
ತಾಮ್ರದ ಪಾತ್ರೆಗಳಿಂದ ನೀರು ಕುಡಿಯುವ ಪದ್ಧತಿ ಪ್ರಾಚೀನ ಕಾಲದಿಂದಲೂ ಇದೆ. ಈ ಅಭ್ಯಾಸದ ಹಿಂದಿರುವ ಪ್ರಯೋಜನವನ್ನು ಈಗೀನ ಹಲವಾರು ಅಧ್ಯಯನಗಳೂ ಕೂಡ ಬೆಂಬಲ ನೀಡುತ್ತದೆ.

ನೀವು ಕುಡಿಯುವ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಬಯಸಿದರೆ, ಅದನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಸಂಗ್ರಹಿಸಿಡಿ ಎಂದು ವೈದ್ಯರು ಹೇಳುತ್ತಾರೆ.

ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ನೀರನ್ನು ಕುಡಿಯುವ ಮೂಲಕ ಹೊಟ್ಟೆಯಲ್ಲಿರುವ ಹಲವಾರು ಕಾಯಿಲೆ ಬರಿಸುವ ಬ್ಯಾಕ್ಟೀರಿಯಾಗಳನ್ನು ನಿವಾರಣೆ ಮಾಡಿ ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಜಠರ ಮತ್ತು ಕರುಳುಗಳಲ್ಲಿ ಕಂಡು ಬರುವ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕಲ್ಮಶಗಳು ನಿವಾರಣೆಯಾಗುತ್ತದೆ.

ತಾಮ್ರದಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು ಜೀವಕೋಶಗಳ ಹುಟ್ಟುವಿಕೆಗೆ ನೆರವಾಗ್ತುತದೆ. ಅಲ್ಲದೇ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳನ್ನು ಹಿಮ್ಮೆಟ್ಟಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯದ ಬಡಿತವನ್ನು ಕ್ರಮಬದ್ದಗೊಳಿಸಲು ತಾಮ್ರ ಉತ್ತಮವಾಗಿದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.