ಹೆಣ್ಣಿನ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವ ಶಕ್ತಿ ಸೀರೆಗಿದೆ. ಅದರಲ್ಲೂ ಭಾರತೀಯ ರೇಷ್ಮೆ ಸೀರೆಗಳಂತೂ ಅತ್ಯಂತ ಜನಪ್ರಿಯ. ಇದು ಐಷಾರಾಮಿ ಲುಕ್ ನೀಡುವುದರಲ್ಲಿ ಬೇರೆ ಮಾತಿಲ್ಲ.
Feb 02, 2023 | 5:27 PM
ಎಷ್ಟೇ ದುಬಾರಿ ಮಾರ್ಡನ್ ಬಟ್ಟೆಗಳೂ ಬಂದರೂ ಸಹ, ಸೀರೆಗಳ ಬೇಡಿಕೆ ಇನ್ನೂ ಹಾಗೆಯೇ ಇದೆ. ಹೆಣ್ಣಿನ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವ ಶಕ್ತಿ ಸೀರೆಗಿದೆ. ಅದರಲ್ಲೂ ಭಾರತೀಯ ರೇಷ್ಮೆ ಸೀರೆಗಳಂತೂ ಅತ್ಯಂತ ಜನಪ್ರಿಯ. ಇದು ಐಷಾರಾಮಿ ಲುಕ್ ನೀಡುವುದರಲ್ಲಿ ಬೇರೆ ಮಾತಿಲ್ಲ.
1 / 8
ಕಾಂಜೀವರಂ ರೇಷ್ಮೆ ಸೀರೆಗಳನ್ನು ಕಾಂಚೀಪುರಂ ರೇಷ್ಮೆ ಸೀರೆ ಎಂದೂ ಕರೆಯುತ್ತಾರೆ. ಮದುವೆಗಳು ಮತ್ತು ಇತರ ವಿಶೇಷ ಕಾರ್ಯಕ್ರಮಗಳಿಗೆ ಜನಪ್ರಿಯ ಆಯ್ಕೆಯಾಗಿದೆ. ದಪ್ಪ, ಗಾಢವಾದ ಬಣ್ಣಗಳು, ಸಂಕೀರ್ಣ ವಿನ್ಯಾಸಗಳು ಮತ್ತು ಚಿನ್ನ ಮತ್ತು ಬೆಳ್ಳಿಯ ಝರಿಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಕಂಜೀವರಂ ರೇಷ್ಮೆ ಸೀರೆಗಳನ್ನು ಶುದ್ಧ ರೇಷ್ಮೆಯಿಂದ ತಯಾರಿಸಲಾಗುತ್ತದೆ.
2 / 8
ಬನಾರಸಿ ರೇಷ್ಮೆ ಸೀರೆಗಳು ಅತ್ಯಂತ ಜನಪ್ರಿಯ ರೇಷ್ಮೆ ಸೀರೆಗಳಲ್ಲಿ ಒಂದಾಗಿದೆ. ಇದು ಮದುವೆಯಂತಹ ಔಪಚಾರಿಕ ಕಾರ್ಯಕ್ರಮಗಳಿಗೆ ಉತ್ತಮ ಆಯ್ಕೆಯಾಗಿದೆ. ಬನಾರಸಿ ಸೀರೆಗಳು ವಿಶಿಷ್ಟವಾಗಿ ಭಾರವಾಗಿರುವುದರಿಂದ ಜೊತೆಗೆ ಇದರ ವಿನ್ಯಾಸಗಳು ಅಷ್ಟೇ ಸುಂದರವಾಗಿದ್ದು, ನಿಮಗೆ ರಾಣಿಯ ನೋಟವನ್ನು ನೀಡುತ್ತದೆ.
