Mushroom Benefits: ಅಣಬೆಯ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ಸಂಗತಿಗಳು ಇಲ್ಲಿವೆ
ಅಣಬೆಗಳು ಮಾಂಸದಂತೆ ಪರಿಮಳವನ್ನು ಹೊಂದಿರುತ್ತವೆ. ಅದಕ್ಕಾಗಿಯೇ ಅವುಗಳನ್ನು ಸಸ್ಯಾಹಾರಿ ಮಾಂಸ ಎಂದೂ ಕರೆಯುತ್ತಾರೆ. ಅಣಬೆಯಲ್ಲಿರುವ ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಸಿ ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
1 / 13
ಮಶ್ರೂಮ್ ತಿನ್ನಲು ಯೋಗ್ಯವಾದ ಒಂದು ಫಂಗಸ್ ಆಗಿದೆ. ಇದು ಅತ್ತ ತರಕಾರಿಯೂ ಅಲ್ಲ, ಇತ್ತ ಹಣ್ಣೂ ಅಲ್ಲ. ಒಣ ಮತ್ತು ಹಸಿ ರೂಪಗಳೆರಡರಲ್ಲೂ ಅಣಬೆಗಳು ಸಿಗುತ್ತವೆ. ಅದರಲ್ಲಿ ಸಿಂಪಿ, ಪೊರ್ಸಿನಿ ಮತ್ತು ಬಟನ್ ಅಣಬೆ ಅತ್ಯಂತ ಸಾಮಾನ್ಯ ಪ್ರಭೇದಗಳಾಗಿವೆ.
2 / 13
ಅಣಬೆಗಳನ್ನು ಮೊದಲು ಜಪಾನ್ ಮತ್ತು ಚೀನಾದಲ್ಲಿ ಬೆಳೆಸಲಾಯಿತು. ಅವುಗಳನ್ನು ಈಗ ಪ್ರಪಂಚದಾದ್ಯಂತ ವರ್ಷವಿಡೀ ಬೆಳೆಸಲಾಗುತ್ತದೆ. ಭಾರತದಲ್ಲಿ ಇದು ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
3 / 13
ಅಣಬೆಗಳು ಮಾಂಸದಂತೆ ಪರಿಮಳವನ್ನು ಹೊಂದಿರುತ್ತವೆ. ಅದಕ್ಕಾಗಿಯೇ ಅವುಗಳನ್ನು ಸಸ್ಯಾಹಾರಿ ಮಾಂಸ ಎಂದೂ ಕರೆಯುತ್ತಾರೆ. ಅಣಬೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದರ ಪೌಷ್ಟಿಕಾಂಶ ಮತ್ತು ಔಷಧೀಯ ಮೌಲ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.
4 / 13
ಅಣಬೆಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
5 / 13
ಅಣಬೆಗಳು ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದ್ದು, ನರಗಳ ಹಾನಿಯನ್ನು ನಿಯಂತ್ರಿಸುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.
6 / 13
ಅಣಬೆಗಳು ವಿಟಮಿನ್ ಡಿಯ ಉತ್ತಮ ಮೂಲವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇದು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
7 / 13
ಅಣಬೆಗಳು ಎರಿಟಾಡೆನಿನ್ ಎಂಬ ರಾಸಾಯನಿಕ ಸಂಯುಕ್ತವನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ದೇಹದ ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
8 / 13
ಅಣಬೆಗಳನ್ನು ಹಸಿಯಾಗಿಯೇ ತಿನ್ನಬಹುದು. ಸಲಾಡ್ ಅಥವಾ ಸೂಪ್ಗೆ ಇದನ್ನು ಸೇರಿಸಲಾಗುತ್ತದೆ. ಆದರೂ, ಅವು ಶಿಲೀಂಧ್ರಗಳಾಗಿರುವುದರಿಂದ ಬಳಸುವ ಮೊದಲು ಅವುಗಳನ್ನು ಬೇಯಿಸುವುದು ಉತ್ತಮ.
9 / 13
ಅಣಬೆಗಳಿಂದ ಸೂಪ್, ಬಿರಿಯಾನಿ, ಫ್ರೈ, ಮಂಚೂರಿ ಹೀಗೆ ನಾನಾ ರೀತಿಯ ಪದಾರ್ಥಗಳನ್ನು ತಯಾರಿಸಬಹುದು.
10 / 13
ಅಣಬೆಗಳು ಖಾದ್ಯ ಶಿಲೀಂಧ್ರಗಳಾಗಿವೆ. ಅವರು ಆಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಪೋಷಕಾಂಶಗಳನ್ನು ಒದಗಿಸುತ್ತದೆ.
11 / 13
ಅಣಬೆಗಳು ಪ್ರೋಟೀನ್, ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅಣಬೆಗಳಲ್ಲಿನ ಉತ್ಕರ್ಷಣ ನಿರೋಧಕಗಳೆಂದರೆ, ಸೆಲೆನಿಯಮ್, ವಿಟಮಿನ್ ಸಿ, ಕೋಲೀನ್.
12 / 13
ಅಣಬೆಯಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
13 / 13
ಅನೇಕ ಮಹಿಳೆಯರು ಭ್ರೂಣದ ಆರೋಗ್ಯವನ್ನು ಹೆಚ್ಚಿಸಲು ಗರ್ಭಾವಸ್ಥೆಯಲ್ಲಿ ಫೋಲಿಕ್ ಆ್ಯಸಿಡ್ ಅಥವಾ ಫೋಲೇಟ್, ಸಪ್ಲಿಮೆಂಟ್ಗಳನ್ನು ತೆಗೆದುಕೊಳ್ಳುತ್ತಾರೆ. ಈ ಅಣಬೆಗಳು ಫೋಲೇಟ್ ಅನ್ನು ಸಹ ಒದಗಿಸುತ್ತವೆ.