Prithvi Shaw: ಪೃಥ್ವಿ ಶಾ ಗೆಳೆಯನಿಗೆ ಕೊಲೆ ಬೆದರಿಕೆ: ನಟಿಯ ವಿರುದ್ಧ ಮತ್ತೊಂದು ಕೇಸ್

Prithvi Shaw-Sapna Gill: ಸಪ್ನಾ ಗಿಲ್ ಹಾಗೂ ಸ್ನೇಹಿತರು ರೆಸ್ಟೋರೆಂಟ್ ಹೊರಗೆ ಕಾಯುತ್ತಾ ನಿಂತಿದ್ದರು. ಅಲ್ಲದೆ ಪೃಥ್ವಿ ಶಾ ಹೋಗುತ್ತಿದ್ದ ಕಾರನ್ನು ಹಿಂಬಾಲಿಸಿ ಬೇಸ್ ಬಾಲ್ ಸ್ಟಿಕ್​ನಿಂದ ಕಾರಿನ ಗಾಜನ್ನು ಒಡೆದಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on:Feb 21, 2023 | 6:30 PM

ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಹಾಗೂ ಭೋಜ್​ಪುರಿ ನಟಿ ಸಪ್ನಾ ಗಿಲ್ ನಡುವಣ ಸೆಲ್ಫಿ ವಿವಾದವು ಇದೀಗ ಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿಯ ವಿರುದ್ಧ ಪೃಥ್ವಿ ಎಫ್​ಐಆರ್​ ದಾಖಲಿಸಿದ್ದರು.

1 / 7
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ನಾ ಗಿಲ್ ಹಾಗೂ ಆಕೆಯ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ದಾವೆ ಹೂಡಿದ್ದ ಸಪ್ನಾ ಗಿಲ್ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2 / 7
ಇದರ ಬೆನ್ನಲ್ಲೇ ಇದೀಗ ಪೃಥ್ವಿ ಶಾ ಅವರ ಸ್ನೇಹಿತ ಆಶಿಶ್​ಗೆ ನಟಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ನೇಹಿತನ ನೆರವಿಗೆ ನಿಂತಿದ್ದಕ್ಕೆ ನನಗೆ ಸಪ್ನಾ ಗಿಲ್ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಆಶಿಶ್ ದೂರು ದಾಖಲಿಸಿದ್ದಾರೆ. ಅದರಂತೆ ಇದೀಗ ನಟಿಯ ಕೇಸ್​ನಲ್ಲಿ ಐಪಿಸಿ ಸೆಕ್ಷನ್ 387 ಅನ್ನು ಕೂಡ ಸೇರಿಸಲಾಗಿದೆ.

3 / 7
ಈ ಘಟನೆ ನಡೆಯುವಾಗ ಆಶಿಶ್ ಕೂಡ ಪೃಥ್ವಿ ಶಾ ಜೊತೆಯಲ್ಲಿದ್ದರು. ಫೆಬ್ರವರಿ 15 ರಂದು ನಡೆದ ಜಗಳದ ನಂತರ ಆಶಿಶ್ ಅವರ ಕಾರಿನ ಗಾಜುಗಳನ್ನು ಸಪ್ನಾ ಗಿಲ್ ಹಾಗೂ ಸ್ನೇಹಿತರು ಜೊತೆಗೂಡಿ ಒಡೆದು ಹಾಕಿದ್ದರು. ಈ ಸಂಬಂಧ ಆಶಿಶ್ ನಟಿಯ ವಿರುದ್ಧ ದೂರು ಕೂಡ ದಾಖಲಿಸಿದ್ದರು. ಇದೀಗ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮತ್ತೊಂದು ದೂರನ್ನು ದಾಖಲಿಸಲಾಗಿದೆ.

4 / 7
ಏನಿದು ಪ್ರಕರಣ: ಫೆಬ್ರವರಿ 15 ರಂದು, ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಅವರು ತಮ್ಮ ಕೆಲ ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್‌ ಹೊಟೆಲ್​ಗೆ ಹೋಗಿದ್ದರು. ಇದೇ ವೇಳೆ ಅಲ್ಲಿ ಪಾರ್ಟಿ ಮಾಡುತ್ತಿದ್ದ ಬೋಜ್​ಪುರಿ ನಟಿ ಸಪ್ನಾ ಗಿಲ್ ಹಾಗೂ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ ಸೆಲ್ಫಿಗೆ ಪೋಸ್ ನೀಡಲು ಪೃಥ್ವಿ ಶಾ ನಿರಾಕರಿಸಿದ್ದಾರೆ.

5 / 7
ಇದರಿಂದ ಕೋಪಗೊಂಡ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಜಗಳವಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್​ ಮ್ಯಾನೇಜರ್​ ಅನ್ನು ಕರೆಸಿದ ಪೃಥ್ವಿ ಶಾ ಸ್ನೇಹಿತ ಆಶಿಶ್ ಎಲ್ಲರನ್ನು ಹೊರಗೆ ಕಳುಹಿಸಲು ಸೂಚಿಸಿದರು. ತಕ್ಷಣವೇ ಸಪ್ನಾ ಗಿಲ್ ಹಾಗೂ ಸ್ನೇಹಿತರನ್ನು ಹೊಟೇಲ್​ನಿಂದ ಹೊರಹಾಕಲಾಯಿತು.

6 / 7
ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಸಪ್ನಾ ಗಿಲ್ ಹಾಗೂ ಸ್ನೇಹಿತರು ರೆಸ್ಟೋರೆಂಟ್ ಹೊರಗೆ ಕಾಯುತ್ತಾ ನಿಂತಿದ್ದರು. ಅಲ್ಲದೆ ಪೃಥ್ವಿ ಶಾ ಹೋಗುತ್ತಿದ್ದ ಕಾರನ್ನು ಹಿಂಬಾಲಿಸಿ ಬೇಸ್ ಬಾಲ್ ಸ್ಟಿಕ್​ನಿಂದ ಕಾರಿನ ಗಾಜನ್ನು ಒಡೆದಿದ್ದರು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೃಥ್ವಿ ಶಾ ದೂರಿಗೆ ಸಪ್ನಾ ಗಿಲ್ ಕೂಡ ಪ್ರತಿ ದೂರು ನೀಡಿದ್ದಾರೆ.

7 / 7

Published On - 6:30 pm, Tue, 21 February 23

Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್