ಅಂತೆ-ಕಂತೆಗಳಿಗೆ ತೆರೆ: ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ, ದಿಲ್ಲಿಯಿಂದಲೇ ಒಗ್ಗಟ್ಟು ಪ್ರದರ್ಶನ ಸಂದೇಶ

Updated on: May 18, 2023 | 12:05 PM

ಅಂತೂ ಇಂತೂ ಕರ್ನಾಟಕದ ಮುಂಖ್ಯಮಂತ್ರಿ ಯಾರು ಎನ್ನುವ ರಾಜ್ಯದ ಜನತ ಕಾತರಕ್ಕೆ ತೆರೆಬಿದ್ದಿದೆ. ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಮಧ್ಯೆ ಕಾಂಗ್ರೆಸ್​ ಹೈಕಮಾಂಡ್ ಸಂಧಾನ ಸೂತ್ರ ಯಶಸ್ವಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದು ದೆಹಲಿಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಬ್ರೇಕ್ ಬಿದ್ದಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ತೆರೆಮರೆಯಲ್ಲಿ ಪ್ರತ್ಯೇಕವಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದರು. ಅಂದಿನಿಂದ ಒಬ್ಬರಿಗೊಬ್ಬರು ಮುಖ ನೋಡಿರಲಿಲ್ಲ. ಇದೀಗ ಅಂತಿಮವಾಗಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಎಲ್ಲಾ ಗೊಂದಲಗಳನ್ನು ಬಗೆಹರಿಸಿದ್ದು, ಸಿದ್ದು, ಡಿಕೆಶಿ ಕೈ ಹಿಡಿದು ಮೇಲೆತ್ತಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಸಂದೇಶ ರವಾನಿಸಿದರು.

1 / 9
ಕಳೆದ ಕೆಲವು ದಿನಗಳಿಂದ ದೊಡ್ಡ ಕಗ್ಗಂಟಾಗಿದ್ದ ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಚಾರ ಕೊನೆಗೂ ಬಗೆಹರಿದಿದೆ.

2 / 9
ಅಂತೆ-ಕಂತೆಗಳಿಗೆ ತೆರೆ: ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ, ದಿಲ್ಲಿಯಿಂದಲೇ ಒಗ್ಗಟ್ಟು ಪ್ರದರ್ಶನ ಸಂದೇಶ

3 / 9
ಖರ್ಗೆ ಜೊತೆ ಸಿದ್ದು-ಡಿಕೆಶಿ

ಖರ್ಗೆ ಜೊತೆ ಸಿದ್ದು-ಡಿಕೆಶಿ

4 / 9
ಅಂತೆ-ಕಂತೆಗಳಿಗೆ ತೆರೆ: ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ, ದಿಲ್ಲಿಯಿಂದಲೇ ಒಗ್ಗಟ್ಟು ಪ್ರದರ್ಶನ ಸಂದೇಶ

5 / 9
ಈ ಮೂಲಕ ಕರ್ನಾಟಕದಲ್ಲಿ ಕೆಲ ಚರ್ಚೆಗಳಿಗೆ ಬ್ರೇಕ್ ಹಾಕಿದ್ದು, ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ದೆಹಲಿಯಿಂದಲೇ ಸಂದೇಶ ರವಾನಿಸಿದರು.

6 / 9
ಕಳೆದ ನಾಲ್ಕೈದು ದಿನಗಳ ನಿರಂತರ ಪ್ರತ್ಯೇಕ ಸರಣಿ ಸಭೆ ಬಳಿಕ ಸಂಧಾನ ಮಾಡಲಾಗಿದ್ದು, ಅಂತಿಮವಾಗಿ ಎಲ್ಲವೂ ಓಕೆ ಆದ ಬಳಿಕ ಕೆಸಿ ವೇಣುಗೋಪಾಲ್ ಅವರು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಉಪಹಾರಕೂಟ ಏರ್ಪಡಿಸುವ ಮೂಲಕ ಒಂದಾಗಿ ಸರ್ಕಾರ ನಡೆಸುವಂತೆ ಸಂದೇಶ ನೀಡಿದರು.

7 / 9
ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಜೊತೆ ಪ್ರತ್ಯೇಕ ಸಭೆ ಮಾಡಿದ್ದರು. ಆದರೂ ಡಿಕೆ ಶಿವಕುಮಾರ್​ ಸಿಎಂ ಸ್ಥಾನದ ಪಟ್ಟು ಸಡಿಸಿರಲಿಲ್ಲ.

8 / 9
ಅಂತೆ-ಕಂತೆಗಳಿಗೆ ತೆರೆ: ಕರ್ನಾಟಕದಲ್ಲಿ ಜೋಡೆತ್ತು ಸರ್ಕಾರ, ದಿಲ್ಲಿಯಿಂದಲೇ ಒಗ್ಗಟ್ಟು ಪ್ರದರ್ಶನ ಸಂದೇಶ

9 / 9
ಅಂತಿಮವಾಗಿ ಈ ಬಗ್ಗೆ ಡಿಕೆ ಶಿವಕುಮಾರ್ ಹೈಕಮಾಂಡ್​ ತೀರ್ಮಾನಕ್ಕೆ ಓಕೆ ಅಂದಿದ್ದರೆ, ಡಿಕೆ ಸುರೇಶ್ ನಮಗೆ ಸಂಪೂರ್ಣ ಸಂತೋಷವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.