Kannada News Photo gallery Ola Electric invest Rs 7,614 crore to expand its manufacturing capabilities, check out all details
Ola Electric: ಹೊಸ ಯೋಜನೆಗಾಗಿ ₹ 7,614 ಕೋಟಿ ಹೂಡಿಕೆ ಮಾಡಿದ ಓಲಾ ಎಲೆಕ್ಟ್ರಿಕ್
ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್ ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಉತ್ಪನ್ನಗಳನ್ನ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.
1 / 7
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಓಲಾ ಎಲೆಕ್ಟ್ರಿಕ್ ಕಂಪನಿಯು ವಿವಿಧ ಮಾದರಿಯ ಇವಿ ಸ್ಕೂಟರ್ ಮಾರಾಟದೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ. ಇವಿ ಸ್ಕೂಟರ್ ಮಾರಾಟ ವಿಭಾಗದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಉತ್ಪನ್ನಗಳನ್ನ ಪರಿಚಯಿಸುವ ಯೋಜನೆಯಲ್ಲಿದೆ.
2 / 7
ಕ್ಯಾಬ್ ಸೇವೆಗಳ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ಓಲಾ ಕಂಪನಿಯು ಇದೀಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. 2021ರಲ್ಲಿ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ವಾಹನ ಉತ್ಪಾದನೆ ಲಗ್ಗೆಯಿಟ್ಟ ಓಲಾ ಕಂಪನಿ ಇದೀಗ ಇವಿ ವಾಹನ ಉದ್ಯಮದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಂಪನಿಯು ಎಸ್ 1, ಎಸ್ 1 ಪ್ರೊ ಮತ್ತು ಎಸ್ 1 ಏರ್ ಇವಿ ಸ್ಕೂಟರ್ ಗಳನ್ನ ಮಾರಾಟ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಇವಿ ಬೈಕ್ ಜೊತೆ ಇವಿ ಕಾರುಗಳ ಉತ್ಪಾದನೆ ಆರಂಭಕ್ಕೂ ಸಿದ್ದವಾಗುತ್ತಿದೆ.
3 / 7
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಯಶಸ್ವಿ ನಂತರ ಇವಿ ಬೈಕ್ ಮತ್ತು ಇವಿ ಕಾರುಗಳ ಉತ್ಪಾದನೆಯತ್ತ ಮುಖಮಾಡಿರುವ ಓಲಾ ಕಂಪನಿ ಹೊಸ ಯೋಜನೆಗಾಗಿ ಬರೋಬ್ಬರಿ ರೂ. 7,614 ಕೋಟಿ ಹೂಡಿಕೆ ಮಾಡಿದೆ.
4 / 7
ತಮಿಳುನಾಡು ಸರ್ಕಾರದೊಂದಿಗೆ ಹೊಸ ಯೋಜನೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಹೊಸ ಬಂಡವಾಳ ಹೂಡಿಕೆ ಯೋಜನೆ ಅಡಿ ಎರಡನೇ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಎರಡನೇ ಇವಿ ವಾಹನ ಉತ್ಪಾದನಾ ಘಟಕಕ್ಕೆ ತಮಿಳುನಾಡು ಸರ್ಕಾರವು ಸುಮಾರು 2 ಸಾವಿರ ಎಕರೆ ಜಮೀನು ಮಂಜೂರು ಮಾಡಿದೆ.
5 / 7
ಹೊಸ ಯೋಜನೆ ಅಡಿ ಓಲಾ ಕಂಪನಿಯು ಇವಿ ಬೈಕ್, ಇವಿ ಕಾರಿನ ಜೊತೆಗೆ ಇವಿ ಬ್ಯಾಟರಿ ಸೆಲ್ಸ್ ಉತ್ಪಾದನಾ ಘಟಕ ನಿರ್ಮಿಸಲು ನಿರ್ಧರಿಸಿದೆ.
6 / 7
ಹೊಸ ಯೋಜನೆಯ ಕುರಿತಾಗಿ ಈಗಾಗಲೇ ಓಲಾ ಇವಿ ಕಂಪನಿಯು ಹಲವಾರು ಮಾಹಿತಿಗಳನ್ನ ಹಂಚಿಕೊಂಡಿದ್ದು, ಮುಂಬರುವ 2024ರ ವೇಳೆಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡುವ ನೀರಿಕ್ಷೆಯಲ್ಲಿದೆ. ಈ ಮೂಲಕ ಓಲಾ ಕಂಪನಿಯು ಇವಿ ಸ್ಕೂಟರ್ ವಿಭಾಗದಲ್ಲಿನ ಮಾರಾಟ ತಂತ್ರವನ್ನ ಇವಿ ಬೈಕ್ ಮತ್ತು ಇವಿ ಕಾರುಗಳ ವಿಭಾಗದಲ್ಲೂ ಪ್ರಯೋಗಿಸಲು ಮುಂದಾಗಿದ್ದು, ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.
7 / 7
ಜೊತೆಗೆ ಇವಿ ವಾಹನ ಬೆಲೆ ನಿಯಂತ್ರಣಕ್ಕಾಗಿ ಕಂಪನಿಯು ತನ್ನದೇ ಆದ ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಸಿದ್ದಪಡಿಸುತ್ತಿರುವ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಇದು ಇವಿ ವಾಹನ ಉದ್ಯಮದ ಹಿಡಿತ ಸಾಧಿಸಲು ನೆರವಾಗಲಿದೆ.