ನಿಂಬೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ ನಿಂಬೆರಸ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಮಲಗುವ ಮುನ್ನವೂ ನಿಂಬೆರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯವು ಸುಧಾರಿಸುತ್ತದೆ.
ನಿಂಬೆರಸವನ್ನು ಯಾವಾಗ ಬೇಕಾದ್ರು ಕುಡಿಯಬಹುದು. ಇದು ದೇಹದಲ್ಲಿ ಕ್ಷಾರೀಯ ವಾತಾವರಣವನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಇದನ್ನು ಬೆಳಿಗ್ಗೆ ಕುಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ನಿಂಬೆರಸ ಕುಡಿಯುವುದು ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ ಎಂದು ಹೊಸ ಸಂಶೋಧನೆ ಹೇಳುತ್ತದೆ.
ನಿಂಬೆರಸದಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. 100 ಗ್ರಾಂ ನಿಂಬೆ ರಸವು 39 ಮಿಗ್ರಾಂ ವಿಟಮಿನ್ ಸಿನ್ನು ಹೊಂದಿರುತ್ತದೆ.