ನಂದಿಧ್ವಜ ಹರಾಜಿನಲ್ಲಿ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆ ಹಿಂದೆ ಬಿದ್ದು ದಾಖಲೆ ಮೊತ್ತದಲ್ಲಿ ರಥದ ನಂದಿಧ್ವಜ ಖರೀದಿಸಿದ ಹಾಲಿ ಶಾಸಕ

|

Updated on: Feb 28, 2023 | 3:11 PM

ನಂದಿಧ್ವಜ ಹರಾಜಿನಲ್ಲಿ ಗೆದ್ದವರು ಶಾಸಕರಾಗುತ್ತಾರೆಂಬ ನಂಬಿಕೆ ಇರುವ ಹಿನ್ನೆಲೆ 16 ಲಕ್ಷಕ್ಕೆ ರಥದ ನಂದಿಧ್ವಜ ದಾಖಲೆಯ ಮಟ್ಟದಲ್ಲಿ ಶಾಸಕ ರಂಗನಾಥ್ ಖರೀದಿಸಿದ್ದಾರೆ.

1 / 6
ನಂದಿಧ್ವಜ ಹರಾಜಿನಲ್ಲಿ ಗೆದ್ದವರು ಶಾಸಕರಾಗುತ್ತಾರೆಂಬ ನಂಬಿಕೆ ಇರುವ ಹಿನ್ನೆಲೆ ನಂದಿ ಧ್ವಜಕ್ಕಾಗಿ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಪೈಪೋಟಿ ನಡೆದಿದೆ. ಇದರಿಂದಾಗಿ 16 ಲಕ್ಷಕ್ಕೆ ರಥದ ನಂದಿಧ್ವಜ ದಾಖಲೆಯ ಮಟ್ಟದಲ್ಲಿ ಮಾರಾಟವಾದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಗ್ಗೆರೆಯಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.

2 / 6
ಅದು ಪ್ರಸಿದ್ಧವಾದ ದೇವರ ಜಾತ್ರೆ ಮಹೋತ್ಸವ, ಸಾಕಷ್ಟು ನಂಬಿಕೆಗಳು ಅಲ್ಲಿ ನಡೆಯುತ್ತವೆ. ಲಕ್ಷಾಂತರ ಭಕ್ತರು ಅಲ್ಲಿಗೆ ಬಂದು ಪೂಜೆ ಮಾಡುತ್ತಾರೆ. ಅದರಂತೆ ನಿನ್ನೆ(ಫೆ.27) ರಥೋತ್ಸವ ನಡೆದಿದ್ದು, ರಥೋತ್ಸವದ ನಂದಿಧ್ವಜ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.

3 / 6
ಸಂಪ್ರದಾಯದಂತೆ ಪ್ರತಿವರ್ಷ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ ನಡೆಯುತ್ತದೆ. ಅದರಂತೆ ನಿನ್ನೆ ಸಿದ್ದಲಿಂಗೇಶ್ವರ ಜಾತ್ರೆ ನಡೆದಿದೆ. ಈ ವೇಳೆ ರಥೋತ್ಸವದ ನಂದಿ ಧ್ವಜ ಭಕ್ತರ ಸಮ್ಮುಖದಲ್ಲಿ ಆಡಳಿತ ಮಂಡಳಿ ಹರಾಜು ಮಾಡುತ್ತಾರೆ.

4 / 6
ಹರಾಜಿನಲ್ಲಿ ನಂದಿ ಧ್ವಜ ಯಾರಿಗೆ ಸೇರುತ್ತೋ ಅವರಿಗೆ ಈ ವರ್ಷ ಒಳ್ಳೆಯದು ಆಗುವ ನಂಬಿಕೆ ಇದೆ. ಹೀಗಾಗಿ ಈ ಬಾರಿ ಚುನಾವಣೆ ವರ್ಷವಾದ ಕಾರಣ ರಥೋತ್ಸವದ ನಂದಿ ಧ್ವಜ ಹರಾಜು ಪ್ರಕ್ರಿಯೆ ಜೋರಾಗಿ ನಡೆದಿದೆ.

5 / 6
ಹಾಲಿ ಕಾಂಗ್ರೆಸ್ ಶಾಸಕ ಡಾ ರಂಗನಾಥ್ ಹಾಗೂ ಮಾಜಿ ಶಾಸಕ ರಾಮಸ್ವಾಮಿಗೌಡ ನಡುವೆ ತೀವ್ರ ಪೈಪೋಟಿ ನಡೆದಿದ್ದು ಸುಮಾರು 16 ಲಕ್ಷಕ್ಕೆ ರಥದ ನಂದಿಧ್ವಜ ಮಾರಾಟವಾಗಿದೆ. ಅಂತಿಮವಾಗಿ ಶಾಸಕ ಡಾ ರಂಗನಾಥ್ ರಿಗೆ ನಂದಿಧ್ವಜ ಸೇರಿದ್ದು ಹರಾಜಿನಲ್ಲಿ ಗೆದ್ದವರು ಈ ಬಾರಿ ಕ್ಷೇತ್ರದ ಶಾಸಕರಾಗುವ ನಂಬಿಕೆ ಇದೆ.

6 / 6
ಪಟ್ಟುಬಿಡದ ಶಾಸಕ ಡಾ ರಂಗನಾಥ್ ಪೈಪೋಟಿ ‌ನೀಡಿ ನಂದಿಧ್ವಜ ಪಡೆದಿದ್ದಾರೆ. ಇನ್ನೂ ಪ್ರತಿವರ್ಷ 5-10 ಲಕ್ಷವರೆಗೂ ಮಾರಾಟ ವಾಗ್ತಿದ್ದ ನಂದಿಧ್ವಜ ಈ ಬಾರಿ 16 ಲಕ್ಷಕ್ಕೆ ಮಾರಾಟವಾಗಿದ್ದು ಶಾಸಕ ರಂಗನಾಥ್ ಮತ್ತೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಗೂ ಭಕ್ತರ‌ ಸಮ್ಮುಖದಲ್ಲಿ ಅದ್ದೂರಿಯಾಗಿ ಸಿದ್ದಲಿಂಗೇಶ್ವರ ಜಾತ್ರೆ ನಡೆದಿದೆ. ವರದಿ: ಮಹೇಶ್, ಟಿವಿ9 ತುಮಕೂರು

Published On - 3:09 pm, Tue, 28 February 23