Rajiv Gandhi Birth Anniversary: ಡ್ರೈವಿಂಗ್, ಸಂಗೀತ, ಫೋಟೊಗ್ರಫಿ ಆಸಕ್ತಿ; ರಾಜೀವ್ ಗಾಂಧಿ ಬಗ್ಗೆ ಇನ್ನಷ್ಟು ತಿಳಿಯಿರಿ

| Updated By: ganapathi bhat

Updated on: Aug 20, 2021 | 9:05 AM

Rajiv Gandhi Photos: ರಾಜೀವ್ ಗಾಂಧಿ ಫೋಟೊಗ್ರಫಿಯಲ್ಲೂ ಆಸಕ್ತಿ ಹೊಂದಿದ್ದರು. ಹಲವರು ರಾಜೀವ್ ಗಾಂಧಿ ಬಳಿ ಫೋಟೊಗ್ರಫಿ ಪುಸ್ತಕ ಮಾಡುವಂತೆಯೂ ಒತ್ತಾಯಿಸಿದ್ದರು.

1 / 8
ಇಂದು (ಆಗಸ್ಟ್ 20) ಭಾರತದ ಮಾಜಿ ಪ್ರಧಾನಿ ಹಾಗೂ ಅತಿ ಕಿರಿಯ ವಯಸ್ಸಿನಲ್ಲಿ ಪ್ರಧಾನ ಮಂತ್ರಿ ಪಟ್ಟಕ್ಕೇರಿದ ರಾಜೀವ್ ಗಾಂಧಿ ಜನ್ಮದಿನ. ರಾಜಕೀಯ ಕ್ಷೇತ್ರದಲ್ಲಿ ಅಷ್ಟೊಂದು ಒಲವು ಮೊದಲಿಗೆ ಇರದಿದ್ದರೂ ಕೂಡ ರಾಜಕೀಯಕ್ಕೆ ಪ್ರವೇಶ ಪಡೆದ ಬಳಿಕ ಬಹು ಖ್ಯಾತಿಯನ್ನು ಪಡೆದವರು ರಾಜೀವ್ ಗಾಂಧಿ. ತಮ್ಮ ಸಹೋದರ ಸಂಜಯ್ ಗಾಂಧಿ 1980ರಲ್ಲಿ ವಿಮಾನ ಅಪಘಾತದಲ್ಲಿ ಮರಣಿಸಿದ ಬಳಿಕ ರಾಜೀವ್ ಗಾಂಧಿ ರಾಜಕೀಯಕ್ಕೆ ಪ್ರವೇಶ ಕೊಟ್ಟರು. ರಾಜೀವ್ ರಾಜಕಾರಣಕ್ಕೆ ಇಳಿದಾಗ ಅವರಿಗೆ ಅನನುಭವಿ ವ್ಯಕ್ತಿ ಎಂಬ ಹಣೆಪಟ್ಟಿ ಮತ್ತು ಟೀಕೆ ವ್ಯಕ್ತವಾಗಿತ್ತು. ಇದೆಲ್ಲದರ ಹೊರತಾಗಿ ರಾಜೀವ್ ರಾಜಕಾರಣದಲ್ಲಿ ಯಶಸ್ವಿಯಾದರು.

2 / 8
ರಾಜೀವ್ ಗಾಂಧಿ ಹುಟ್ಟಿದ್ದು 1944, ಆಗಸ್ಟ್ 20 ರಂದು, ಮುಂಬೈಯಲ್ಲಿ. ಶಾಲಾ ದಿನಗಳಲ್ಲಿ ಅವರು ಬಹಳ ನಾಚಿಕೆ ಸ್ವಭಾವದವರಾಗಿದ್ದರು. ಮೊದಲ ಹಂತದ ಶಿಕ್ಷಣವನ್ನು ದೆಹಲಿ ಮತ್ತು ಡೆಹ್ರಾಡೂನ್​ನಲ್ಲಿ ಪಡೆದ ರಾಜೀವ್ ಗಾಂಧಿ ಬಳಿಕ ಹೆಚ್ಚಿನ ಕಲಿಕೆಗಾಗಿ ಲಂಡನ್​ನ ಕ್ಯಾಂಬ್ರಿಡ್ಜ್ ಯುನಿವರ್ಸಿಟಿಗೆ ತೆರಳಿದರು. ಅಲ್ಲಿ ಇಂಜಿನಿಯರಿಂಗ್ ಕಲಿಕೆ ಆರಂಭಿಸಿದರು. ಕ್ಯಾಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಮೂರು ವರ್ಷಗಳ ಶಿಕ್ಷಣ ಪೂರೈಸಿದ ರಾಜೀವ್ ಗಾಂಧಿಗೆ ಕಲಿಕೆ ಮುಂದುವರಿಸುವುದು ಸಾಧ್ಯವಾಗಲಿಲ್ಲ. ಬಳಿಕ, 1966ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್​ನ್ನು ಇಂಪೀರಿಯಲ್ ಕಾಲೇಜ್ ಲಂಡನ್​ನಲ್ಲಿ ಆರಂಭಿಸಿದರು. ಆದರೆ ಅಲ್ಲಿಯೂ ಡಿಗ್ರಿ ಪಡೆಯಲು ಆಗದೆ ಭಾರತಕ್ಕೆ ವಾಪಸಾದರು.

