IPL 2022: ಇಬ್ಬರಲ್ಲಿ ಒಬ್ಬರು: ಯಾರನ್ನು ಆಯ್ಕೆ ಮಾಡುವುದು ಎಂಬ ಚಿಂತೆಯಲ್ಲಿ ಹೊಸ ತಂಡ..!
TV9 Web | Updated By: ಝಾಹಿರ್ ಯೂಸುಫ್
Updated on:
Dec 20, 2021 | 8:45 PM
IPL 2022 Mega Auction: ಈಗಾಗಲೇ ಕೆಎಲ್ ರಾಹುಲ್ ಜೊತೆ ಮಾತುಕತೆ ಮುಗಿದಿದ್ದು, ಹೀಗಾಗಿ ಲಕ್ನೋ ಪರ ರಾಹುಲ್ ಆಡುವುದು ಖಚಿತ ಎಂದೇ ಹೇಳಲಾಗಿದೆ. ಇದೀಗ ಲಕ್ನೋ ಫ್ರಾಂಚೈಸಿ ಎರಡನೇ ಭಾರತೀಯ ಆಟಗಾರರನ ಆಯ್ಕೆಯಲ್ಲಿ ತಲೆಕೆಡಿಸಿಕೊಂಡಿದೆ.
1 / 6
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹೊಸ ಎರಡು ತಂಡಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶವಿದೆ. ಅಂದರೆ ಇಲ್ಲಿ 33 ಕೋಟಿಯೊಳಗೆ 2 ಭಾರತೀಯ ಆಟಗಾರರು ಹಾಗೂ 1 ವಿದೇಶಿ ಆಟಗಾರನನ್ನು ಆಯ್ಕೆ ಮಾಡಬಹುದು. ಅದರಂತೆ ಇದೀಗ ಲಕ್ನೋ ಫ್ರಾಂಚೈಸಿ ಈಗಾಗಲೇ ಆಟಗಾರರೊಂದಿಗೆ ಡೀಲ್ ಕುದಿರಿಸಿಕೊಳ್ಳಲು ಮುಂದಾಗಿದೆ.
2 / 6
ಈಗಾಗಲೇ ಕೆಎಲ್ ರಾಹುಲ್ ಜೊತೆ ಮಾತುಕತೆ ಮುಗಿದಿದ್ದು, ಹೀಗಾಗಿ ಲಕ್ನೋ ಪರ ರಾಹುಲ್ ಆಡುವುದು ಖಚಿತ ಎಂದೇ ಹೇಳಲಾಗಿದೆ. ಇದೀಗ ಲಕ್ನೋ ಫ್ರಾಂಚೈಸಿ ಎರಡನೇ ಭಾರತೀಯ ಆಟಗಾರರನ ಆಯ್ಕೆಯಲ್ಲಿ ತಲೆಕೆಡಿಸಿಕೊಂಡಿದೆ. ಏಕೆಂದರೆ ಮೆಗಾ ಹರಾಜು ಪಟ್ಟಿಯಲ್ಲಿ ಇಬ್ಬರು ಸ್ಟಾರ್ ಆಟಗಾರರು ಇದ್ದು, ಇವರಲ್ಲಿ ಯಾರನ್ನು ಆಯ್ಕೆ ಮಾಡುವುದು ಯಾರನ್ನು ಬಿಡುವುದು ಎಂಬುದೇ ದೊಡ್ಡ ಸವಾಲು.
3 / 6
ಏಕೆಂದರೆ ಲಕ್ನೋ ಫ್ರಾಂಚೈಸಿಯ ಹಿಟ್ ಲೀಸ್ಟ್ನಲ್ಲಿರುವ ಇಬ್ಬರು ಆಟಗಾರರು ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ಮತ್ಯಾರೂ ಅಲ್ಲ, ಇಶಾನ್ ಕಿಶನ್ ಹಾಗೂ ಯುಜುವೇಂದ್ರ ಚಹಲ್. ಕಿಶನ್ ಮುಂಬೈ ಇಂಡಿಯನ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಾದರೆ ಚಹಲ್ ಆರ್ಸಿಬಿ ತಂಡದ ಬೌಲಿಂಗ್ ಬೆನ್ನೆಲುಬಾಗಿ ಕಾಣಿಸಿಕೊಂಡಿದ್ದರು.
4 / 6
ಇದೀಗ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಲಕ್ನೋ ಫ್ರಾಂಚೈಸಿ ಬಯಸಿದೆ ಎಂದು ವರದಿಯಾಗಿದೆ. ಆದರೆ ಇಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡರೂ ಮತ್ತೊಬ್ಬರನ್ನು ಮೆಗಾ ಹರಾಜಿನ ಮೂಲಕ ಖರೀದಿಸುವುದು ಸುಲಭವಲ್ಲ. ಏಕೆಂದರೆ ಈ ಇಬ್ಬರೂ ಆಟಗಾರರು ಎಲ್ಲಾ ಫ್ರಾಂಚೈಸಿಗಳು ಹಾಟ್ ಫೇವರೇಟ್ ಪ್ಲೇಯರ್ಸ್ ಆಗಿ ಗುರುತಿಸಿಕೊಂಡಿದ್ದಾರೆ.
5 / 6
ಆದರೆ ಐಪಿಎಲ್ ಸ್ಪೆಷಲ್ ಪಿಕ್ ರೂಲ್ಸ್ ಪ್ರಕಾರ ಹೊಸ ತಂಡಗಳು ಇಬ್ಬರು ಭಾರತೀಯ ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ಲಕ್ನೋ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಕಾರಣ, ಇದೀಗ ಇಶಾನ್ ಕಿಶನ್ ಅಥವಾ ಯುಜುವೇಂದ್ರ ಚಹಲ್..ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಸಂದಿಗ್ಧತೆಯಲ್ಲಿ ಸಿಲುಕಿದೆ.
6 / 6
ಒಟ್ಟಿನಲ್ಲಿ ಇಶಾನ್ ಕಿಶನ್ ಅಥವಾ ಯುಜುವೇಂದ್ರ ಚಹಲ್ ಇವರಿಬ್ಬರಲ್ಲಿ ಒಬ್ಬರು ಲಕ್ನೋ ತಂಡದ ಪಾಲಾಗಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಮಾತ್ರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು.