯಾಟೂ ಐಡಿಯಾ. ಅದರಂತೆ ಅಂಬರ್ ಲ್ಯೂಕ್ ತನ್ನ ಮೈಮೇಲೆ ಸಂಪೂರ್ಣ ಟ್ಯಾಟೂ ಹಾಕಿಸಿಕೊಂಡಿದ್ದಾಳೆ.
ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 1.5 ಕೋಟಿ ಎಂದರೆ ನಂಬಲೇಬೇಕು. ಅಂದರೆ ತನ್ನ ವೃತ್ತಿಜೀವನದಲ್ಲಿ ಗಳಿಸಿದ್ದೆಲ್ಲವನ್ನೂ ಟ್ಯಾಟೂಗಾಗಿ ಮೀಸಲಿಟ್ಟಿದ್ದಳು. ಈ ಮೂಲಕ ಮೈಮೇಲೆ 600 ಕ್ಕೂ ಅಧಿಕ ಟ್ಯಾಟೂ ಹಾಕಿಸಿಕೊಂಡಿದ್ದಳು.
ಆದರೆ ತನ್ನಿಷ್ಟದಂತೆ ಬದುಕಲು ಮುಂದಾಗಿದ್ದ ಅಂಬರ್ಗೆ ಇದೀಗ ಅದುವೇ ಸಮಸ್ಯೆ ಸೃಷ್ಟಿಸಿದೆ. ಅಂದರೆ ಮೈಮೇಲೆ ಪೂರ್ತಿ ಟ್ಯಾಟೂ ಹಾಕಿಸಿಕೊಂಡ ಮೇಲೆ ಯಾರು ಕೂಡ ಆಕೆಗೆ ಮಾಡೆಲಿಂಗ್ ಅವಕಾಶ ನೀಡುತ್ತಿಲ್ವಂತೆ. ಅಷ್ಟೇ ಯಾಕೆ ಜನರು ಮಾಟಗಾತಿ ಎಂದು ದೂರ ಮಾಡುತ್ತಿದ್ದಾರಂತೆ.
ಇತ್ತ ಕೆಲಸವೂ ಇಲ್ಲದೆ, ಅತ್ತ ಯಾರು ಕೂಡ ಹತ್ತಿರ ಸೇರಿಸುತ್ತಿಲ್ಲ ಎಂಬ ಕೊರಗು ಇದೀಗ ಅಂಬರ್ ಲ್ಯೂಕ್ರನ್ನು ಕಾಡುತ್ತಿದೆ. ಇದಾಗ್ಯೂ ಸೋಷಿಯಲ್ ಮೀಡಿಯಾ ಮೂಲಕ ತನ್ನ ಈ ವಿಭಿನ್ನ ಲುಕ್ ಮೂಲಕವೇ ಲ್ಯೂಕ್ ಒಂದಷ್ಟು ಆದಾಯಗಳಿಸುತ್ತಿದ್ದಾರೆ.
ಇವೆಲ್ಲದರ ನಡುವೆ ಯಾರೇ ಏನೇ ಹೇಳಿದ್ರೂ ಅಂಬರ್ ಲ್ಯೂಕ್ಗೆ ಈಗಲೂ ತನ್ನ ಟ್ಯಾಟೂ ಲುಕ್ ಬಲು ಇಷ್ಟವಂತೆ. ಒಟ್ಟಿನಲ್ಲಿ ಟ್ಯಾಟೂಗಳ ಮೂಲಕವೇ ಮೈಮುಚ್ಚಿಕೊಂಡಿರುವ ಅಂಬರ್ ಲ್ಯೂಕ್ ಈಗ ಲುಕ್ ಮೂಲಕವೇ ಸುದ್ದಿಯಾಗುತ್ತಿರುವುದು ವಿಶೇಷ.