3 / 8
ಭಾರತಕ್ಕೆ ಆಗಮಿಸಿದ ನಂತರ ರಾಜೀವ್ ಗಾಂಧಿ ದೆಹಲಿಯ ಫ್ಲೈಯಿಂಗ್ ಕ್ಲಬ್​ನ ಸದಸ್ಯರಾದರು. ಅಲ್ಲಿ ಪೈಲೆಟ್ ಆಗುವ ತರಬೇತಿ ಪಡೆದರು. ತಮಗೆ ಬಾಲ್ಯದಿಂದಲೂ ಪೈಲೆಟ್ ಆಗಬೇಕು ಎನ್ನುವ ಆಸೆ ಇತ್ತು ಎಂದು ಅವರು ಕೂಡ ಹೇಳಿಕೊಂಡಿದ್ದರು. ಹಾಗೂ ಅವರು ಪೈಲೆಟ್ ಆಗಿ ಕೆಲಸವನ್ನೂ ನಿರ್ವಹಿಸಿದ್ದರು. ಆದರೆ, ರಾಜಕೀಯಕ್ಕೆ ಇಳಿದ ಬಳಿಕ ಅವರು ತಮ್ಮ ಆಸಕ್ತಿಯ ಉದ್ಯೋಗವನ್ನು ತೊರೆಯಬೇಕಾಯ್ತು.

4 / 8
1966ರ ವೇಳೆಗೆ ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿ ಆಗಿದ್ದರು. ಹಾಗೂ ಸುಮಾರು ಅದೇ ಸಂದರ್ಭದಲ್ಲಿ ಭಾರತಕ್ಕೆ ವಾಪಸಾದ ರಾಜೀವ್ ಗಾಂಧಿ ರಾಜಕಾರಣದಲ್ಲಿ ಆಸಕ್ತಿ ತೋರಿಸಲಿಲ್ಲ. ಅವರು 1968ರಲ್ಲಿ ಸೋನಿಯಾರನ್ನು ವರಿಸಿದರು. ಎರಡು ವರ್ಷಗಳ ಬಳಿಕ ರಾಹುಲ್ ಗಾಂಧಿ  ಹಾಗೂ ಮತ್ತೆರಡು ವರ್ಷಗಳ ಬಳಿಕ ಪ್ರಿಯಾಂಕ ಗಾಂಧಿ ಜನಿಸಿದರು. ಹೀಗೆ ರಾಜಕೀಯದಿಂದ ದೂರವೇ ಉಳಿದಿದ್ದ ರಾಜೀವ್ ಗಾಂಧಿ 1980ರಲ್ಲಿ ತಮ್ಮ ಸಹೋದರನ ಮರಣಾ ನಂತರ ರಾಜಕೀಯಕ್ಕೆ ಪ್ರವೇಶಿಸಿದರು.

