ಅಲ್ಲಿ ಗೌಜು ಗದ್ದಲಾ ಮನೆ ಮಾಡಿತ್ತು. ಗ್ರಾಮದ ಒಂದು ಕೋಮಿನ ಯುವಕರೆಲ್ಲಾ ಕೈಯ್ಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು, ಕುಣಿದಾಡುತ್ತಿದ್ದರು. ಮಹಿಳೆ ಮಕ್ಕಳಾದಿಯಾಗಿ ಎಲ್ಲರೂ ಈ ದೃಶ್ಯವನ್ನು ಬಲು ಉತ್ಸಾಹದಿಂದಲೇ ನೋಡುತ್ತಿದ್ದರು. ನೋಡ ನೋಡುತ್ತಿದ್ದಂತೆ ಇನ್ನೊಂದೆಡೆ ದೇವರ ವೇಷವನ್ನು ಹಾಕಿಕೊಂಡ ವ್ಯಕ್ತಿಯೊಬ್ಬ ತನ್ನ ಕೈಯ್ಯಲ್ಲಿ ಬಡಿಗೆಯನ್ನು ಹಿಡಿದುಕೊಂಡು, ಯುವಕರ ಗುಂಪಿನ ಮೇಲೆ ಮುಗಿ ಬೀಳುತ್ತಾ ಹೊಡೆಯಲು ಪ್ರಾರಂಭಿಸುತ್ತಾನೆ. ಯುವಕರೂ ಅಷ್ಟೇ ಕೈಯ್ಯಲ್ಲಿರುವ ಬಡಿಗೆಗಳಿಂದಲೇ ರಕ್ಷಣೆ ಮಾಡಿಕೊಳ್ಳುತ್ತಾ, ಆತನನ್ನು ಕೆಣಕುತ್ತಾರೆ. ಇದೆಲ್ಲಾ ಕಂಡು ಬಂದಿದ್ದು ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ರೇವಣಸಿದ್ದನ ಜಾತ್ರೆಯಲ್ಲಿ. ಜಾತ್ರೆಯ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.