3 / 8
ಮೈಸೂರು ರೇಷ್ಮೆ ಸೀರೆಗಳು ರೋಮಾಂಚಕ ವರ್ಣಗಳು ಮತ್ತು ಸೊಗಸಾದ ಹೊಳಪಿನ ಕಾರಣ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ವಿಶಿಷ್ಟವಾಗಿ ಶುದ್ಧ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಹೆಚ್ಚಿನ ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ಮೈಸೂರು ರೇಷ್ಮೆ ಸೀರೆಗಳನ್ನು ಮೊದಲು ಆಯ್ಕೆ ಮಾಡುತ್ತಾರೆ.
4 / 8
ಟಸ್ಸಾರ್ ರೇಷ್ಮೆ ಸೀರೆಗಳು ಹಗುರವಾಗಿರುವುದರ ಜೊತೆಗೆ ಸಾಕಷ್ಟು ಆರಾಮದಾಯಕವೂ ಹೌದು. ಕಾಡು ರೇಷ್ಮೆ ಹುಳುಗಳ ಕೋಕೂನ್‌ಗಳಿಂದ ಉತ್ಪತ್ತಿಯಾಗುವ ಒಂದು ರೀತಿಯ ರೇಷ್ಮೆಯಿಂದ ಈ ಸೀರೆಯನ್ನು ತಯಾರಿಸಲಾಗುತ್ತದೆ. ಸೊಗಸಾದ ನೋಟವನ್ನು ಬಯಸುವ ವಧುಗಳಿಗೆ ಉತ್ತಮ ಆಯ್ಕೆಯ ಸೀರೆಯೇ ಈ ಟಸ್ಸಾರ್ ರೇಷ್ಮೆ ಸೀರೆ.
5 / 8
ಅಸ್ಸಾಂ ರೇಷ್ಮೆ ಸೀರೆಗಳು ಇದನ್ನು ಮುಗಾ ರೇಷ್ಮೆ ಸೀರೆಗಳು ಎಂದೂ ಕೂಡ ಕರೆಯುತ್ತಾರೆ. ಇದು ಸಾಂಪ್ರದಾಯಿಕ ಭಾರತೀಯ ರೇಷ್ಮೆ ಸೀರೆಯಾಗಿದ್ದು, ಅದರ ಚಿನ್ನದ ಹೊಳಪು ಮತ್ತು ಮೃದುವಾದ ವಿನ್ಯಾಸದಿಂದಲೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ. ಅಸ್ಸಾಂ ರಾಜ್ಯದಲ್ಲಿ ಮಾತ್ರ ಕಂಡುಬರುವ ಮುಗಾ ರೇಷ್ಮೆ ಹುಳುವಿನ ಚಿನ್ನದ ರೇಷ್ಮೆಯಿಂದ ಈ ಸೀರೆಯನ್ನು ತಯಾರಿಸಲಾಗುತ್ತದೆ.
6 / 8
ಚಂದೇರಿ ಸೀರೆಗಳನ್ನು ಮಧ್ಯಪ್ರದೇಶದ ಚಂದೇರಿಯಲ್ಲಿ ಶುದ್ಧ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಈ ಸೀರೆಯೂ ಸಾಕಷ್ಟು ಆರಾಮದಾಯಕವಾಗಿದ್ದು, ಬೇಸಿಗೆಯ ಸಮಯದಲ್ಲಿನ ಮದುವೆ ಮುಂತಾದ ಶುಭ ಕಾರ್ಯಕ್ರಮಗಳಿಗೆ ಒಂದು ಉತ್ತಮ ಆಯ್ಕೆಯಾಗಿದೆ.
7 / 8
ಬಲುಚಾರಿ ರೇಷ್ಮೆ ಸೀರೆಗಳು ಅದರ ಉತ್ತಮ ಗುಣಮಟ್ಟದಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಹಿಂದೂ ಪುರಾಣಗಳ ದೃಶ್ಯಗಳನ್ನು ಕೈಯಿಂದ ನೇಯ್ದ ವಿನ್ಯಾಸಗೊಳಿಸಲಾಗುತ್ತದೆ.