15 ನಿಮಿಷದಲ್ಲಿ ಶೇ.50 ಚಾರ್ಜ್: ಇಂದಿನಿಂದ ಮೋಟೋ ಎಡ್ಜ್ 40 ನಿಯೋ ಖರೀದಿಗೆ ಲಭ್ಯ

|

Updated on: Sep 28, 2023 | 6:55 AM

Moto Edge 40 Neo First Sale Today: ಮಧ್ಯಮ ಬೆಲೆಗೆ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್​ಫೋನ್ ಇಂದಿನಿಂದ ದೇಶದಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM ಮತ್ತು 128GB ಸ್ಟೋರೇಜ್‌ ರೂಪಾಂತರಕ್ಕೆ 23,999 ರೂ. ಇದೆ. ಅಂತೆಯೆ 12GB RAM ಮತ್ತು 256GB ಸ್ಟೋರೇಜ್‌ನ ಬೆಲೆ 25,999 ರೂ. ಆಗಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಫೋನಿನ ಹಿಂದಿನ ವರ್ಷನ್ ಎಡ್ಜ್ 40 ರಿಲೀಸ್ ಆಗಿತ್ತು.

1 / 7
ಪ್ರಸಿದ್ಧ ಮೋಟೋರೊಲಾ ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ತಿಂಗಳಿಗೆ ಒಂದು ಫೋನನ್ನು ದೇಶದಲ್ಲಿ ಅನಾವರಣ ಮಾಡುತ್ತಿದೆ. ಕಳೆದ ವಾರವಷ್ಟೆ ಭಾರತದಲ್ಲಿ ಮೋಟೋರೊಲಾ ಕಂಪನಿ ತನ್ನ ಎಡ್ಜ್ ಸರಣಿ ಅಡಿಯಲ್ಲಿ ಹೊಸ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು.

2 / 7
ಮಧ್ಯಮ ಬೆಲೆಗೆ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್​ಫೋನ್ ಇಂದಿನಿಂದ ದೇಶದಲ್ಲಿ ಖರೀದಿಗೆ ಸಿಗಲಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಫೋನಿನ ಹಿಂದಿನ ವರ್ಷನ್ ಎಡ್ಜ್ 40 ರಿಲೀಸ್ ಆಗಿತ್ತು. ಎಡ್ಜ್ 40 ನಿಯೋ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

3 / 7
ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್​ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 8GB RAM ಮತ್ತು 128GB ಸ್ಟೋರೇಜ್‌ ರೂಪಾಂತರಕ್ಕೆ 23,999 ರೂ. ಇದೆ. ಅಂತೆಯೆ 12GB RAM ಮತ್ತು 256GB ಸ್ಟೋರೇಜ್‌ನ ಬೆಲೆ 25,999 ರೂ. ಆಗಿದೆ. ವಿಶೇಷ ಆಫರ್ ಘೋಷಣೆ ಮಾಡಲಾಗಿದ್ದು, ಈ ಫೋನುಗಳು ಕ್ರಮವಾಗಿ 20,999 ಮತ್ತು 22,999 ರೂ. ಗೆ ಸೀಮಿತ ಅವಧಿಗೆ ನೀಡಲಾತ್ತದೆ.

4 / 7
ಈ ಸ್ಮಾರ್ಟ್‌ಫೋನ್ ಇಂದು ಸಂಜೆ 7 ಗಂಟೆಗೆ ಫ್ಲಿಪ್‌ಕಾರ್ಟ್, ಮೋಟೋರೋಲಾ ಡಾಟ್ ಇನ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು 1,000 ರೂಪಾಯಿಗಳ ವಿನಿಮಯ ಬೋನಸ್ ಕೊಡುಗೆಯೊಂದಿಗೆ, 1,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದೆ.

5 / 7
ಡಿಸ್‌ಪ್ಲೇ-ಪ್ರೊಸೆಸರ್: ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್​ಫೋನ್ 144Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.55-ಇಂಚಿನ pOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1300 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು HDR10+ ಡಿಸ್‌ಪ್ಲೇ ಆಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7030 ಪ್ರೊಸೆಸರ್​ನಿಂದ ಚಾಲಿತವಾಗಿದೆ. ಈ ಚಿಪ್‌ಸೆಟ್‌ನೊಂದಿಗೆ ಪ್ರಾರಂಭಿಸಿದ ಮೊದಲ ಮೋಟೋ ಫೋನ್ ಇದಾಗಿದೆ.

6 / 7
ಕ್ಯಾಮೆರಾಗಳು-ಬ್ಯಾಟರಿ: ಇದು OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಮ್ಯಾಕ್ರೋ ವಿಷನ್ ಜೊತೆಗೆ 13MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿ ಮುಂಭಾಗ 32MP ಕ್ಯಾಮೆರಾ ಅಳವಡಿಸಲಾಗಿದೆ. 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.

7 / 7
ಸಾಫ್ಟ್‌ವೇರ್-ಸಂಪರ್ಕ: ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ. ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ IP68, 5G, USB ಟೈಪ್-C ಪೋರ್ಟ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ನೋಮಸ್, NFC, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು Wi-Fi 6E ಜೊತೆಗೆ ಬರುತ್ತದೆ.