ಖಂಡೋಬಾ ಮಂದಿರದಲ್ಲಿ ದಸರಾ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಆ ವೇಳೆ ಚಿನ್ನದ ಖಡ್ಗವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಆಗ ಭಕ್ತರು 45 ಕೆಜಿನ ತೂಕದ ಖಡ್ಗವನ್ನು ಹಲ್ಲುಗಳಿಂದ ಎತ್ತಿ ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸುತ್ತಾ ಖಂಡೋಬಾ ದೇವರ ಬಗ್ಗೆ ತಮಗಿರುವ ಭಕ್ತಿಯನ್ನು ತೋರಿಸುತ್ತಾರೆ.
ಖಂಡೋಬಾ ಮಂದಿರದ ಚಮತ್ಕಾರ ಎನೆಂದರೆ ಸಂತಾನಹೀನ ದಂಪತಿ ಇಲ್ಲಿಗೆ ಭೇಟಿ ನೀಡಿ, ಶಿವನನ್ನು ಭಕ್ತಿಯಿಂದ ಜಪಿಸಿದರೆ ಅಂತಹ ದಂಪತಿಗೆ ಮಕ್ಕಳಾಗುತ್ತವೆ. ಇನ್ನು ವಿವಾಹಕ್ಕೆ ವಿಘ್ನಗಳನ್ನುಎದುರಿಸುತ್ತಿರುವವರು ಈ ಮಂದಿರಕ್ಕೆ ಭೇಟಿ ನೀಡಿ, ಶಿವನ ಆಶೀರ್ವಾದ ಪಡೆದರೆ ಎಲ್ಲಾ ತೊಂದರೆಗಳೂ ನಿವಾರಣೆಯಾಗಿ, ಜೀವನ ಸಂಗಾತಿ ಲಭಿಸಿ, ನಿರ್ವಿಘ್ನವಾಗಿ ವಿವಾಹ ನೆರವೇರುತ್ತದೆ
ವಿಶಾಲ ಕೋಟೆಯ ತಲುಪಲು 345 ಮೆಟ್ಟಿಲುಗಳನ್ನು ಶ್ರದ್ಧಾ ಭಕ್ತಿಯಿಂದ ಹತ್ತಿ ಬರುವ ಭಕ್ತರಿಗೆ ಎದುರಿಗೆ ದೊಡ್ಡದಾದ ದೀಪ ಸ್ತಂಭ ಕಾಣಿಸಿಕೊಳ್ಳುತ್ತದೆ. 350 ವಿಶಾಲ ಬಂಡೆಗಳಿಂದ ಕೆತ್ತಿದ ದೀಪ ಸ್ತಂಭ ಇದಾಗಿದೆ. ಒಂದೊಂದು ದೀಪದ ಸುತ್ತಲೂ ನಾಲ್ಕೂ ದಿಕ್ಕುಗಳಲ್ಲಿ ದೀಪ ಬೆಳಗಿಸಬಹುದು. ಅದು ನಿಜಕ್ಕೂ ದಿವ್ಯ ಭವ್ಯ ನೋಟವಾಗಿರುತ್ತದೆ.
ಖಂಡೋಬಾ ಮಂದಿರದಲ್ಲಿ ಸ್ಥಾಪಿತವಾಗಿರುವ ವಿಭಿನ್ನ ಪ್ರಕಾರದ ವಿಗ್ರಹಗಳು ವಿಶೇಷವಾಗಿವೆ, ಆಕರ್ಷಕವಾಗಿವೆ. ಖಂಡೋಬಾ ಮಂದಿರದ ಪ್ರವೇಶ ದ್ವಾರದಲ್ಲಿ ಕಂಚಿನ ಬೃಹದಾಕಾರದ ದೀಪ ಸ್ತಂಭಗಳಿವೆ.
ಮಂದಿರದಲ್ಲಿ ಶಿವನ ವಿಗ್ರಹ ಇದೆ. ಕುದುರೆಯ ಮೇಲೆ ಯೋಧನ ಹಾಗೆ ಗೋಚರಿಸುವ ಸುಂದರ ಶಿವನ ಪ್ರತಿಮೆ ಇದು. ಶಿವನ ಕೈಯಲ್ಲಿ ಖಡ್ಗ ಹಿಡಿದುಕೊಂಡು ರಾಕ್ಷಸರ ಸಂಹಾರಕ್ಕೆ ಸಿದ್ಧವಿರುವ ಮೂರ್ತಿ ಅದಾಗಿದೆ. ಏಕೆಂದರೆ ಈ ಭೂಮಿಯ ಮೇಲೆ ಮಲ್ಲ ಮತ್ತು ಮಣಿ ರಾಕ್ಷಸರ ಹಾವಳಿ ವಿಪರೀತವಾಗಿತ್ತು. ಅವರನ್ನು ಸಂಹಾರ ಮಾಡಲು ಶಿವ ಮಾರ್ತಾಂಡ ಭೈರವ ರೂಪದಲ್ಲಿ ಅವತರಿಸಿದ್ದ ಎಂಬುದು ನಂಬಿಕೆ. ಮುಂದೆ ಅದು ಖಂಡೋಬಾ ಮಂದಿರದ ಹೆಸರಿನಲ್ಲಿ ಖ್ಯಾತಿ ಪಡೆಯಿತು.
ಖಂಡೋಬಾ ಮಂದಿರವು ಮಹಾರಾಷ್ಟ್ರದ ಐತಿಹಾಸಿಕ ಪೂನಾ ನಗರದಿಂದ ಶಿರಡಿಗೆ ಹೋಗುವ ಮಾರ್ಗದಲ್ಲಿದೆ. ಜೆಜೋರಿ ಗ್ರಾಮದ ಬಳಿ ಜಯಾದ್ರಿ ಪರ್ವತ ಶೃಂಖಲೆಯ ಮೇಲೆ ಭಗವಾನ್ ಖಂಡೋಬಾ ಮಂದಿರವಿದೆ. ಈ ಮಂದಿರ ದ್ವಾಪರ ಯುಗದಿಂದಲೂ ಸ್ಥಾಪನೆಯಾಗಿದ್ದು ಅಂದಿನಿಂದಲೂ ಹಾಗೆಯೇ ಇದೆ.