ಈ ವರ್ಷದ ಸಾಗರ ಛಾಯಾಗ್ರಹಣ ಪ್ರಶಸ್ತಿಗಳು ಪ್ರಕಟ; ಕಣ್ಮನ ಸೆಳೆಯುವ ಚಿತ್ರಗಳು ಇಲ್ಲಿವೆ

Edited By:

Updated on: Sep 25, 2021 | 3:58 PM

Ocean Photography Awards 2021: ಈ ವರ್ಷದ ಸಾಗರ ಛಾಯಾಗ್ರಹಣ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬಹುಮಾನ ಪಡೆದ ಅದ್ಭುತವಾದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಸಾಮಾನ್ಯರಿಗೆ ಅಪರೂಪವಾದ ಈ ವಿಭಿನ್ನ ಪ್ರಪಂಚದ ಕಣ್ಮನ ಸೆಳೆಯುವ, ಮನಸ್ಸನ್ನು ಆರ್ದ್ರಗೊಳಿಸುವ ಅಪರೂಪದ ಚಿತ್ರಗಳು ಇಲ್ಲಿವೆ.

1 / 11
2021 ರ ಸಾಗರ ಛಾಯಾಗ್ರಹಣ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಗಾಜಿನ ಮೀನುಗಳಿಂದ (Glass Fish) ಆವೃತವಾದ ಹಸಿರು ಆಮೆಯ ಚಿತ್ರಕ್ಕಾಗಿ ಐಮಿ ಜಾನ್ ಪ್ರಥಮ ಸ್ಥಾನವನ್ನು ಪಡೆದಿದ್ದು, ವರ್ಷದ ಛಾಯಾಗ್ರಾಹಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2021 ರ ಸಾಗರ ಛಾಯಾಗ್ರಹಣ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಗಾಜಿನ ಮೀನುಗಳಿಂದ (Glass Fish) ಆವೃತವಾದ ಹಸಿರು ಆಮೆಯ ಚಿತ್ರಕ್ಕಾಗಿ ಐಮಿ ಜಾನ್ ಪ್ರಥಮ ಸ್ಥಾನವನ್ನು ಪಡೆದಿದ್ದು, ವರ್ಷದ ಛಾಯಾಗ್ರಾಹಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2 / 11

ವರ್ಷದ ಸಾಗರ ಛಾಯಾಗ್ರಾಹಕರಲ್ಲದೆ, ಸ್ಪರ್ಧೆಯಲ್ಲಿ ಇತರ ಏಳು ಪ್ರಶಸ್ತಿಗಳಿವೆ. ಹೆನ್ಲಿ ಸ್ಪಿಯರ್ಸ್ ತನ್ನ ಕಡಲ ಪಕ್ಷಿಗಳ ಚಿತ್ರಕ್ಕಾಗಿ ಎರಡನೇ ಬಹುಮಾನವನ್ನು ಪಡೆದಿದ್ದಾರೆ.

3 / 11

ಮೂರನೆಯ ಸ್ಥಾನವು ಆಮೆ ಮೊಟ್ಟೆಯೊಡೆಯುವ ಅದ್ಭುತವಾದ ಚಿತ್ರಕ್ಕಾಗಿ ಮ್ಯಾಟಿ ಸ್ಮಿತ್‌ ಅವರಿಗೆ ಲಭಿಸಿದೆ. ಕೇವಲ ಮೂರು ನಿಮಿಷದ ಮೊದಲು ಮೊಟ್ಟೆ ಒಡೆದು ಹೊರಬಂದ ಈ ಆಮೆ, ತನ್ನ ಒಡಹುಟ್ಟಿದ ನೂರಾರು ಸೋದರರಿಗಿಂತ ಮೊದಲು ಹೊರಬಂತು. ತಕ್ಷಣ ಚಿತ್ರವನ್ನು ತೆಗದು ಅವುಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಾಗ, ಛಾಯಾಗ್ರಾಹಕ ತಿಳಿಸಿದ್ದಾರೆ.

4 / 11

ಈ ಚಿತ್ರಕ್ಕಾಗಿ ಬೆಹನ್ ಥೌವರ್ಡ್ ವರ್ಷದ ಅಡ್ವೆಂಚರ್ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದಿದ್ದಾರೆ.

5 / 11

ಸಮುದಾಯ ಆಯ್ಕೆ ಪ್ರಶಸ್ತಿ ವಿಭಾಗದಲ್ಲಿ, ಫಿಲ್ ಡಿ ಗ್ಲಾನ್ವಿಲ್ಲೆ ಅವರ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

6 / 11

ವರ್ಷದ ಸಾಗರ ಸಂರಕ್ಷಣಾ ಛಾಯಾಗ್ರಾಹಕ ಪ್ರಶಸ್ತಿಯು ಟರ್ಕಿಯಲ್ಲಿ ಪ್ರಸ್ತುತ ತ್ಯಜಿಸಲಾಗಿರುವ ಮೀನುಗಾರಿಕಾ ಮಾರ್ಗದಲ್ಲಿ ಸತ್ತ ಈಲ್ ಮೀನಿನ ಚಿತ್ರಕ್ಕಾಗಿ ಕೆರಿಮ್ ಸಬುನ್‌ಕುಗ್ಲು ಪಡೆದಿದ್ದಾರೆ.

7 / 11

ಗ್ಯಾಲಿಸ್ ಹೋರಾ ಸಂರಕ್ಷಣಾ ವಿಭಾಗದ ಪ್ರಶಸ್ತಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

8 / 11

ಮಾರ್ಟಿನ್ ಬ್ರೊಯೆನ್ ಅವರು ತಮ್ಮ ಈ ಅಪರೂಪದ ಚಿತ್ರಕ್ಕಾಗಿ ವರ್ಷದ ಎಕ್ಸ್ಪ್ಲೊರೇಷನ್ ಪ್ರಶಸ್ತಿ ಪಡೆದಿದ್ದಾರೆ.

9 / 11

ಸ್ಟೀವನ್ ಕೊವ್ಯಾಕ್ಸ್ ತೆಗೆದಿರುವ ಆಳವಾದ ಸಮುದ್ರದಲ್ಲಿ ಕಂಡುಬರುವ ಕಸ್ಕ್ ಈಲ್ ಲಾರ್ವಾಕ್ಕಾಗಿ ಎಕ್ಸ್ಪ್ಲೊರೇಷನ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

10 / 11

ಮಹಿಳೆಯರಿಗಾಗಿ ನೀಡಲಾಗುವ ‘ದಿ ಫೀಮೇಲ್ ಫಿಫ್ಟಿ ಫ್ಯಾಥಮ್ಸ್’ ಪ್ರಶಸ್ತಿಯನ್ನು ರೆನಿ ಕ್ಯಾಪೊಜೋಲಾ ಪಡೆದಿದ್ದಾರೆ.

11 / 11

ಈ ಚಿತ್ರಕ್ಕಾಗಿ ಹನ್ನಾ ಲೇ ಲೂ ವರ್ಷದ ಯುವ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published On - 3:52 pm, Sat, 25 September 21

TV9 Web

TV9 Kannada

Read More
Loading...
Unable to load recommendations.
Follow Us