ನೋಕಿಯಾದ ಸ್ಟೈಲಿಶ್ ಸ್ಮಾರ್ಟ್‌ಫೋನ್ G42 5G ಹೊಸ ವೇರಿಯೆಂಟ್ನಲ್ಲಿ ರಿಲೀಸ್: ಬೆಲೆ 9999 ರೂ.
Nokia G42 5G: ನೋಕಿಯಾ G42 5G ಯ ಹೊಸ 4GB + 128GB ಕಾನ್ಫಿಗರೇಶನ್ ಬೆಲೆ ಕೇವಲ ರೂ. 9,999. ಈ ರೂಪಾಂತರವನ್ನು ಅಮೆಜಾನ್ ಮತ್ತು HMD ವೆಬ್‌ಸೈಟ್ ಮೂಲಕ ಮಾರ್ಚ್ 8 ರಿಂದ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ.
1 / 6
ಪ್ರಸಿದ್ಧ ನೋಕಿಯಾ ಕಂಪನಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನೋಕಿಯಾ G42 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಎರಡು RAM ಮತ್ತು ಶೇಖರಣೆಯೊಂದಿಗೆ ಬಿಡುಗಡೆ ಮಾಡಿತ್ತು. ಈಗ, ಕಂಪನಿಯು ಹ್ಯಾಂಡ್‌ಸೆಟ್‌ನ ಹೊಸ 4GB RAM ಆಯ್ಕೆಯನ್ನು ಘೋಷಿಸಿದೆ, ಅದು ಅಗ್ಗದ ರೂಪಾಂತರವಾಗಿದೆ. ಹೊಸ ರೂಪಾಂತರವು ಈ ತಿಂಗಳಲ್ಲಿ ದೇಶದಲ್ಲಿ ಮಾರಾಟವಾಗಲಿದೆ.
2 / 6
ನೋಕಿಯಾ G42 5G ಯ ಹೊಸ 4GB + 128GB ಕಾನ್ಫಿಗರೇಶನ್ ಬೆಲೆ ಕೇವಲ ರೂ. 9,999. 6GB + 128GB ಆಯ್ಕೆಯು ಪ್ರಸ್ತುತ ಭಾರತದಲ್ಲಿ ರೂ. 12,999 ಮತ್ತು 8GB + 256GB ರೂಪಾಂತರವು ರೂ. 16,999ಕ್ಕೆ ಲಭ್ಯವಿದೆ. ನೋಕಿಯಾ ಹೊಸ ರೂಪಾಂತರವನ್ನು ಅಮೆಜಾನ್ ಮತ್ತು HMD ವೆಬ್‌ಸೈಟ್ ಮೂಲಕ ಮಾರ್ಚ್ 8 ರಿಂದ ಖರೀದಿಸಬಹುದು.
3 / 6
ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ 720 × 1612 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.56-ಇಂಚಿನ HD+ LCD ಡಿಸ್ ಪ್ಲೇ ಹೊಂದಿದೆ. 90Hz ರಿಫ್ರೆಶ್ ದರ, 560 nits ಬೈಟ್ನೆಸ್, 20: 9 ಅನುಪಾತ, ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಾಟರ್‌ಡ್ರಾಪ್ ನಾಚ್ ಅನ್ನು ಒಳಗೊಂಡಿದೆ.
4 / 6
ನೋಕಿಯಾ G42 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಅದರೊಂದಿಗೆ Adreno 619 GPU ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ನೊಂದಿಗೆ ಲೋಡ್ ಆಗಿದೆ. ನೋಕಿಯಾ ಆಂಡ್ರಾಯ್ಡ್ 14 ಮತ್ತು ಆಂಡ್ರಾಯ್ಡ್ 15 ಎರಡು ಆವೃತ್ತಿಯ ನವೀಕರಣಗಳ ಭರವಸೆ ನೀಡಿದೆ.
5 / 6
ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಡೆಪ್ತ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು LED ಫ್ಲಾಶ್ ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
6 / 6
ನೋಕಿಯಾ G42 5G ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಡ್ಯುಯಲ್-ಸಿಮ್, 5G, ವೈಫೈ 802.11 a/b/g/n/ac/ax, ಬ್ಲೂಟೂತ್ 5.1, NFC, GPS, USB ಟೈಪ್-C ಪೋರ್ಟ್, 3.5mm ಆಡಿಯೋ ಜ್ಯಾಕ್ ಬೆಂಬಲ ಪಡೆದುಕೊಂಡಿದೆ.