Olympics 2028: ಮುಂದಿನ ಒಲಿಂಪಿಕ್ಸ್ ಯಾವಾಗ ಮತ್ತು ಎಲ್ಲಿ ನಡೆಯಲಿದೆ? ಯಾವ ದೇಶದ ಆತಿಥ್ಯ?

|

Updated on: Aug 12, 2024 | 4:12 PM

Olympics 2028: ಎಲ್ಲರಿಗೂ ತಿಳಿದಿರುವಂತೆ 4 ವರ್ಷಗಳಿಗೊಮ್ಮೆ ಒಲಿಂಪಿಕ್ಸ್ ನಡೆಯುತ್ತದೆ. ಇದರರ್ಥ 2024 ರ ಒಲಿಂಪಿಕ್ಸ್ ಮುಗಿದಿದ್ದು, ಮುಂದಿನ ಒಲಿಂಪಿಕ್ಸ್ 2028 ರಲ್ಲಿ ನಡೆಯಲ್ಲಿದೆ. ಮುಂದಿನ ಒಲಿಂಪಿಕ್ಸ್​ಗೆ ಈಗಾಗಲೇ ಆತಿಥ್ಯ ದೇಶವನ್ನು ನಿರ್ಧರಿಸಲಾಗಿದ್ದು, 34ನೇ ಆವೃತ್ತಿಯ ಒಲಿಂಪಿಕ್ಸ್​ಗೆ ಅಮೆರಿಕ ಆತಿಥ್ಯವಹಿಸುತ್ತಿದ್ದು, ಲಾಸ್ ಏಂಜಲೀಸ್ ನಗರದಲ್ಲಿ ಈ ಕ್ರೀಡಾಕೂಟಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

1 / 6
2024 ರ ಪ್ಯಾರಿಸ್ ಒಲಿಂಪಿಕ್ಸ್ ಕೊನೆಗೊಂಡಿದೆ. ಸಾಕಷ್ಟು ವಿವಾದಗಳ ನಡುವೆಯೂ ಫ್ರಾನ್ಸ್, ಈ ಮಹಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದೆ. ಇದೀಗ ಕ್ರೀಡಾ ಗ್ರಾಮದಿಂದ ಸ್ಪರ್ಧಿಗಳು ತಮ್ಮ ತಮ್ಮ ದೇಶಗಳಿಗೆ ತೆರಳುತ್ತಿದ್ದು, ಮುಂದಿನ ಒಲಿಂಪಿಕ್ಸ್​ಗಾಗಿ ಯೋಜನೆಗಳನ್ನು ರೂಪಿಸುವತ್ತಾ ಚಿತ್ತ ಹರಿಸುತ್ತಿದ್ದಾರೆ.

2 / 6
ಎಲ್ಲರಿಗೂ ತಿಳಿದಿರುವಂತೆ 4 ವರ್ಷಗಳಿಗೊಮ್ಮೆ ಒಲಿಂಪಿಕ್ಸ್ ನಡೆಯುತ್ತದೆ. ಇದರರ್ಥ 2024 ರ ಒಲಿಂಪಿಕ್ಸ್ ಮುಗಿದಿದ್ದು, ಮುಂದಿನ ಒಲಿಂಪಿಕ್ಸ್ 2028 ರಲ್ಲಿ ನಡೆಯಲ್ಲಿದೆ. ಮುಂದಿನ ಒಲಿಂಪಿಕ್ಸ್​ಗೆ ಈಗಾಗಲೇ ಆತಿಥ್ಯ ದೇಶವನ್ನು ನಿರ್ಧರಿಸಲಾಗಿದ್ದು, 34ನೇ ಆವೃತ್ತಿಯ ಒಲಿಂಪಿಕ್ಸ್​ಗೆ ಅಮೆರಿಕ ಆತಿಥ್ಯವಹಿಸುತ್ತಿದ್ದು, ಲಾಸ್ ಏಂಜಲೀಸ್ ನಗರದಲ್ಲಿ ಈ ಕ್ರೀಡಾಕೂಟಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

3 / 6
ಮೇಲೆ ಹೇಳಿದಂತೆ ಮುಂದಿನ ಒಲಿಂಪಿಕ್ಸ್ 2028 ರಲ್ಲಿ ನಡೆಯಲಿದೆ, ಅಂದರೆ ಈಗಿನಿಂದ ನಿಖರವಾಗಿ ನಾಲ್ಕು ವರ್ಷಗಳ ನಂತರ. ಈ ಒಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಅಲ್ಲಿ ಸಿದ್ಧತೆ ಆರಂಭವಾಗಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕೂಡ ಸೇರ್ಪಡೆಗೊಳ್ಳಲಿದೆ ಎಂದು ಐಸಿಸಿ ಭರವಸೆ ನೀಡಿರುವುದರಿಂದ, ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ಒಲಿಂಪಿಕ್ಸ್ ಇನ್ನಷ್ಟು ವಿಶೇಷವಾಗಿರಲಿದೆ.

4 / 6
ಇನ್ನು 2028 ರ ಒಲಿಂಪಿಕ್ಸ್ ಬಳಿಕ ಆ ನಂತರ ಒಲಿಂಪಿಕ್ಸ್ ಕ್ರೀಡಾಕೂಟ ಯಾವ ದೇಶದಲ್ಲಿ ನಡೆಯಲ್ಲಿದೆ ಎಂಬುದನ್ನು ನೋಡುವುದಾದರೆ.. 2032 ರ ಒಲಿಂಪಿಕ್ಸ್​ಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯವಹಿಸಲಿದೆ. ಆ ನಂತರ  ಅಂದರೆ 2036 ರ ಒಲಿಂಪಿಕ್ಸ್  ಹೋಸ್ಟಿಂಗ್ ಸಂಬಂಧಿಸಿದಂತೆ ಇನ್ನು ಯಾವುದೇ ಮಾಹಿತಿ ಹೊರಬಿದ್ದಿಲ್ಲ.

5 / 6
ಅಂದರೆ 2036 ರ ಒಲಿಂಪಿಕ್ಸ್ ಹೋಸ್ಟಿಂಗ್ ಹಕ್ಕುನ್ನು ಇದುವರೆಗೂ ಯಾವ ದೇಶಕ್ಕೂ ನೀಡಿಲ್ಲ. ಆದರೆ 2036 ಒಲಿಂಪಿಕ್ಸ್ ಆಯೋಜಿಸಲು ಈಜಿಪ್ಟ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈಜಿಪ್ಟ್ 2036 ಮತ್ತು 2040 ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ತನ್ನ ಬಿಡ್ ಅನ್ನು ಘೋಷಿಸಿದೆ.

6 / 6
ಆದರೆ ಇಲ್ಲಿಯವರೆಗೆ, ಆಫ್ರಿಕಾದಲ್ಲಿ ಒಲಿಂಪಿಕ್ ಕ್ರೀಡಾಕೂಟಗಳು ನಡೆದಿಲ್ಲ. ಹೀಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲು ಆಫ್ರಿಕಾಕ್ಕೆ ಅವಕಾಶ ಸಾಧ್ಯತೆಗಳಿವೆ. ವರದಿಯ ಪ್ರಕಾರ, 2040 ರ ಒಲಿಂಪಿಕ್ಸ್​ಗೆ ಆಫ್ರಿಕಾ ಆತಿಥ್ಯವಹಿಸಲಿದೆ ಎಂದು ಹೇಳಲಾಗುತ್ತಿದೆ.