ಐತಿಹಾಸಿಕ ಕುಲು ದಸರಾದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ
TV9 Web | Updated By: ಸುಷ್ಮಾ ಚಕ್ರೆ
Updated on:
Oct 06, 2022 | 9:54 AM
Kullu Dussehra: ನರೇಂದ್ರ ಮೋದಿ ಅವರು 90ರ ದಶಕದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿಯ ಉಸ್ತುವಾರಿಯಾಗಿದ್ದಾಗ ಕುಲು ದಸರಾದಲ್ಲಿ ಭಾಗವಹಿಸಿದ್ದರು. ಆದರೆ, ಪ್ರಧಾನಮಂತ್ರಿಯೊಬ್ಬರು ಈ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
1 / 11
ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ಕುಲು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಈ ದಸರಾದಲ್ಲಿ ಪಾಲ್ಗೊಂಡ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2 / 11
ವಿಶ್ವಪ್ರಸಿದ್ಧ ಕುಲು ದಸರಾ ಉತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಆದರೆ, ಇದುವರೆಗೂ ಯಾವುದೇ ಪ್ರಧಾನಿ ಈ ದಸರಾ ಉತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಕುಲು ಕಣಿವೆಯ ಪ್ರಧಾನ ದೇವತೆಯಾದ ಲಾರ್ಡ್ ರಘುನಾಥನಿಗೆ ನಮನ ಸಲ್ಲಿಸಿದ ಮೊದಲ ಪ್ರಧಾನಿಯಾಗಿದ್ದಾರೆ.
3 / 11
ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರೊಂದಿಗೆ ಕುಲುವಿನ ಧಾಲ್ಪುರ್ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 300 ದೇವತೆಗಳ ಉಪಸ್ಥಿತಿಯ ನಡುವೆ 'ರಥಯಾತ್ರೆ'ಗೆ ಸಾಕ್ಷಿಯಾದರು.
4 / 11
ಐತಿಹಾಸಿಕ ಕುಲು ದಸರಾದ ಭಾಗವಾಗಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
5 / 11
ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಹಿಮಾಚಲಿ ಕ್ಯಾಪ್ ಧರಿಸಿ ಕುಲು ದಸರಾದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಅಪಾರ ಜನಸ್ತೋಮ ನೆರೆದಿತ್ತು.
6 / 11
ರಘುನಾಥ ದೇವರ ಮುಂದೆ ತಲೆಬಾಗಿ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದರು.
7 / 11
1637ರಲ್ಲಿ ರಾಜಾ ಜಗತ್ ಸಿಂಗ್ ಕುಲುವನ್ನು ಆಳ್ವಿಕೆ ಮಾಡುವಾಗ ಈ ದಸರಾ ಹಬ್ಬವನ್ನು ಮೊದಲ ಬಾರಿಗೆ ಆಚರಿಸಲಾಯಿತು. ದಸರಾ ಸಂದರ್ಭದಲ್ಲಿ ಭಗವಾನ್ ರಘುನಾಥನ ಗೌರವಾರ್ಥ ಆಚರಣೆಯನ್ನು ಮಾಡಲು ಕುಲುವಿನ ಎಲ್ಲಾ ಸ್ಥಳೀಯ ದೇವತೆಗಳನ್ನು ಅವರು ಆಹ್ವಾನಿಸಿದ್ದರು. ಅಂದಿನಿಂದ, ನೂರಾರು ಹಳ್ಳಿಗಳ ದೇವಾಲಯಗಳಿಂದ ದೇವತೆಗಳ ವಾರ್ಷಿಕ ಸಭೆ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.
8 / 11
ಕುಲು ದಸರಾ ಹಬ್ಬವು ಬಿಯಾಸ್ ನದಿಯ ದಡದಲ್ಲಿ 'ಲಂಕಾ ದಹನ್' ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಎಲ್ಲ ದೇವತೆಗಳನ್ನು ಮೆರವಣಿಗೆಯ ಮೂಲಕ ಕರೆದೊಯ್ಯಲಾಗುತ್ತದೆ. ನಂತರ ಆ ದೇವತೆಗಳು ತಮ್ಮ ದೇವಾಲಯಗಳಿಗೆ ಹಿಂತಿರುಗುತ್ತಾರೆ.
9 / 11
ಪ್ರಧಾನಮಂತ್ರಿ ಮೋದಿ ಭಗವಾನ್ ರಘುನಾಥನ ರಥಕ್ಕೆ ಕಾಲಿಟ್ಟ ಕ್ಷಣವನ್ನು ಸೆರೆಹಿಡಿಯಲು ಜನರು ಹರ್ಷೋದ್ಗಾರದಿಂದ ಸೇರಿದ್ದರು. ಕುಲು ಮತ್ತು ಮಂಡಿ ಜಿಲ್ಲೆಯ ಸಮೀಪದ ಪ್ರದೇಶಗಳ ಸುಮಾರು 300 ದೇವತೆಗಳೊಂದಿಗೆ ಭಗವಾನ್ ರಘುನಾಥನ 'ರಥಯಾತ್ರೆ'ಗೆ ಮೋದಿ ಸಾಕ್ಷಿಯಾದರು.
10 / 11
ತಮ್ಮ ಪ್ರೀತಿಯ ನಾಯಕನಿಗೆ ಜೋರಾಗಿ ಹರ್ಷೋದ್ಗಾರದ ಮೂಲಕ ಪ್ರತಿಕ್ರಿಯಿಸಿದ ಜನರಿಗೆ ಪ್ರಧಾನಿ ದಸರಾ ಹಬ್ಬದ ಶುಭಾಶಯ ಕೋರಿದರು. ನರೇಂದ್ರ ಮೋದಿ ಅವರು 90ರ ದಶಕದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿಯ ಉಸ್ತುವಾರಿಯಾಗಿದ್ದಾಗ ಕುಲು ದಸರಾದಲ್ಲಿ ಭಾಗವಹಿಸಿದ್ದರು. ಆದರೆ, ಪ್ರಧಾನಮಂತ್ರಿಯೊಬ್ಬರು ಈ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.
11 / 11
ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳನ್ನು ಸುಡುವ ಮೂಲಕ ಆಚರಿಸಲಾಗುವ ಕುಲುವಿನ ದಸರಾ ವಿಶಿಷ್ಟವಾಗಿದೆ. ಇದು ದೇಶದ ಇತರ ಭಾಗಗಳಲ್ಲಿನ ಹಬ್ಬಕ್ಕಿಂತ ಭಿನ್ನವಾಗಿದೆ.