
16ನೇ ವಿಧಾನಸಭೆಯ ಮೊಟ್ಟ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನ ನೂತನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಲವಲವಿಕೆಯಿಂದ ಓಡಾಡಿದರು.

ವಿಧಾನಸಭೆಯ ಮೊಗಸಾಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿರೋಧ ಪಕ್ಷದ ಶಾಸಕರುಗಳ ಜೊತೆ ಲವಲವಿಕೆಯಿಂದ ಮಾತನಾಡಿಸಿ ಫೋಟೋಗೆ ಫೋಸ್ ನೀಡಿದರು

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಹಸ್ತಲಾಘವ ಮಾಡಿದರು.

ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಾದ ಬೊಮ್ಮಾಯಿ, ಅಶೋಕ್, ಯತ್ನಾಳ್ ಜೊತೆ ಕುಶಲೋಪರಿ

ಇನ್ನು ತಮ್ಮ ವಿರುದ್ಧ ಕನಪುರದಲ್ಲಿ ಸ್ಪರ್ಧಿಸಿ ಸೋತಿರುವ ಆರ್ ಅಶೋಕ್ ಅವರ ಹೆಗಲ ಮೇಲೆ ಹಾಕಿ ನಗುತ್ತಲೇ ಫೋಟೋ ಕ್ಲಿಕ್ಕಿಸಿಕೊಂಡರು,

ವಿಧಾನಸಭೆ ಅಧಿವೇಶನ ಹಾಲ್ನಲ್ಲಿ ಹಲವು ಶಾಸಕರ ಜೊತೆ ಡಿಕೆ ಶಿವಕುಮಾರ್ ಮಾತು ಕತೆ ನಡೆಸಿದರು.

ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಡಿಸಿಎಂ ಡಿಕೆ ಶಿವಕುಮಾರ್ಗೆ ವಿಶ್ ಮಾಡಿರು.