ಕರ್ನಾಟಕ ವಿಧಾನಸಭೆ ಚುಣಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 135 ಸ್ಥಾನಗಲ್ಲಿ ಗೆದ್ದು ಪ್ರಚಂಡ ಬಹುಮತ ಸಾಧಿಸಿದೆ. ಅದರಲ್ಲೂ ಮುಖ್ಯವಾಗಿ ಅಚ್ಚರಿ ಎಂಬಂತೆ ಕೋಲಾರದಿಂದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಇನ್ನೇನು ನಾಮಪತ್ರ ಸಲ್ಲಿಕೆ ಎರಡು ದಿನ ಬಾಕಿ ಇರುವಾಗಲೇ ಹೈಕಮಾಂಡ್ ಕೊತ್ತೂರು ಮಂಜುನಾಥ್ಗೆ ಟಿಕೆಟ್ ನೀಡಿತ್ತು. ಇದೀಗ ಅಂತಿಮವಾಗಿ ಕೊತ್ತೂರು ಮಂಜುನಾಥ್ ಗೆಲುವು ಸಾಧಿಸಿದ್ದು, ಅವರ ಅಭಿಮಾನಿಗಳು ವಿದೇಶದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಅಮೇರಿಕಾ, ಲಂಡನ್ ಹಾಗೂ ಕೆನಾಡದಲ್ಲಿ ಕೊತ್ತೂರು ಮಂಜುನಾಥ್ ಭಾವಚಿತ್ರ ಹಿಡಿದು ಕೇಕ್ ಕತ್ತರಿಸಿ ಶುಭಾಶಯ ತಿಳಿಸಿದ್ದಾರೆ.
1 / 7
ಯಾವುದೇ ಪೂರ್ವ ತಯಾರಿ ಇಲ್ಲದೇ ಕೋಲಾರದಲ್ಲಿ ಕೊತ್ತೂರು ಮಂಜುನಾಥ್ ಗೆಲುವು ಸಾಧಿಸಿದ್ದು, ಅಚ್ಚರಿಕೆ ಕಾರಣವಾಗಿದೆ.
2 / 7
ನಾಮಪತ್ರ ಸಲ್ಲಿಕೆ ಎರಡು ದಿನ ಬಾಕಿ ಇರುವಾಗಲೇ ಹೈಕಮಾಂಡ್ ಕೊತ್ತೂರು ಮಂಜುನಾಥ್ಗೆ ಟಿಕೆಟ್ ನೀಡಿತ್ತು
3 / 7
ಕೊತ್ತೂರು ಮಂಜುನಾಥ್ ಗೆಲುವಿಗೆ ಕ್ಷೇತ್ರದಲ್ಲಿ ಮಾತ್ರವಲ್ಲ ವಿವಿದ ದೇಶಗಳಲ್ಲಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದ ವಿಶೇಷ
4 / 7
ಕೇಕ್ ಕತ್ತರಿಸಿ ಕೊತ್ತೂರು ಮಂಜುನಾಥ್ ಅವರಿಗೆ ಜಯಘೋಷ ಕೂಗಿ ಶುಭಾಶಯ ತಿಳಿಸಿದ ಅಭಿಮಾನಿಗಳು
5 / 7
ಕೊತ್ತೂರು ಮಂಜುನಾಥ್ ಭಾವಚಿತ್ರ ಹಿಡಿದು, ಕೇಕ್ ಕತ್ತರಿಸಿ ಸಂಭ್ರಮಾಚರಣೆ
6 / 7
ಅಮೇರಿಕಾ, ಲಂಡನ್ ಹಾಗೂ ಕೆನಾಡದಲ್ಲಿ ಸಂಭ್ರಮಿಸಿದ ಕೊತ್ತೂರು ಮಂಜುನಾಥ್ ಅಭಿಮಾನಿಗಳು
7 / 7
ಕೊತ್ತೂರು ಮಂಜುನಾಥ್ ಕೋಲಾರದ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಹಲವು ದೇಶಗಳಲ್ಲಿ ಸಂಭ್ರಮಿಸಿದ ಅವರ ಅಭಿಮಾನಿಗಳು