Olympics
ಒಲಿಂಪಿಕ್ಸ್,ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದು. ಈ ಕ್ರೀಡಾಕೂಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸಲಾಗುತ್ತದೆ. 1992 ರ ತನಕ, ಚಳಿಗಾಲದ ಒಲಂಪಿಕ್ಸ್ ಮತ್ತು ಚತುರ್ ವಾರ್ಷಿಯ ಒಲಂಪಿಕ್ ಕ್ರೀಡಾಕೂಟ ಒಂದೇ ವರ್ಷದಲ್ಲಿ ನಡೆಯುತ್ತಿದ್ದವು. ಈಗ ಈ ಕ್ರೀಡಾಕೂಟಗಳ ನಡುವೆ ಎರಡು ವರ್ಷಗಳ ಅಂತರವಿದೆ. ಒಲಿಂಪಿಕ್ ಕ್ರೀಡಾಕೂಟವನ್ನು ಹುಟ್ಟು ಹಾಕಿದ್ದು ಗ್ರೀಸ್ ದೇಶ. ಕ್ರಿ.ಪೂ.776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಮತ್ತೆ ಒಲಂಪಿಕ್ಸ್ ಕೂಟ ನಡೆಯಲಿ 1300 ವರ್ಷ ಕಾಯಬೇಕಾಯಿತು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕೂಟವನ್ನು ಹಲವು ದೇಶಗಳು ನಡೆಸಿವೆ. ಈ ಬಾರಿಯ ಒಲಿಂಪಿಕ್ ಕ್ರೀಡಾಕೂಟ ಎಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಮತ್ತು ಕ್ರೀಡಾಕೂಟದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಯ ಪ್ರತಿಕ್ಷಣದ ಸುದ್ದಿಯನ್ನು ಇಲ್ಲಿ ಓದಬಹುದು.