ನೋಟುಗಳ ಮೇಲೆ ಸಹಿ ಹಾಕಿದ ದೇಶದ ಏಕೈಕ ಪ್ರಧಾನಿ ಮನಮೋಹನ್​ ಸಿಂಗ್​! ಇಲ್ಲಿದೆ ಕಾರಣ

|

Updated on: Dec 27, 2024 | 11:54 AM

ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಷ್ಟ್ರ ಶೋಕಾಚರಣೆ ನಡೆಸುತ್ತಿದೆ. ಎರಡು ಬಾರಿ ಪ್ರಧಾನಿಯಾಗಿದ್ದ ಅವರು ಭಾರತದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಆಡಳಿತಾವಧಿಯ ಸುಧಾರಣೆಗಳು ಹಾಗೂ ಆರ್ಥಿಕ ನೀತಿಗಳು ಇಂದಿಗೂ ಪ್ರಸ್ತುತ. ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​ ಅವರ ಸಹಿ ಹಳೆಯ ನೋಟುಗಳಲ್ಲಿ ಕಾಣಬಹುದು. ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್ ಅವರ ​ಸಹಿ ಹಳೆಯ ನೋಟಿನ ಮೇಲೆ ಇರುವುದು ಏಕೆ? ಇಲ್ಲಿದೆ ಕಾರಣ.

1 / 6
ದೇಶದ ಅತ್ಯಂತ ಮೇಧಾವಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್​ ಸಿಂಗ್​ ನಿಧನಕ್ಕೆ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಎರಡು ಬಾರಿ ದೇಶದ ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​ ಅವರ ಯೋಜನೆಗಳು ಇಂದಿಗೂ ಮುಂದುವರೆದಿವೆ. ತಮ್ಮ ಆಡಳಿತಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ಮನಮೋಹನ್ ಸಿಂಗ್​ ತಂದಿದ್ದಾರೆ.

2 / 6
ಮನಮೋಹನ್​ ಸಿಂಗ್​ ಆರ್ಥಿಕ ಸಚಿವರಾಗಿಯೂ ದೇಶದಲ್ಲಿ ಅರ್ಥಕ್ರಾಂತಿಯನ್ನೇ ಸೃಷ್ಟಿಸಿದ್ದರು. ದಿವಾಳಿಯಂಚಿನಲ್ಲಿದ್ದ ದೇಶವನ್ನು ಜಗ್ಗತ್ತಿನಲ್ಲಿ ಎರಡನೇ ಅಭಿವೃದ್ಧಿ ಹೊಂದಿತ್ತಿರುವ ರಾಷ್ಟ್ರವನ್ನಾಗಿಸಿದ ಕೀರ್ತಿ ಮನಮೋಹನ್​ ಸಿಂಗ್​ಗೆ ಸಲ್ಲುತ್ತದೆ. ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​ ಅವರ ಸಹಿ ಹಳೇಯ ನೋಟುಗಳಲ್ಲಿ ಕಾಣಬಹುದು.

3 / 6
ದೇಶದ ರೂಪಾಯಿಗೆ ಸಹಿ ಹಾಕುವ ಹಕ್ಕು ಕೇವಲ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್​ಗೆ ಮಾತ್ರ ಇರುತ್ತದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಪ್ರತಿಯೊಂದು ನೋಟುಗಳ ಮೇಲೆ ರಿಸರ್ವ್ ಬ್ಯಾಂಕ್ ಗವರ್ನರ್ ಅವರ ಸಹಿ ಇದೆ. ಹಾಗಿದ್ದರೆ, ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್ ಅವರ ​ಸಹಿ ಹಳೆಯ ನೋಟಿನ ಮೇಲೆ ಇರುವುದು ಏಕೆ? ಇಲ್ಲಿದೆ ಕಾರಣ.

4 / 6
ಮನಮೋಹನ್ ಸಿಂಗ್ ಪ್ರಧಾನಿ, ಹಣಕಾಸು ಸಚಿವರಾಗುವ ಮುನ್ನ ಮನಮೋಹನ್ ಸಿಂಗ್ ಅವರು ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅಂದರೆ 1982ರಲ್ಲಿ ಆರ್‌ಬಿಐ ಗವರ್ನರ್ ಹುದ್ದೆಗೇರಿದರು. 1982 ರಿಂದ 1985ರವರೆಗೆ ಮನಹೋನ್​ ಸಿಂಗ್​ ಆರ್​​​ಬಿಐ ಗವರ್ನರ್​ ಆಗಿದ್ದರು. ಈ ಕಾಲಾವಧಿಯಲ್ಲಿ ಮುದ್ರಿತವಾದ ನೋಟುಗಳ ಮೇಲೆ ಮನಹೋನ್​ ಸಿಂಗ್ ಸಹಿ ಇದೆ.

5 / 6
ಮನಮೋಹನ್‌ ಸಿಂಗ್ ಪಂಜಾಬ್ ವಿವಿಗೆ ಪ್ರವೇಶ ಪಡೆದು, 1952 ಮತ್ತು 1954ರಲ್ಲಿ ಕ್ರಮವಾಗಿ ಅರ್ಥಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್‌ಗೆ ತೆರಳಿ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು.   ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಿಫಿಲ್ (ಡಾಕ್ಟರ್ ಆಫ್ ಫಿಲಾಸಫಿ)ಯನ್ನು ಪೂರೈಸಿದರು.

6 / 6
ಮನಮೋಹನ್​ ಸಿಂಗ್​ 1990 ರಿಂದ 1991 ರವರೆಗೆ ಪ್ರಧಾನ ಮಂತ್ರಿಗಳ ಹಣಕಾಸು ಸಲಹೆಗಾರರಾಗಿದ್ದರು. 1991ರಲ್ಲಿ ಹಣಕಾಸು ಸಚಿವರಾಗುವವರೆಗೆ ಯುಜಿಸಿಗೆ ಮೂರು ತಿಂಗಳ ಕಾಲ ಅಧ್ಯಕ್ಷರಾಗಿದ್ದರು.

Published On - 11:51 am, Fri, 27 December 24