
ನಿಗೂಢ ಸಾವುಗಳು ಸಂಭವಿಸುತ್ತವೆ: ಗ್ರೀಕ್-ರೋಮನ್ ಅವಧಿಯಲ್ಲಿ, ದೇವಾಲಯಕ್ಕೆ ಭೇಟಿ ನೀಡುವವರ ಶಿರಚ್ಛೇದ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ ಆದರೆ ದೇವಾಲಯದಲ್ಲಿ ಶಿರಚ್ಛೇದದ ಹಿಂದಿನ ಕಾರಣ ಇಲ್ಲಿಯವರೆಗೆ ತಿಳಿದುಬಂದಿಲ್ಲ.

ಡೈಲಿ ಸ್ಟಾರ್ ವರದಿಯ ಪ್ರಕಾರ, ಪ್ರಾಚೀನ ಗ್ರೀಕ್ ಭೂಗೋಳಶಾಸ್ತ್ರಜ್ಞ ಸ್ಟ್ರಾಬೋ ಇಲ್ಲಿಗೆ ಬಂದಿದ್ದರು, ಅವರ 2 ಸಾವಿರ ವರ್ಷಗಳಷ್ಟು ಹಳೆಯದಾದ ಪುಸ್ತಕದಲ್ಲಿ ಇದು ಒಂದು ಸಣ್ಣ ಗುಹೆ ಎಂದು ಉಲ್ಲೇಖಿಸಲಾಗಿದೆ. ಒಳಗೆ ತುಂಬಾ ಮಂದವಾದ ಬೆಳಕಿದ್ದು, ಜತೆಗೆ ಇಕ್ಕಟ್ಟಾಗಿದ್ದು,ಒಳಗೆ ಹೋಗಿ ನೋಡಲು ಕಷ್ಟವಾಗುತ್ತದೆ. ಅದರೊಳಗೆ ಪ್ರವೇಶಿಸುವ ಯಾವುದೇ ಜೀವಿ ಉಸಿರುಗಟ್ಟಿ ಸಾಯಬಹುದು ಎಂದು ಹೇಳಿದ್ದರು.

ಸ್ಟ್ರಾಬೊ ಗುಬ್ಬಚ್ಚಿಗಳನ್ನು ಅದರೊಳಗೆ ಬಿಟ್ಟಾಗ, ಅವು ಕೆಲವೇ ಸೆಕೆಂಡುಗಳಲ್ಲಿ ಸತ್ತವು; ಅದರೊಳಗೆ ಹೋಗುವ ಜೀವಿಗಳು ತಕ್ಷಣವೇ ಸಾಯುತ್ತವೆ. ಪ್ರಾಚೀನ ದಂತಕಥೆಗಳ ಪ್ರಕಾರ, ಈ ಸ್ಥಳವನ್ನು ಪ್ರಾಣಿ ಬಲಿ ನೀಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇದರಲ್ಲಿ ಪಕ್ಷಿಗಳು, ಎತ್ತುಗಳು ಮತ್ತು ಇತರ ಪ್ರಾಣಿಗಳನ್ನು ದೇವರುಗಳ ಸಂಕೇತಗಳಾಗಿ ನೋಡಲಾಗುತ್ತಿತ್ತು. ದೇವಾಲಯದ ಅವಶೇಷಗಳ ಮೇಲೆ ನೀವು ಪಕ್ಷಿಗಳ ಅಸ್ಥಿಪಂಜರಗಳನ್ನು ನೋಡಬಹುದು. ಕಂಬಗಳ ಮೇಲೆ ದೇವರುಗಳ ಶಾಸನಗಳೂ ಇವೆ.

2018ರಲ್ಲಿ ರಹಸ್ಯ ಬಯಲಾಗಿದೆ: ಈ ದೇವಾಲಯದ ರಹಸ್ಯವು 2018 ರಲ್ಲಿ ಬಹಿರಂಗಗೊಂಡಿದೆ. ವಾಸ್ತವವಾಗಿ, ಟರ್ಕಿಯ ಪ್ರಾಚೀನ ನಗರವಾದ ಹೈರಾಪೊಲಿಸ್ ಭಾರತ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಪುರಾತತ್ತ್ವ ಶಾಸ್ತ್ರದಲ್ಲಿ ಆಸಕ್ತಿ ಇದ್ದ ಜನರು ಅಲ್ಲಿಗೆ ಹೋಗುತ್ತಿದ್ದರು ಆದರೆ ಇಲ್ಲಿಗೆ ಬಂದ ನಂತರ, ಈ ದೇವಾಲಯಕ್ಕೆ ಯಾರೂ ಭೇಟಿ ನೀಡಿದ ಕುರುಹು ಇರಲಿಲ್ಲ. ದೇವಾಲಯದ ಬಳಿ ಹೋಗುವ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಮತ್ತು ಪಕ್ಷಿಗಳು ಸಹ ಸಾಯುತ್ತವೆ ಎಂದು ಹೇಳಲಾಗುತ್ತಿತ್ತು. ಇದೇ ಕಾರಣಕ್ಕೆ ಈ ದೇವಾಲಯ ನಿಗೂಢವಾಯಿತು.

ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ: ಇಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟವು ಸಾಕಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ; ರಾತ್ರಿಯಾಗುತ್ತಿದ್ದಂತೆ, C02 ಮಟ್ಟವು ಹೆಚ್ಚುತ್ತಿತ್ತು. ಪ್ರಾಣಿಗಳನ್ನು ಒಳಗೆ ಎಸೆಯುತ್ತಿದ್ದ ಸಮಯ ಇದಾಗಿತ್ತು. ವಿಜ್ಞಾನಿಗಳ ಪ್ರಕಾರ, ದೇವಾಲಯದ ಕೆಳಗಿನಿಂದ ವಿಷಕಾರಿ ಇಂಗಾಲದ ಡೈಆಕ್ಸೈಡ್ ಅನಿಲ ಹೊರಹೊಮ್ಮುತ್ತದೆ.

ವಿಜ್ಞಾನಿಗಳು ರಹಸ್ಯವನ್ನು ಬಹಿರಂಗಪಡಿಸಿದ್ದರು, ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿತ್ತು, ಇದರಲ್ಲಿ ಅಚ್ಚರಿಯ ಸಂಗತಿಗಳು ಕಂಡುಬಂದವು, ಇದು ತುಂಬಾ ಬಿಸಿಯಾದ ಸ್ಥಳವಾಗಿದ್ದು, ಅಲ್ಲಿಗೆ ತಲುಪಿದ ತಕ್ಷಣ ಅನೇಕ ಪಕ್ಷಿಗಳು ಸಾವನ್ನಪ್ಪುತ್ತಿದ್ದವು, ಮನುಷ್ಯರಿಗೂ ಕೂಡ ಇದೇ ಪರಿಸ್ಥಿತಿಯುಂಟಾಗಿರಬಹುದು ಎಂದು ಹೇಳಲಾಗುತ್ತದೆ.