Updated on: Feb 28, 2023 | 5:09 PM
ವೆಲ್ವೆಟ್‌ನಲ್ಲಿ, ಸ್ಕರ್ಟ್‌ಗಳಲ್ಲಿ, ಸನ್‌ಗ್ಲಾಸ್‌ನಲ್ಲಿ, ಫುಟ್‌ಬಾಲ್ ಕಿಟ್‌ಗಳಲ್ಲಿ ಬೆಕ್ಕುಗಳು: ಬಾಂಗ್ಲಾದೇಶದ ಅತಿದೊಡ್ಡ ಬೆಕ್ಕು ಪ್ರದರ್ಶನಕ್ಕಾಗಿ ಶುಕ್ರವಾರ (ಫೆ. 24) ನೂರಾರು ಬೆಕ್ಕುಗಳು ಫ್ಯಾಷನ್ ಉಡುಪುಗಳನ್ನು ಧರಿಸಿದ್ದವು.
ಆಯೋಜಕ ರಬಿ ಹಸನ್ ಈವೆಂಟ್‌ಗೆ ಆಗಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತಾ ಕನಿಷ್ಠ 900 ಬೆಕ್ಕುಗಳು ಭಾಗವಹಿಸಿದ್ದವು, 15,000 ಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗಿದ್ದರು ಎಂದು ತಿಳಿಸಿದರು.
ಸನ್‌ಗ್ಲಾಸ್‌ಗಳು ಬ್ರೆಜಿಲ್ ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಶರ್ಟ್‌ಗಳ ಜೊತೆಗೆ ಹೊಂದಿಕೆಯಾಗುವ ಟೋಪಿಗಳು ಮತ್ತು ಜಾಕೆಟ್‌ಗಳನ್ನು ಧರಿಸಿ ಬೆಕ್ಕುಗಳು ಆಗಮಿಸಿದ್ದವು.
ತಬಸ್ಸುಮ್ ಅಕ್ತರ್ ಆರು ತಿಂಗಳ ಹಿಂದೆ Z ಎಂಬ ಬೆಕ್ಕನ್ನು ದತ್ತು ಪಡೆಡಿದ್ದರು. ಢಾಕಾದ ದೊಡ್ಡ ಶಾಪಿಂಗ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ವಿಶೇಷ ಕಾಲರ್ ಉಡುಗೆಯನ್ನು ಬೆಕ್ಕಿಗೆ ಧರಿಸಿದ್ದರು
ಸುಮಾರು 20 ಕ್ಕೂ ಹೆಚ್ಚು ತಳಿಯ ಬೆಕ್ಕುಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಬೆಕ್ಕಿನ ಮಾಲೀಕರು ಈ ಪ್ರದರ್ಶನದಲ್ಲಿ ಭಾಗಿಯಾದ ಬೆಕ್ಕಿನ ಮಾಲೀಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು
ನಾಸಿಫ್ ಉಲ್ಲಾ ತಮ್ಮ ಬೆಕ್ಕು ಪೊಕೊವನ್ನು ಜೇನುನೊಣದ ರೀತಿ ಅಲಂಕರಿಸಿದರು. ಈ ಪ್ರದರ್ಶನ ಬಾಂಗ್ಲಾದೇಶದಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಿ ಆಶಿಸಿದರು.
ಸಾಕು ಬೆಕ್ಕುಗಳು ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅವುಗಳನ್ನು ಕ್ರಿಮಿಕೀಟಗಳ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ.
ಸಾಕುಪ್ರಾಣಿಗಳು ಹೆಚ್ಚಾಗಿ ನಗರದ ಮೇಲ್ವರ್ಗ ಮತ್ತು ಮಧ್ಯಮ ವರ್ಗಗಳ ಮನೆಗಳಲ್ಲಿ ಕಾಣ ಸಿಗುತ್ತದೆ. ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಧಾರ್ಮಿಕ ಕಾರಣಗಳಿಗಾಗಿ ಬೆಕ್ಕುಗಳನ್ನು ಸಾಕುತ್ತಾರೆ.
ತಮ್ಮ ಬೆಕ್ಕುಗಳಿಗೆ ವಿವಿಧ ಅಲಂಕಾರಗಳನ್ನು ಮಾಡಿ ಬೆಕ್ಕುಗಳ ಮಾಲೀಕರು ತಮ್ಮ ಪ್ರೀತಿಯ ಬೆಕ್ಕನ್ನು ಎತ್ತಿಕೊಂಡು ಶೋನಲ್ಲಿ ರಾಂಪ್ ವಾಕ್ ಮಾಡಿದರು
ಕ್ಯಾಟ್ ಶೋಗಳು ಹೆಚ್ಚಿನ ಬೆಕ್ಕಿನ ಪೋಷಕರು ಮತ್ತು ಬೆಕ್ಕು ಪ್ರೇಮಿಗಳನ್ನು ಭೇಟಿ ಮಾಡಲು ಅವಕಾಶವನ್ನು ನೀಡುತ್ತದೆ ಮತ್ತು ನಿಮ್ಮ ಬೆಕ್ಕು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತದೆ.