
ಪ್ರಸಿದ್ಧ ಆನ್ಲೈನ್ ಇ ಕಾಮರ್ಸ್ ತಾಣಗಳಲ್ಲಿ ಆಫರ್ಗಳಿಗೇನೂ ಬರವಿಲ್ಲ. ಹಲವು ಇ ಕಾಮರ್ಸ್ ತಾಣಗಳು ಆನ್ಲೈನ್ ಖರೀದಿಯಲ್ಲಿ ಡಿಸ್ಕೌಂಟ್ ನೀಡುತ್ತದೆ. ಇದೀಗ ಫ್ಲಿಪ್ಕಾರ್ಟ್ 'ಮೊಬೈಲ್ ಬೊನಾಂಜಾ' ಮೇಳವನ್ನು ಶುರುಮಾಡಿದೆ.

ಆಗಸ್ಟ್ 19ಕ್ಕೆ ಆರಂಭವಾಗಿರುವ ಈ ಮೇಳವು ಆಗಸ್ಟ್ 23 ವರೆಗೂ ನಡೆಯಲಿದೆ. ಪ್ರಮುಖ ಕಂಪನಿಗಳ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿಗಳು ದೊರೆಯಲಿದ್ದು, ಹಾಗೆಯೇ ಎಕ್ಸ್ ಚೇಂಜ್ ಬೇನಿಫಿಟ್ ಸಹ ಸೇರಲಿದೆ. ಪ್ರಮುಖವಾಗಿ ಐಫೋನ್ ಗಳ ಮೇಲೆ ಬೊಂಬಾಟ್ ಡಿಸ್ಕೌಂಟ್ ನೀಡುತ್ತಿದೆ.

ಹಾಗಾದರೇ ಫ್ಲಿಪ್ಕಾರ್ಟ್ನಲ್ಲಿ ಯೋಜಿಸಿರುವ ಮೊಬೈಲ್ ಬೊನಾಂಜಾ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್ ಫೋನುಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ.

ಐಫೋನ್ 12 ಸರಣಿ: ನೀವು ಐಫೋನ್ ಕೊಂಡುಕೊಳ್ಳುವ ಆಸೆಯಿದ್ದರೆ ಇದೇ ಸರಿಯಾದ ಸಮಯ. ಐಫೋನ್ 12 ಸರಣಿಯ ಫೋನುಗಳ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಐಫೋನ್ 12 ಮಿನಿ ಬೆಲೆಯಲ್ಲಿ ಖಡಿತ ಮಾಡಲಾಗಿದ್ದು 59,999 ರೂ. ಗೆ ಲಭ್ಯವಾಗುತ್ತಿದೆ. ಜೊತೆಗೆ ಐಫೋನ್ ಎಸ್ಇ 2020 34,999 ರೂ. ಗೆ ಮತ್ತು ಐಫೋನ್ 11 48,999 ರೂ. ಗೆ ಮಾರಾಟವಾಗುತ್ತಿದೆ.

ಪೋಕೋ ಎಮ್3: ಪೋಕೋ ಎಮ್3 ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 3000 ರೂ. ಡಿಸ್ಕೌಂಟ್ ನೀಡಲಾಗಿದೆ. ಈ ಫೋನ್ ಸದ್ಯ ಕೇವಲ 10,499 ರೂ. ಗೆ ಖರೀದಿಗೆ ಸಿಗುತ್ತಿದೆ. ಇದರ ಮೂಲಬೆಲೆ 13,500 ರೂ.

ಮೋಟೋ ಜಿ60: ಫ್ಲಿಪ್ಕಾರ್ಟ್ ಐದು ದಿನಗಳ ಮಹಾಮೇಳದಲ್ಲಿ ಮೋಟೋ ಜಿ60 ಸ್ಮಾರ್ಟ್ಫೋನ್ ಕೇವಲ 16,999 ರೂ. ಗೆ ಖರೀದಿಸಬಹುದು.

ಏಸಸ್ ರೋಗ್ ಫೋನ್: ಗೇಮಿಂಗ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಏಸಸ್ ರೋಗ್ ಫೋನ್ 'ಮೊಬೈಲ್ ಬೊನಾಂಜಾ ಸೇಲ್ನಲ್ಲಿ 39,999 ರೂ. ಗೆ ಮಾರಾಟವಾಗುತ್ತಿದೆ. ಇದರ ಮೂಲಬೆಲೆ 46,999 ರೂ. ಆಗಿದೆ.