ಮಂಗಳೂರು: ಕಾಲೇಜಿನ ಸಾಂಸ್ಕೃತಿಕ ಹಬ್ಬದಲ್ಲಿ ನವ ವಧುವರರಾಗಿ ಮಿಂಚಿದ ವಿದ್ಯಾರ್ಥಿಗಳು; ಅದರ ಝಲಕ್ ಇಲ್ಲಿದೆ ನೋಡಿ
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Feb 27, 2023 | 11:46 AM
ಇವರೆಲ್ಲರೂ ಒಂದೇ ಕಾಲೇಜಿನಲ್ಲಿ ಒಟ್ಟಾಗಿ ಕಲಿಯೋ ವಿದ್ಯಾರ್ಥಿಗಳು. ಆದ್ರೆ ಇವತ್ತು ಒಂದು ದಿನದ ಮಟ್ಟಿಗೆ ಆ ಸ್ಟೂಡೆಂಟ್ಸ್ ಸಾಂಸ್ಕೃತಿಕ ವೇದಿಕೆಯಲ್ಲಿ ನವ ವಧು-ವರರಾಗಿ ಬದಲಾಗಿದ್ರು. ವಿಭಿನ್ನ ವೇಷ-ಭೂಷಣ ತೊಟ್ಟು ಸ್ಟೇಜ್ ಮೇಲೆ ಕೈಕೈ ಹಿಡಿದು ಹೆಜ್ಜೆ ಹಾಕಿದ್ರು.
1 / 8
ಕಾಲೇಜು ಅಂದ್ಮೇಲೆ ವರ್ಷಕ್ಕೊಮ್ಮೆ ಬರೋ ಸಾಂಸ್ಕೃತಿಕ ಹಬ್ಬಗಳು ಸಾಮಾನ್ಯ. ಈ ವೇಳೆ ಪ್ರತೀನಿತ್ಯ ಪಠ್ಯ ಚಟುವಟಿಕೆಗಳಲ್ಲೇ ಕಾಲ ಕಳೆಯೋ ವಿದ್ಯಾರ್ಥಿಗಳು ವೇದಿಕೆ ಹತ್ತಿ ಪ್ರತಿಭೆಗಳನ್ನ ಪ್ರದರ್ಶಿಸೋದು ಸಹಜ. ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ಕರಾವಳಿ ಗ್ರೂಪ್ ಆಫ್ ಕಾಲೇಜು ಮಾತ್ರ ತನ್ನ ಸಾಂಸ್ಕೃತಿಕ ಹಬ್ಬದಲ್ಲಿ ವಿಶಿಷ್ಟ ಪ್ರಯೋಗಕ್ಕೆ ಸಾಕ್ಷಿಯಾಗಿದೆ.
2 / 8
ಕಾಲೇಜಿನಲ್ಲಿ ಫೆ.25 ರಂದು ಆಯೋಜಿಸಿದ್ದ ಕೈಜನ್ 2023 ಅನ್ನೋ ಸಾಂಸ್ಕತಿಕ ಹಬ್ಬದಲ್ಲಿ ಕಾಲೇಜು ಸ್ಟೂಡೆಂಟ್ಸ್ ನವ ವಧುವರರಾಗಿ ಬದಲಾಗಿದ್ರು. ಹೀಗಾಗಿ ಕಾಲೇಜಿನ ಒಂದಷ್ಟು ವಿದ್ಯಾರ್ಥಿಗಳು ತಮ್ಮ ಜೋಡಿಯನ್ನ ಆಯ್ಕೆ ಮಾಡಿಕೊಂಡು ವಿಭಿನ್ನ ವೇಷ ಭೂಷಣ ತೊಟ್ಟು ವೇದಿಕೆಯೇರಿದ್ರು.
3 / 8
ನವ ವಧುವರರನ್ನೂ ನಾಚಿಸೋವಂತೆ ರೆಡಿಯಾಗಿದ್ದ ಜೋಡಿಗಳು ಕೈ ಕೈ ಹಿಡಿದು ವೇದಿಕೆ ಮೇಲೆ ಹೆಜ್ಜೆ ಹಾಕಿದ್ರು. ವಿದ್ಯಾರ್ಥಿಗಳ ಫ್ಯಾಶನ್ ಪ್ರತಿಭೆಯನ್ನ ಅನಾವರಣಗೊಳಿಸೋ ಉದ್ದೇಶದಿಂದ ಕಾಲೇಜಿನಲ್ಲಿ ಇಂಥದ್ದೊಂದು ವಿಭಿನ್ನತೆಗೆ ವೇದಿಕೆ ಕಲ್ಪಿಸಲಾಗಿತ್ತು.
