ಚೊಚ್ಚಲ ಬಾರಿಗೆ ಫೈನಲ್ ತಲುಪಿ ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ ತಂಡ 1.28 ಮಿಲಿಯನ್ ಡಾಲರ್ (ಸುಮಾರು 10.67 ಕೋಟಿ ರೂಪಾಯಿ) ಪಡೆದಿದ್ದು, ಇದು ಚಾಂಪಿಯನ್ ತಂಡದ ಅರ್ಧದಷ್ಟು ಬಹುಮಾನದ ಮೊತ್ತವಾಗಿದೆ. ಇದಲ್ಲದೇ 8 ಪಂದ್ಯ ಗೆದ್ದಿದ್ದಕ್ಕೆ ಪ್ರತ್ಯೇಕವಾಗಿ ಸುಮಾರು 2.07 ಕೋಟಿ ರೂ. ಸಂಪಾದಿಸಿದ್ದು, ಈ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಒಟ್ಟು 12.7 ಕೋಟಿ ರೂ. ಬಹುಮಾನ ಪಡೆದಿದೆ.