- Kannada News Photo gallery Cricket photos Kannada News | If SRH beat RCB, LSG or CSK will Officialy qualify for playoffs
IPL 2023: RCB ಸೋತರೆ, CSK ಮತ್ತು LSG ಪ್ಲೇಆಫ್ಗೆ ಎಂಟ್ರಿ..!
IPL 2023 Kannada: ಹೈದರಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ. ಏಕೆಂದರೆ ಫಾಫ್ ಡುಪ್ಲೆಸಿಸ್ ಪಡೆ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು.
Updated on: May 18, 2023 | 3:57 PM

IPL 2023: ಐಪಿಎಲ್ನ 65ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಇಂದು (ಮೆ 18) ಹೈದರಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ. ಏಕೆಂದರೆ ಫಾಫ್ ಡುಪ್ಲೆಸಿಸ್ ಪಡೆ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು.

ಆದರೆ ಇದೇ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕೂಡ ಎದುರು ನೋಡುತ್ತಿದೆ. ಈ ಪಂದ್ಯದಲ್ಲಿ ಆರ್ಸಿಬಿ ಸೋತರೆ ಸಿಎಸ್ಕೆ ಹಾಗೂ ಎಲ್ಎಸ್ಜಿ ತಂಡಕ್ಕೆ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ದೊರೆಯಲಿದೆ.

ಏಕೆಂದರೆ 15 ಅಂಕಗಳೊಂದಿಗೆ ಸಿಎಸ್ಕೆ ಹಾಗೂ ಎಲ್ಎಸ್ಜಿ ತಂಡಗಳು ಅಂಕ ಪಟ್ಟಿಯಲ್ಲಿ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದೆ. ಇತ್ತ ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ತಂಡ ಸೋತು ಮುಂದಿನ ಪಂದ್ಯವನ್ನು ಗೆದ್ದರೂ 14 ಪಾಯಿಂಟ್ಸ್ ಮಾತ್ರ ಆಗಲಿದೆ.

ಹೀಗಾಗಿ ಇಂದು ಸನ್ರೈಸರ್ಸ್ ಹೈದರಾಬಾದ್ ತಂಡ ಗೆದ್ದರೆ, ಅತ್ತ ಅಂಕಪಟ್ಟಿಯಲ್ಲಿ 15 ಪಾಯಿಂಟ್ಸ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ತಂಡಗಳು 3ನೇ ಹಾಗೂ 4ನೇ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

ಹಾಗೆಯೇ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಮುಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ 16 ಪಾಯಿಂಟ್ಸ್ ಕಲೆಹಾಕಿ ಪ್ಲೇಆಫ್ ಪ್ರವೇಶಿಸಬಹುದು. ಇದರ ಹೊರತಾಗಿ ಬೇರೆ ಯಾವುದೇ ತಂಡಕ್ಕೆ 16 ಪಾಯಿಂಟ್ಸ್ಗಳಿಸಲು ಅವಕಾಶ ಇರುವುದಿಲ್ಲ.

ಹೀಗಾಗಿಯೇ ಆರ್ಸಿಬಿ ತಂಡದ ಫಲಿತಾಂಶವು 15 ಅಂಕಗಳನ್ನು ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಎಂಟ್ರಿಯನ್ನು ನಿರ್ಧರಿಸಲಿದೆ. ಒಂದು ವೇಳೆ ಎಸ್ಆರ್ಹೆಚ್ ವಿರುದ್ಧ ಆರ್ಸಿಬಿ ಗೆದ್ದರೆ, ಸಿಎಸ್ಕೆ ಹಾಗೂ ಎಲ್ಎಸ್ಜಿ ತಂಡಗಳು ಮುಂದಿನ ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ಪ್ರವೇಶೀಸಬೇಕಾಗುತ್ತದೆ.