4 / 8
ಫ್ಯಾಶನ್ ಅಂದ್ರೆ ಆಶ್ಲೀಲತೆ ಅನ್ನೋದನ್ನ ತೊಡೆದು ಹಾಕಿ, ಅಪ್ಪಟ ಸಂಸ್ಕಾರವಂತರಾಗಿ ವಿದ್ಯಾರ್ಥಿಗಳನ್ನ ಕಾಲೇಜು ರೆಡಿ ಮಾಡಿತ್ತು. ಹೀಗಾಗಿ ದೇಶದ ನಾನಾ ಕಡೆಗಳ ವಧು-ವರರು ಹೇಗಿರ್ತಾರೆ ಅನ್ನೋದು ವಿದ್ಯಾರ್ಥಿಗಳು ವೇದಿಕೆ ಮೇಲೆ ಸಾದರಪಡಿಸಿ ಖುಷಿ ಪಟ್ರು.
5 / 8
ಭಾರತೀಯ ಸಂಸ್ಕೃತಿಯಂತೆ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ಥ ನವ ವಧು-ವರರ ವೇಷಭೂಷಣ, ಕೇರಳ, ಗುಜರಾತ್, ನೇಪಾಳಿ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿನ ವಧುವರರ ವೇಷ ಭೂಷಣ ತೊಟ್ಟು ವಿದ್ಯಾರ್ಥಿಗಳು ವೇದಿಕೆ ಏರಿದ್ರು.
6 / 8
ಈ ಮಧ್ಯೆ ಕೈ ಕೈ ಹಿಡಿದು ವೇದಿಕೆ ಮೇಲೆ ಹೆಜ್ಜೆ ಹಾಕಿದ ಜೋಡಿಗಳು ಪಕ್ಕಾ ಗಂಡ-ಹೆಂಡತಿಯಂತೆ ನಾಚಿ ನೀರಾಗಿದ್ದು ವಿಶೇಷವಾಗಿತ್ತು. ಅದ್ರಲ್ಲೂ ಇವ್ರ ಈ ವಿಭಿನ್ನ ವೇಷ ಭೂಷಣ ಕಂಡು ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕರ ಜೊತೆ ಕಾಲೇಜಿನ ಉಳಿದ ವಿದ್ಯಾರ್ಥಿಗಳು ಕೂಡ ಸಖತ್ ಎಂಜಾಯ್ ಮಾಡಿದ್ರು.
7 / 8
ಇನ್ನು ಈ ಮಕ್ಕಳು ವೇದಿಕೆ ಮೇಲೆ ಪ್ರದರ್ಶಿಸಿದ ನವ ವಧುವರರ ಅಷ್ಟೂ ವೇಷ ಭೂಷಣಗಳನ್ನ ಸಿದ್ದಪಡಿಸಿರೋದು ಕೂಡ ಇದೇ ಕರಾವಳಿ ಕಾಲೇಜಿನ ಫ್ಯಾಶನ್ ವಿಭಾಗದ ವಿದ್ಯಾರ್ಥಿಗಳು. ಈ ಮಧ್ಯೆ ಬೇರೆ ತರಹೇವಾರಿ ವಸ್ತ್ರ ತೊಟ್ಟ ಹೆಣ್ಮಕ್ಕಳು ಕೂಡ ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡಿ ರಂಜಿಸಿದ್ರು.
8 / 8
ಇನ್ನು ಈ ಮಕ್ಕಳು ವೇದಿಕೆ ಮೇಲೆ ಪ್ರದರ್ಶಿಸಿದ ನವ ವಧುವರರ ಅಷ್ಟೂ ವೇಷ ಭೂಷಣಗಳನ್ನ ಸಿದ್ದಪಡಿಸಿರೋದು ಕೂಡ ಇದೇ ಕರಾವಳಿ ಕಾಲೇಜಿನ ಫ್ಯಾಶನ್ ವಿಭಾಗದ ವಿದ್ಯಾರ್ಥಿಗಳು. ಈ ಮಧ್ಯೆ ಬೇರೆ ತರಹೇವಾರಿ ವಸ್ತ್ರ ತೊಟ್ಟ ಹೆಣ್ಮಕ್ಕಳು ಕೂಡ ವೇದಿಕೆ ಮೇಲೆ ಕ್ಯಾಟ್ ವಾಕ್ ಮಾಡಿ ರಂಜಿಸಿದ್ರು.