5 / 8
ರಾಜೀವ್ ಗಾಂಧಿ ಫೋಟೊಗ್ರಫಿಯಲ್ಲೂ ಆಸಕ್ತಿ ಹೊಂದಿದ್ದರು. ಹಲವರು ರಾಜೀವ್ ಗಾಂಧಿ ಬಳಿ ಫೋಟೊಗ್ರಫಿ ಪುಸ್ತಕ ಮಾಡುವಂತೆಯೂ ಒತ್ತಾಯಿಸಿದ್ದರು. ಆದರೆ, ತಮ್ಮ ಈ ಹವ್ಯಾಸವನ್ನು ರಾಜೀವ್ ಗಾಂಧಿ ಖಾಸಗಿಯಾಗೇ ಇರಿಸಿಕೊಂಡಿದ್ದರು. ಮತ್ತು ಅದನ್ನು ತಮ್ಮ ಸಂತೋಷಕ್ಕಾಗಿ ಅಷ್ಟೇ ಬಳಸಿಕೊಂಡಿದ್ದರು. ಆದರೆ, ರಾಜೀವ್ ಗಾಂಧಿ ನಿಧನದ ಬಳಿಕ ಅವರ ಫೋಟೊಗ್ರಾಫ್​ಗಳನ್ನು ಸೋನಿಯಾ ಗಾಂಧಿ ಪುಸ್ತಕವಾಗಿ ಪ್ರಕಟಿಸಿದರು. Rajiv's World- Photographs by Rajiv Gandhi ಎಂಬ ಪುಸ್ತಕದಲ್ಲಿ ಅವರು ತೆಗೆದ ಫೋಟೊಗಳನ್ನು ಕಾಣಬಹುದಾಗಿದೆ. ಅದರಲ್ಲಿ ಕಾಡು, ನದಿ, ಬೆಟ್ಟ ಮುಂತಾದ ಪ್ರಕೃತಿಯ ಸುಂದರ ಚಿತ್ರಣವಿದೆ.

6 / 8
ರಾಜೀವ್ ಗಾಂಧಿಗೆ ಸಂಗೀತದಲ್ಲೂ ಅಪಾರ ಆಸಕ್ತಿ ಇತ್ತು. ಪಾಶ್ಚಾತ್ಯ ಸಂಗೀತ ಹಾಗೂ ಹಿಂದೂಸ್ತಾನಿ ಎರಡರಲ್ಲೂ ರಾಜೀವ್ ಆಸಕ್ತಿ ಹೊಂದಿದ್ದರು. ರೇಡಿಯೋ ಆಲಿಸುವುದು ಅವರ ಹವ್ಯಾಸವಾಗಿತ್ತು. ಅವರು ಪೈಲೆಟ್ ಆಗಿ ಕೆಲಸ ಆರಂಭಿಸಿದ ಬಳಿಕ ಡ್ರೈವಿಂಗ್ ಕೂಡ ಇಷ್ಟದ ಹವ್ಯಾಸ ಆಗಿತ್ತು. ಅದೇ ಕಾರಣಕ್ಕೆ ರಾಜೀವ್ ಗಾಂಧಿ ತಾವು ಪ್ರಧಾನಿ ಆದ ಬಳಿಕವೂ ಬಹುತೇಕ ಬಾರಿ ತಮ್ಮ ವಾಹನವನ್ನು ತಾವೇ ಚಲಾಯಿಸುತ್ತಿದ್ದರು.

7 / 8
ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕೂಡ ರಾಜೀವ್ ಆಸಕ್ತಿ ಹೊಂದಿದ್ದರು. ರಾಜೀವ್ ಗಾಂಧಿ ಕಾಲದಲ್ಲಿ ಭಾರತ ಮಾಹಿತಿ, ತಂತ್ರಜ್ಞಾನ ಹಾಗೂ ಸಂವಹನ ಕ್ಷೇತ್ರದಲ್ಲಿ  ಕ್ರಾಂತಿ ಮಾಡುವಂತಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯ ಕೆಲಸ ಕೈಗೊಂಡ ಭಾರತ ತನ್ನದೇ ಸೂಪರ್ ಕಂಪ್ಯೂಟರ್ ತಯಾರಿಸುವಂತಾಯಿತು.

8 / 8
ಚೀನಾದೊಂದಿಗಿನ ಸಂಬಂಧ, ಈಶಾನ್ಯ ರಾಜ್ಯಗಳ ಜೊತೆಗೆ ಒಪ್ಪಂದ ಇತ್ಯಾದಿ ನಿರ್ಧಾರಗಳು ರಾಜಕೀಯವಾಗಿ ಭಿನ್ನಾಭಿಪ್ರಾಯ ಹೊಂದಿದ್ದರೂ ದಿಟ್ಟ ಹೆಜ್ಜೆ ಎನಿಸಿದ್ದವು.  ಭಾರತದ 6ನೇ ಪ್ರಧಾನಿಯಾಗಿ 1984ರಲ್ಲಿ ಅಧಿಕಾರ ವಹಿಸಿದ ರಾಜೀವ್ ಗಾಂಧಿ. 1991 ಮೇ 21ರಂದು ಎಲ್​ಟಿಟಿಇ ಭಯೋತ್ಪಾದ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದರು.

Published On - 8:57 am, Fri, 20 August 21