
ರಾಜ್ಯದಲ್ಲಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನಾಳ್ ಬಳಿಯ ಪಕ್ಷಿಧಾಮದಲ್ಲಿ ಹಕ್ಕಿಗಳ ಕಲರವ ನೋಡುಗರ ಕಣ್ಮನ ಸೆಳೆಯುತ್ತಿವೆ. ವಿವಿಧ ಜಾತಿಯ, ಬಗೆ ಬಗೆಯ ಹಕ್ಕಿಗಳ ತುಂಟಾಟ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಸ್ಥಳೀಯ ಪಕ್ಷಿಗಳ ಜೊತೆ ವಿದೇಶಿ ಹಕ್ಕಿಗಳೂ ಕಣ್ಣಿಗೆ ಆನಂದ ನೀಡುತ್ತಿವೆ.

ಪಕ್ಷಿಧಾಮದ ಸುತ್ತಮುತ್ತ ಹಚ್ಚಹಸಿರಿನ ಮಾತಾವಾರಣ ಇರುವ ಕಾರಣ ಹಕ್ಕಿಗಳು ಇಲ್ಲೇ ಆಹಾರ ಸಂಗ್ರಹ ಮಾಡುತ್ತವೆ. ಪಕ್ಷಿಧಾಮಕ್ಕೆ ಬೆಳಗ್ಗಿನ ಹೊತ್ತು ಭೇಟಿ ನೀಡಿದವರಿಗೆ ಈ ಹಕ್ಕಿಗಳ ಕಲರವ ನೋಡುವ ಸೌಭಾಗ್ಯ ಸಿಗಲಿದೆ. ಸ್ವಚ್ಚಂದವಾದ ಆಕಾಶದಲ್ಲಿ ಹಾರುತ್ತಾ, ಕೆರೆಯಲ್ಲಿ ಕೂಲ್ ಕೂಲ್ ಆಗಿ ಈಜುವ ಪಕ್ಷಿಗಳನ್ನು ನೋಡಬಹುದಾಗಿದೆ.

ಈ ಪಕ್ಷಿಧಾಮಕ್ಕೆ ಪ್ರತಿವರ್ಷ ನವೆಂಬರ್‌ನಿಂದ ಫೆಬ್ರವರಿವರೆಗೆ ವಿದೇಶಿ ಹಕ್ಕಿಗಳ ವಲಸೆ ಜೋರಾಗಿರುತ್ತೆ. ವಿಶೇಷವಾಗಿ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಂದ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ. ಹೀಗಾಗಿ ಚಿತ್ರದಲ್ಲಷ್ಟೇ ನೋಡಿದ್ದ ವಿವಿಧ ಹಕ್ಕಿಗಳನ್ನು ನೈಜವಾಗಿ ನೋಡಿ ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುವ ವೀಕ್ಷಕರ ಸಂಖ್ಯೆಯೂ ದೊಡ್ಡದಿದೆ.

ಕಾಮನ್ ಕೂಟ್, ಪರ್ಪಲ್ ಮೋರ್, ಹೆನ್ ಸ್ಟ್ರೋಕ್, ಪೈಡ್ ಕಿಂಗ್ ಪೀಶರ್, ಪೊಂಡ್ ಹಿರೊನ್, ಇಗ್ರೇಟ್, ಡಾರ್ಟರ್, ಕರ್ಮೋರಾಂಟ್ಸ್, ವಾಟರ್ ಹೆನ್, ಬ್ಲಾಕ್ ಹೆಡೆಡ್ ಐಬಿಸ್, ಲಾಪವಿಂಗ್, ರೀವರ್ ಟರ್ನ್ ಹಾಗೂ ವಾಗ್ಟೈಲ್ ಸೇರಿದಂತೆ ವೈವಿಧ್ಯಮವಯವಾದ ವಿದೇಶಿ ಪಕ್ಷಿಗಳು ಈ ಸಮಯದಲ್ಲಿ ಪಕ್ಷಿಧಾಮದಲ್ಲಿ ಕಾಣಸಿಗಲಿದೆ.

ಇನ್ನು ವಲಸೆ ಹಕ್ಕಿಗಳ ಕಲರವದ ಹಿನ್ನಲೆ ಬೋನಾಳ್ ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ವೀಕೆಂಡ್ ಸೇರಿ ರಜಾ ದಿನಗಳಲ್ಲಿ ಕುಟುಂಬ ಸಮೇತ ಬಂದು ನೂರಾರು ಮಂದಿ ಈ ಪರಿಸರದಲ್ಲಿ ವಿಹರಿಸುತ್ತಿದ್ದಾರೆ. ಯಾದಗಿರಿಯಲ್ಲಿ ಇಂತಹ ಅದ್ಭುತ ದೃಶ್ಯ ನೋಡಲು ಸಿಗ್ತಿರೋದೆ ನಮ್ಮ ಪುಣ್ಯ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Published On - 2:46 pm, Mon, 24 November 25