ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ; ಧುಮ್ಮುಕ್ಕಿ ಹರಿಯುತ್ತಿರುವ ಫಾಲ್ಸ್ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರು; ಇಲ್ಲಿದೆ ಫೋಟೋಸ್
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Aug 02, 2023 | 8:16 AM
ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿವೆ. ಬಹುತೇಕ ಜಲಾಶಯಗಳಿಂದ ನದಿಗಳಿಗೆ ನೀರು ಸಹಾ ಬಿಡಲಾಗುತ್ತಿದೆ. ಹೀಗಾಗಿ ಬತ್ತಿ ಹೋಗಿದ್ದ ಜಲಪಾತಗಳಿಗೆ ಜೀವಕಳೆ ಬಂದಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತಕ್ಕೂ ಕೂಡ ಜೀವಕಳೆ ಬಂದಿದ್ದು, ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ.
1 / 7
ಹಚ್ಚಹಸಿರಿನಿಂದ ಕಂಗೊಳಿಸುತ್ತಿರೋ ಅರಣ್ಯ ಪ್ರದೇಶ. ಕಾಡಿನ ಮಧ್ಯೆ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ನೀರು. ಜಲಪಾತವನ್ನ ವೀಕ್ಷಣೆ ಮಾಡುತ್ತಿರೋ ಪ್ರವಾಸಿಗರು. ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ.
2 / 7
ಹೌದು ಕಬಿನಿ ಹಾಗೂ ಕೆಆರ್ಎಸ್ ಜಲಾಶಯದಿಂದ ಕಪಿಲಾ ಹಾಗೂ ಕಾವೇರಿ ನದಿಗೆ ನೀರನ್ನ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಗಗನಚುಚ್ಚಿ ಜಲಪಾತಕ್ಕೆ ಜೀವಕಳೆ ಬಂದಿದೆ. ಕೆಲವೇ ದಿನಗಳ ಕೆಳಗೆ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಜಲಪಾತ ಇದೀಗ ಧುಮ್ಮುಕ್ಕುತ್ತಿದೆ.
3 / 7
ಹಾಲ್ನೋರೆಯಂತೆ ಮೇಲಿಂದ ಕೆಳಗೆ ಧುಮಕುವ ನೀರು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಸುತ್ತಲು ಅರಣ್ಯ ಪ್ರದೇಶ. ಅರಣ್ಯ ಪ್ರದೇಶದ ಮಧ್ಯೆ ಸುಂದರವಾಗಿ ಧುಮಕುತ್ತಿರೋ ಗಗನಚುಕ್ಕಿ ಜಲಪಾತವನ್ನ ನೋಡಲು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.
4 / 7
ಅಂದಹಾಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಸಿಲಿಕಾನ್ ಸಿಟಿ ಬೆಂಗಳೂರು, ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗಿ ವಿಕೆಂಡ್ ಸೇರಿದಂತೆ ಇತರೆ ದಿನಗಳನ್ನ ಎಂಜಾಯ್ ಮಾಡಲು ಅನೇಕ ಪ್ರವಾಸಿಗರು ಬರುತ್ತಾರೆ.
5 / 7
ಇದೀಗ ಸುತ್ತಲು ಅರಣ್ಯ ಪ್ರದೇಶ, ಪ್ರಕೃತಿ ಸೌಂದರ್ಯದ ಮಧ್ಯೆ ಧುಮ್ಮುಕ್ಕುವ ನೀರು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಇನ್ನು ಜಲಪಾತಕ್ಕೆ ಬಂದವರು, ಅದರ ಮುಂದೆ ನಿಂತು ಪೋಟೋಗಳನ್ನ ತೆಗೆದುಕೊಂಡು ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ.
6 / 7
ಅಲ್ಲದೆ ಜಲಪಾತ ನೋಡಲು ಬರುವವರು ಕುದುರೆ ಸವಾರಿ ಕೂಡ ಮಾಡಿ ಎಂಜಾಯ್ ಮಾಡುತ್ತಾರೆ. ಹೀಗಾಗಿ
ಕುಟುಂಬ ಸಮೇತ ಗಗನಚುಕ್ಕಿಗೆ ಆಗಮಿಸುತ್ತಾರೆ.
7 / 7
ಒಟ್ಟಾರೆ ವಿಕೆಂಡ್ ಸೇರಿದಂತೆ ಬೇರೆ ಬೇರೆ ದಿನಗಳಲ್ಲಿ ಸಾಕಷ್ಟು ಎಂಜಾಯ್ ಮಾಡಲು, ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದು, ಮತ್ತಷ್ಟು ಮಳೆ ಬಂದರೆ ಜಲಪಾತಕ್ಕೆ ಕಳೆ ಬರಲಿದೆ ಅಂತಾರೆ ಪ್ರವಾಸಿಗರು.
Published On - 8:10 am, Wed, 2 August 23