- Kannada News Photo gallery rohini sindhuri built grand bungalow In Bengaluru photo released by IPS D Roopa Moudgil
ರೂಪಾ ಆರೋಪಿಸಿರುವ ರೋಹಿಣಿ ಸಿಂಧೂರಿಯ ಕೋಟ್ಯಾಂತರ ರೂ. ಭವ್ಯ ಬಂಗಲೆ ಹೇಗಿದೆ ಗೊತ್ತಾ?ಇಲ್ಲಿವೆ ಫೋಟೋಸ್
ರೋಹಿಣಿ ಸಿಂಧೂರಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಕೋಟಿ ರೂಪಾಯಿಗಳ ಬಂಗಲೆಯನ್ನು ನಿರ್ಮಿಸುತ್ತಿದ್ದು, ಅದಕ್ಕೆ ಪೂರೈಕೆಯಾಗುತ್ತಿರುವ ವಸ್ತುಗಳು, ಮನೆ ನಿರ್ಮಾಣಕ್ಕೆ ಮಾಡುತ್ತಿರುವ ಖರ್ಚುಗಳ ಬಗ್ಗೆ ಪ್ರಶ್ನೆ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಐಪಿಎಸ್ ಅಧಿಕಾರಿ ರೂಪಾ ದೂರು ಸಲ್ಲಿಸಿದ್ದಾರೆ. ಅಲ್ಲದೇ ನಿರ್ಮಾಣವಾಗುತ್ತಿರುವ ಮನೆ ಹಾಗೂ ಒಳಾಂಗಣದ ಫೋಟೋಸ್ಗಳನ್ನು ರಿಲೀಸ್ ಮಾಡಿದ್ದಾರೆ.
Updated on:Feb 21, 2023 | 8:13 PM

ರೋಹಿಣಿ ಸಿಂಧೂರಿ ಅವರು ಕೋಟ್ಯಾಂತರ ರೂ. ವೆಚ್ಚದಲ್ಲಿ ಬೆಂಗಳೂರಿನ ಜಾಲಹಳ್ಳಿ ಬಳಿ ಭವ್ಯ ಬಂಗಲೆ ನಿರ್ಮಿಸಲಾಗಿದೆ ಎಂದು ಡಿ ರೂಪಾ ಆರೋಪಿಸಿದ್ದಾರೆ.

ರೋಹಿಣಿ ಸಿಂಧೂರಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಕೋಟಿ ರೂಪಾಯಿಗಳ ಬಂಗಲೆಯನ್ನು ನಿರ್ಮಿಸುತ್ತಿದ್ದು, ಅದಕ್ಕೆ ಪೂರೈಕೆಯಾಗುತ್ತಿರುವ ವಸ್ತುಗಳು, ಮನೆ ನಿರ್ಮಾಣಕ್ಕೆ ಮಾಡುತ್ತಿರುವ ಖರ್ಚುಗಳ ಬಗ್ಗೆ ಪ್ರಶ್ನೆ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಐಪಿಎಸ್ ಅಧಿಕಾರಿ ರೂಪಾ ದೂರು ಸಲ್ಲಿಸಿದ್ದಾರೆ.

ಮನೆ ಬಾಗಿಲಿಗೆ ಹಾಕುವ, ಕ್ಲಾಂಪ್ಗಳಿಗೆ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ರೋಹಿಣಿ ಆದಾಯದ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ಎಕರೆ ವಿಸ್ತೀರ್ಣದಲ್ಲಿ ಭವ್ಯ ಬಂಗಲೆ ನಿರ್ಮಾಣ, ಇಂಪೋರ್ಟೆಡ್ ಮೆಟಿರಿಯಲ್ ಬಳಸಿ ಬಂಗಲೆ ನಿರ್ಮಾಣ ಮಾಡಲಾಗಿದೆ ಎಂದು IPS ಅಧಿಕಾರಿ ರೂಪಾ ಸಿಂಧೂರಿ ವಾಟ್ಸಪ್ ಚಾಟ್ ರಿಲೀಸ್ ಮಾಡಿದ್ದಾರೆ.

ಒಂದು ಎಕರೆ ವಿಸ್ತೀರ್ಣದಲ್ಲಿ ಭವ್ಯ ಬಂಗಲೆ ನಿರ್ಮಾಣ, ಇಂಪೋರ್ಟೆಡ್ ಮೆಟಿರಿಯಲ್ ಬಳಸಿ ಬಂಗಲೆ ನಿರ್ಮಾಣ ಮಾಡಲಾಗಿದೆ ಎಂದು IPS ಅಧಿಕಾರಿ ರೂಪಾ ಸಿಂಧೂರಿ ವಾಟ್ಸಪ್ ಚಾಟ್ ರಿಲೀಸ್ ಮಾಡಿದ್ದಾರೆ.

ಜಾಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗೆ ರೋಹಿಣಿ ಸಿಂಧೂರಿ ತೆರಿಗೆ ಇಲ್ಲದೇ 2 ಕೋಟಿ ರೂ. ಬೆಲೆ ಬಾಳುವ ಇಟಲಿ ಫರ್ನೀಚರ್ಸ್ ತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಐಪಿಎಸ್ ಡಿ.ರೂಪಾ ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶ ಇಲ್ಲ. ಇದು ನಮ್ಮ ತಾಯಿಗೆ ಸೇರಿದ ಪ್ರಾಪರ್ಟಿ. ನಾನು ಕೂಡ ವಿದೇಶದಲ್ಲಿ ಕೆಲಸ ಮಾಡಿದವನು. ನನ್ನ ಸ್ನೇಹಿತರಿಂದ ಮನೆಗೆ ಬೇಕಾದ ಕೆಲವು ವಸ್ತುಗಳನ್ನು ತರಿಸಿದ್ದೇವೆ. ಭ್ರಷ್ಟಾಚಾರದಿಂದ ಗಳಿಸಿದ ಹಣದಲ್ಲಿ ಕಟ್ಟುತ್ತಿರುವ ಮನೆ ಇಲ್ಲ. ಮನೆ ನಿರ್ಮಾಣ ಸಂಬಂಧ ಎಲ್ಲಾ ದಾಖಲೆ ನೀಡಲು ಸಿದ್ಧರಿದ್ದೇವೆ ಎಂದು ಟಿವಿ9ಗೆ ರೋಹಿಣಿ ಸಿಂಧೂರಿ ಭಾವ ಮಧುಸೂದನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
Published On - 8:12 pm, Tue, 21 February 23




