Mango Seeds: ಮಾವು ತಿಂದು ಗೊರಟೆ ಬಿಸಾಡಬೇಡಿ, ಇದರ ಹಿಂದಿದೆ ಅಚ್ಚರಿಯ ಆರೋಗ್ಯ ಪ್ರಯೋಜನ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 29, 2024 | 12:18 PM

ಮಾವಿನ ಹಣ್ಣು ಮಾತ್ರವಲ್ಲ ಅದರ ಬೀಜ ಅಥವಾ ಗೊರಟೆಯು ಸಹ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಸಾಮಾನ್ಯವಾಗಿ ಮಾವಿನ ಕಾಯಿ ತಿಂದ ನಂತರ ಅದನ್ನು ಎಸೆಯುತ್ತೇವೆ. ಆದರೆ ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಮಾವಿನ ಬೀಜಗಳನ್ನು ಪರಿಣಾಮಕಾರಿ ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

1 / 6
ಮಾವಿನಹಣ್ಣುಗಳನ್ನು ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿಯೇ ಮಾವನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾಗಿದ ಮಾವಿನಹಣ್ಣುಗಳು ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿ. ಅದರಲ್ಲಿಯೂ ಇದರ ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

2 / 6
ಆದರೆ ನಿಮಗೆ ಗೊತ್ತಾ? ಮಾವಿನ ಹಣ್ಣು ಮಾತ್ರವಲ್ಲ ಅದರ ಬೀಜ ಅಥವಾ ಗೊರಟೆಯು ಸಹ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಸಾಮಾನ್ಯವಾಗಿ ಮಾವಿನ ಕಾಯಿ ತಿಂದ ನಂತರ ಅದನ್ನು ಎಸೆಯುತ್ತೇವೆ. ಆದರೆ ಆಯುರ್ವೇದ ತಜ್ಞರ ಪ್ರಕಾರ, ಮಾವಿನ ಬೀಜಗಳನ್ನು ಪರಿಣಾಮಕಾರಿ ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತದೆ.

3 / 6
ಮಾವಿನ ಬೀಜಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ರಕ್ತಹೀನತೆ ಮತ್ತು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಮಾತ್ರ ಇದರ ಸೇವನೆ ಮಾಡಬಾರದು. ಏಕಂದರೆ ಇದರಿಂದ ರಕ್ತದೊತ್ತಡದ ಮಟ್ಟವು ಮತ್ತಷ್ಟು ಕಡಿಮೆಯಾಗುವ ಅಪಾಯವಿದೆ.

4 / 6
ಮಾವಿನ ಬೀಜಗಳು ವಿವಿಧ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾವಿನ ಬೀಜಗಳು ತುಂಬಾ ಉಪಯುಕ್ತವಾಗಿದ್ದರೂ ಕೂಡ ಅವುಗಳನ್ನು ನೇರವಾಗಿ ತಿನ್ನಲು ಸಾಧ್ಯವಿಲ್ಲ. ಅವುಗಳನ್ನು ಜಜ್ಜಿ ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನ ಜೊತೆಯಲ್ಲಿ ತಿನ್ನುವುದು ಪ್ರಯೋಜನಕಾರಿಯಾಗಿದೆ. ಮಾವಿನಕಾಯಿ ಇದ್ದಾಗ ಮಾತ್ರ, ಈ ಬೀಜಗಳನ್ನು ಸೇವಿಸಬಹುದು. ಹಣ್ಣಾದ ಬಳಿಕ ಅದನ್ನು ಒಣಗಿಸಿ  ಪುಡಿ ಮಾಡಿ ಬಳಿಕ ಬಳಸಬಹುದು.

5 / 6
ಈ ಬೀಜಗಳಿಂದ ಮಾಡಿಟ್ಟುಕೊಂಡ ಪುಡಿಯನ್ನು ನೀವು ತಲೆಯ ಹೊಟ್ಟು ನಿವಾರಣೆಗೆ, ಚರ್ಮದ ಕಾಂತಿ ಹೆಚ್ಚಿಸಲು ಬಳಸಿಕೊಳ್ಳಬಹುದು. ಇದು ಕೇವಲ ಆರೋಗ್ಯ ಸಮಸ್ಯೆಗೆ ಮಾತ್ರವಲ್ಲ, ಸರಿಯಾದ ರೀತಿಯಲ್ಲಿ ಬಳಸಿದರೆ ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

6 / 6
ಮಾವಿನ ಬೀಜಗಳು ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೆ ಒಳ್ಳೆಯದು ಆದರೆ ಮಧುಮೇಹಿಗಳಿಗಲ್ಲ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹಿಗಳು ಮಾವಿನ ಬೀಜಗಳ ಸೇವನೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.