ಕನ್ನಡದ ಬಗ್ಗೆ ಅಭಿಮಾನವಿದ್ದರೆ ಯಾವ ರೂಪದಲ್ಲಿ ಬೇಕಾದರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬಹುದು. ಮಾಡುವ ಮನಸಿರಬೇಕು ಅಷ್ಟೇ. ಇದಕ್ಕೆ ಸಾಕ್ಷಿ ಮೈಸೂರಿನ ಟ್ಯಾಟೂ ಕಲಾವಿದ ಸಿ.ಕೆ. ಸುನೀಲ್.
ಕನ್ನಡದ ಅಣ್ಣ ಪಡಿಯಚ್ಚು
ವಿದೇಶಿಗರ ಮೇಲೆ ಪ್ರೀತಿಯಿಂದ ಕನ್ನಡ ಟ್ಯಾಟೂ ಬ್ಯಾಟಿಂಗ್
ನಮಗೆ ಕನ್ನಡ ಪದದ ಟ್ಯಾಟೂಗಳು ಬೇಕೆನ್ನುವಷ್ಟರ ಮಟ್ಟಿಗೆ ವಿದೇಶಿಗರನ್ನು ಸುನೀಲ್ ಸಜ್ಜುಗೊಳಿಸಿದ್ದಾರೆ. ಇದರಲ್ಲಿ ಅಮೆರಿಕಾದ ಜಾಯ್ ಬೇನ್ ತೋಳಿನ ಮೇಲೆ ನನ್ನ ಸ್ವೀಟ್ ಎಮಿ ಆಶೀರ್ವದಿಸಲಿ ಎಂಬ ಕನ್ನಡ ಪದದ ಟ್ಯಾಟೂ. ವಿದೇಶಿ ಮಹಿಳೆ ತೋಳಿನ ಮೇಲೆ ನಮಸ್ತೆ ಪದದ ಟ್ಯಾಟೂ ಸಹ ಗಮನ ಸೆಳೆಯುತ್ತದೆ. ಸುನೀಲ್ ಹಾಕುವ ಟ್ಯಾಟೂನಿಂದಾಗಿ ಕನ್ನಡ ಭಾಷೆಗೆ ವಿದೇಶಿಗರು ತುಂಬಾ ಖುಷಿಯಾಗಿದ್ದಾರೆ. ಇದು ಸುನೀಲ್‌ಗೂ ಖುಷಿ ಕೊಟ್ಟಿದೆ.
ಸುನೀಲ್ ವಿದೇಶಿಗರಿಗೆ ಕೇವಲ ಕನ್ನಡ ಟ್ಯಾಟೂ ಹಾಕುವುದು ಮಾತ್ರವಲ್ಲ ಅವರಿಗೆ ಕನ್ನಡ ಕಲಿಸುವ ಕೆಲಸ ಸಹ ಮಾಡುತ್ತಿದ್ದಾರೆ. ಅಪ್ಪ, ಅಮ್ಮ, ನಮಸ್ತೆ ಇತ್ಯಾದಿ ಕನ್ನಡ ಪದಗಳನ್ನು ತಮ್ಮ ಬಳಿ ಬರುವ ವಿದೇಶಿಗರಿಗೆ ಕಲಿಸಿದ್ದಾರೆ. ಒಟ್ಟಾರೆ, ಕನ್ನಡಾಂಬೆಗೆ ಸುನೀಲ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ.
-ರಾಮ್
ಇನ್ನು ನನ್ನ ಬಳಿ ಬಹುತೇಕ ವಿದೇಶಿಗರು ಸ್ವಯಂಪ್ರೇರಿತರಾಗಿ ಕನ್ನಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ನಮ್ಮ ಮೈಸೂರಿನ ಪ್ರವಾಸಿ ತಾಣಗಳು, ಇಲ್ಲಿನ ಪರಿಸರ ಜನರನ್ನು ಮೆಚ್ಚಿ ಅದನ್ನು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಕನ್ನಡ ಭಾಷೆಯ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಮ್ಮ ಜನರು ಕನ್ನಡದ ಟ್ಯಾಟೂ ಬೇಕು ಅನ್ನುತ್ತಿದ್ದಾರೆ. ನಿಜಕ್ಕೂ ನನಗೆ ಕನ್ನಡದಲ್ಲಿ ಟ್ಯಾಟೂ ಹಾಕೋದು ಅಂದ್ರೆ ಅಚ್ಚುಮೆಚ್ಚು.
-ಸಿ.ಕೆ. ಸುನೀಲ್, ಟ್ಯಾಟೂ ಕಲಾವಿದ
Published On - 9:55 pm, Sat, 31 October 20