
ಮಹಾರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಗಪುರ ಮೊದಲ ಹಂತದ ಮೆಟ್ರೋಗೆ ಚಾಲನೆ ನೀಡಿದರು.

ಖಾಪ್ರಿಯಿಂದ ಆಟೋಮೋಟಿವ್ ಸ್ಕ್ವೇರ್ (ಆರೆಂಜ್ ಲೈನ್) ಮತ್ತು ಪ್ರಜಾಪತಿ ನಗರದಿಂದ ಲೋಕಮಾನ್ಯ ನಗರ (ಆಕ್ವಾ ಲೈನ್) ವರೆಗೆ ಎರಡು ಮೆಟ್ರೋ ರೈಲುಗಳಿಗೆ ಖಾಪ್ರಿ ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

ನಾಗಪುರ ಮೆಟ್ರೋದ ಮೊದಲ ಹಂತವನ್ನು 8650 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮೆಟ್ರೋಗೆ ಹಸಿರು ನಿಶಾಸೆ ತೋರಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಾವೇ ಕೌಂಟರ್ಗೆ ಟಿಕೆಟ್ ಖರೀಸಿದರು.

ತಾವೇ ಟಿಕೆಟ್ ಖರೀದಿಸಿ ನಾಗಪುರ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನಾಗಪುರ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಯಾಣಿಕರ ಜೊತೆ ಕುಶಲೋಪರಿ ವಿಚಾರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋನಲ್ಲಿ ಪ್ರಯಾಣಿಕರೊಬ್ಬರ ಮಗುವನ್ನು ಎತ್ತಿಕೊಂಡು ಮುದ್ದಾಡಿದರು.

ಇನ್ನು ಇದೇ ವೇಳೆ ಪ್ರಧಾನ ಮಂತ್ರಿಯವರು 6700 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ನಾಗಪುರ ಮೆಟ್ರೋ ಹಂತ- II ರ ಶಂಕುಸ್ಥಾಪನೆಯನ್ನು ನೆರವೇರಿಸಿದರು.