AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024 Prize Money: ಚಾಂಪಿಯನ್ ಭಾರತಕ್ಕೆ 22.76 ಕೋಟಿ..! ಉಳಿದ ತಂಡಗಳಿಗೆ ಸಿಕ್ಕಿದೆಷ್ಟು?

T20 World Cup 2024 Prize Money: ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. ಇದೀಗ ಈ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಐಸಿಸಿಯಿಂದ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.42 ಕೋಟಿ ಬಹುಮಾನ ಪಡೆದಿದೆ. ಇದಲ್ಲದೇ ಭಾರತ ತಂಡ ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ ಅಂದಾಜು 26 ಲಕ್ಷ ರೂ. ಪಡೆದಿದೆ. ಇವೆಲ್ಲವನ್ನೂ ಸೇರಿಸಿದರೆ ಭಾರತ ತಂಡ ಈ ಟೂರ್ನಿಯಿಂದ 22.76 ಕೋಟಿ ರೂ. ಗಳಿಸಿದೆ.

ಪೃಥ್ವಿಶಂಕರ
|

Updated on: Jun 30, 2024 | 1:16 AM

Share
2024ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಮತ್ತು ಫೈನಲ್‌ನಲ್ಲೂ ಇದೇ ಟ್ರೆಂಡ್‌ ಮುಂದುವರಿಸಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 17 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ.

1 / 8
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗ್ರೂಪ್ ಸ್ಟೇಜ್ ಮತ್ತು ಸೂಪರ್-8ನಲ್ಲಿ ಎದುರಿಸಿದ ಪ್ರತಿ ಎದುರಾಳಿಯನ್ನು ಸೋಲಿಸಿತು. ಇದಾದ ಬಳಿಕ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡವನ್ನು ಸೆಮಿಫೈನಲ್‌ನಲ್ಲೂ ಭಾರತ ತಲೆಬಾಗುವಂತೆ ಮಾಡಿತ್ತು. ಇದೀಗ ಅತಿ ದೊಡ್ಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದುಕೊಂಡಿದೆ.

2 / 8
ಟೀಂ ಇಂಡಿಯಾ 17 ವರ್ಷಗಳ ನಂತರ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. ಇದೀಗ ಈ ಟ್ರೋಫಿಯೊಂದಿಗೆ ಟೀಂ ಇಂಡಿಯಾ ಐಸಿಸಿಯಿಂದ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.42 ಕೋಟಿ ಬಹುಮಾನ ಪಡೆದಿದೆ.

3 / 8
ಇದಲ್ಲದೇ ಭಾರತ ತಂಡ ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ ಅಂದಾಜು 26 ಲಕ್ಷ ರೂ. ಪಡೆದಿದೆ. ಇವೆಲ್ಲವನ್ನೂ ಸೇರಿಸಿದರೆ ಭಾರತ ತಂಡ ಈ ಟೂರ್ನಿಯಿಂದ 22.76 ಕೋಟಿ ರೂ. ಗಳಿಸಿದೆ.

4 / 8
ಚೊಚ್ಚಲ ಬಾರಿಗೆ ಫೈನಲ್ ತಲುಪಿ ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ ತಂಡ 1.28 ಮಿಲಿಯನ್ ಡಾಲರ್ (ಸುಮಾರು 10.67 ಕೋಟಿ ರೂಪಾಯಿ) ಪಡೆದಿದ್ದು, ಇದು ಚಾಂಪಿಯನ್ ತಂಡದ ಅರ್ಧದಷ್ಟು ಬಹುಮಾನದ ಮೊತ್ತವಾಗಿದೆ. ಇದಲ್ಲದೇ 8 ಪಂದ್ಯ ಗೆದ್ದಿದ್ದಕ್ಕೆ ಪ್ರತ್ಯೇಕವಾಗಿ ಸುಮಾರು 2.07 ಕೋಟಿ ರೂ. ಸಂಪಾದಿಸಿದ್ದು, ಈ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಒಟ್ಟು 12.7 ಕೋಟಿ ರೂ. ಬಹುಮಾನ ಪಡೆದಿದೆ.

5 / 8
ಸೆಮಿಫೈನಲ್‌ನಲ್ಲಿ ಸೋತ ಪ್ರತಿ ತಂಡಗಳಿಗೆ ಐಸಿಸಿ 6.56 ಕೋಟಿ ರೂಗಳನ್ನು ಬಹುಮಾನವನ್ನು ಇರಿಸಿತ್ತು. ಅದರಂತೆ ಸೆಮಿಫೈನಲ್‌ನಲ್ಲಿ ಸೋತ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಲಾ 6.56 ಕೋಟಿ ರೂ. ಬಹುಮಾನವಲ್ಲದೆ, ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕ 26 ಲಕ್ಷ ರೂ. ಬಹುಮಾನ ಪಡೆದಿವೆ.

6 / 8
ಸೂಪರ್-8 ಸುತ್ತಿನಿಂದ ಹೊರಬಿದ್ದ ಪ್ರತಿ ತಂಡಕ್ಕೆ ಸುಮಾರು 3.18 ಕೋಟಿ ರೂ. ಬಹುಮಾನ ನೀಡಲಾಗಿದೆ. ಈ ಬಹುಮಾನ ಪಡೆದ ತಂಡಗಳಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಮೆರಿಕ ಸೇರಿವೆ. ಇದಲ್ಲದೆ ಈ ತಂಡಗಳು ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ 26 ಲಕ್ಷ ರೂ. ಬಹುಮಾನ ಪಡೆದಿವೆ.

7 / 8
ಗ್ರೂಪ್ ಹಂತದಿಂದ ಹೊರಗುಳಿದಿದ್ದ ತಂಡಕ್ಕೆ ಬರಿಗೈಯಲ್ಲಿ ಹೋಗಲು ಐಸಿಸಿ ಅವಕಾಶ ನೀಡಿಲ್ಲ. ಅಂದರೆ ಐಸಿಸಿ 9 ರಿಂದ 12 ನೇ ಸ್ಥಾನ ಪಡೆದ ತಂಡಗಳಿಗೆ ಪ್ರತಿ ಪಂದ್ಯದ ಗೆಲುವಿಗೆ 26 ಲಕ್ಷ ರೂಪಾಯಿಗಳ ಜೊತೆಗೆ ಸುಮಾರು 2.06 ಕೋಟಿ ರೂ. ಬಹುಮಾನ ನೀಡಿದೆ. ಹಾಗೆಯೇ 13 ರಿಂದ 20 ನೇ ಸ್ಥಾನ ಪಡೆದ ತಂಡಗಳಿಗೆ 26 ಲಕ್ಷ ರೂ. ಜೊತೆಗೆ ಸುಮಾರು 1.87 ಕೋಟಿ ರೂ. ನೀಡಲಾಗಿದೆ.

8 / 8
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ

ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!

ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?

ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್