ಇಂದೇ ಹೊರಡಿ ಮಡಿಕೇರಿಗೆ! ಗ್ಲಾಸ್ ಬ್ರಿಡ್ಜ್ ಮೇಲಿಂದ ಬಗ್ಗಿ ನೋಡಿದರೆ ಎದೆ ಝಲ್ ಝಲ್​! ಇಲ್ಲಿದೆ ಒಂದು ಝಲಕ್​!

| Updated By: ಸಾಧು ಶ್ರೀನಾಥ್​

Updated on: Jun 14, 2023 | 10:32 AM

 Madikeri Glass Skywalk bridge: ಸುಂದರ ಪರಿಸರದ ಮಧ್ಯೆಯಿರುವ ಮಡಿಕೇರಿಯು ಪ್ರವಾಸಿಗರನ್ನು ಕೈಬೀಸಿ ಕರೆಯಲು ಇತ್ತೀಚೆಗೆ ನಾನಾ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಪ್ರಕೃತಿಯ ಸ್ವರ್ಗ ತಾಣವಾದ ಮಡಿಕೇರಿಗೆ ಟೂರ್ ಹೋಗುವವರಿಗಾಗಿ ಇದು ಖುಷಿಯ ಸುದ್ದಿ. ಕಾಫಿ ನಾಡಿನ ಸುಂದರ ಪರಿಸರವನ್ನ ಥ್ರಿಲ್ ಆಗಿ ಎಂಜಾಯ್​ ಮಾಡ್ಬೇಕು ಅಂತಿದ್ದರೆ ನಿಜಕೂ ನಿಮಗೆ ಇದು ಖುಷಿ ಕೊಡುವ ವಿಚಾರವೇ ಸರಿ. ಹಾಗಾದ್ರೆ ಅದೇನದು ಅಂತಹ ಖುಷಿಯ ವಿಚಾರ ಅನ್ನೋದನ್ನ ನೀವೇ ನೋಡಿ..

1 / 10

2 / 10
ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ. ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್... ಇದು ಯಾವುದೋ ವಿದೇಶದ ದೃಶ್ಯವಲ್ಲ... ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರೋದು ನಮ್ಮ ಮಡಿಕೇರಿಯಲ್ಲಿ..

3 / 10
ಹೌದು.. ಮಡಿಕೇರಿ ನಗರದಿಂದ 10 ಕಿಲೋ ಮೀಟರ್ ದೂರದ ಉಡೋತ್​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಈ ಗ್ರಾಮದ ವಸಂತ್ ಎಂಬುವವರು ಕಳೆದ ಐದು ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್ ಅನ್ನು ನಿರ್ಮಿಸಿದ್ದಾರೆ.

4 / 10
ಇದು 33 ಎಂಎಂ ದಪ್ಪದ ಗ್ಲಾಸ್ ಅನ್ನ ಬಳಸಲಾಗಿದ್ದು ಒಟ್ಟು  33 ಮೀಟರ್ ಉದ್ದವಿದ್ದು 78 ಅಡಿ ಎತ್ತರವಿದೆ (32-meter long glass skywalk bridge). ಇದು ಕರ್ನಾಟಕದಲ್ಲೇ ಮೊಟ್ಟ ಮೊದಲ ಗಾಜಿನ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ.

5 / 10
ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡದಾದ ಗ್ಲಾಸ್ ಬ್ರಿಡ್ಜ್​​​ ಅಂದರೆ ಇದೇ ಆಗಿದೆ. ಒಟ್ಟ 40 ಲಕ್ಷ ರೂ ವೆಚ್ಚ ಮಾಡಿ ಈ ಅದ್ಭುತವನ್ನ ನಿರ್ಮಿಸಿದ್ದಾರೆ ಗ್ಲಾಸ್ ಬಿಡ್ಜ್​ ಮಾಲಿಕ ವಸಂತ್.

6 / 10
ಮೊನ್ನೆ ಭಾನುವಾರ ಈ ಸೇತುವೆ ಲೋಕಾರ್ಪಣೆಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವ್ಯೂ ಪಾಯಿಂಟ್​ಗೆ ತಲುಪಿದ ಮೇಲೆ ಕೆಳಗೆ ಬಗ್ಗಿ ನೋಡಿದ್ರೆ... ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

7 / 10
ಈ ವ್ಯೂ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸೌಂದರ್ಯ ಕಾಣಿಸಿದ್ರೆ ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.

8 / 10

9 / 10
ಒಬ್ಬ ಪ್ರವಾಸಿಗೆ 200 ರೂಪಾಯಿಯಂತೆ ಚಾರ್ಜ್​ ಮಾಡಲಾಗುತ್ತದೆ. ಒಮ್ಮೆಗೆ ಕೇವಲ ಆರು ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

10 / 10
ಇಲ್ಲಿ ಕೇವಲ ಗ್ಲಾಸ್ ಬ್ರಿಡ್ಜ್ ಮಾತ್ರವಲ್ಲದೆ ಪ್ಲಾಂಟೇಷನ್ ಟೂರ್ ಕೂಡ ಲಭ್ಯವಿದೆ. ಕಾಫಿ ತೋಟದೊಳಗೆ ಒಂದು ರೌಡ್ ಹೊಡೆದು ಕೊಡಗಿನ ಕಾಫಿ ಬೆಳೆಯ ವೈವಿಧ್ಯತೆ ಬಗ್ಗೆ ಅರಿಯಲು ಅವಕಾಶವಿದೆ.  ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ.