AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diamond League: ಡೈಮಂಡ್ ಲೀಗ್​ನಿಂದ ಹಿಂದೆ ಸರಿದ ಅರ್ಷದ್: ಕಣದಲ್ಲಿ ನೀರಜ್ ಚೋಪ್ರಾ

Diamond League 2024: ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಕಣಕ್ಕಿಳಿಯಲಿದ್ದಾರೆ. ಶುಕ್ರವಾರ (22) ಮಧ್ಯರಾತ್ರಿ ನಡೆಯಲಿರುವ ಈ ಸ್ಪರ್ಧೆಯಿಂದ ಪಾಕಿಸ್ತಾನದ ಅರ್ಷದ್ ನದೀಮ್ ಹಿಂದೆ ಸರಿದಿದ್ದಾರೆ. ಇದಾಗ್ಯೂ ಒಲಿಂಪಿಕ್ಸ್ ಪದಕ ವಿಜೇತರಾದ ವಡ್ಲೆಜ್ ಹಾಗೂ ಪೀಟರ್ಸ್ ಕಣದಲ್ಲಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

Diamond League: ಡೈಮಂಡ್ ಲೀಗ್​ನಿಂದ ಹಿಂದೆ ಸರಿದ ಅರ್ಷದ್: ಕಣದಲ್ಲಿ ನೀರಜ್ ಚೋಪ್ರಾ
Arshad - Neeraj
ಝಾಹಿರ್ ಯೂಸುಫ್
|

Updated on: Aug 22, 2024 | 10:55 AM

Share

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತಕ್ಕೇರಿಸಿದ ನೀರಜ್ ಚೋಪ್ರಾ ಇದೀಗ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆಯಲಿರುವ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಲೀಗ್​ನಿಂದ ಪ್ಯಾರಿಸ್ ಒಲಿಂಪಿಕ್ಸ್​ನ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್ ಹಿಂದೆ ಸರಿದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಮುಗಿಸಿ ತವರಿಗೆ ಹಿಂತಿರುಗಿರುವ ಅರ್ಷದ್ ನದೀಮ್ ವಿಶ್ರಾಂತಿಯ ಕಾರಣ ಡೈಮಂಡ್ ಲೀಗ್​ನಿಂದ ಹಿಂದೆ ಸರಿದಿದ್ದಾರೆ. ಮತ್ತೊಂದೆಡೆ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನೀರಜ್ ಚೋಪ್ರಾ ಲೌಸನ್ನೆಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿರುವುದು ವಿಶೇಷ.

ಇನ್ನು ನೀರಜ್ ಚೋಪ್ರಾ ಅವರೊಂದಿಗೆ ವಿಶ್ವದ ಅಗ್ರಗಣ್ಯ ಜಾವೆಲಿನ್ ಎಸೆತಗಾರರಾದ ಜೆಕ್ ರಿಪಬ್ಲಿಕ್​ನ ಜಾಕುಬ್ ವಡ್ಲೆಜ್ ಮತ್ತು ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಕೂಡ ಕಣಕ್ಕಿಳಿಯುತ್ತಿದ್ದಾರೆ. ವಿಶೇಷ ಎಂದರೆ ಅಂಡರ್ಸನ್ ಪೀಟರ್ಸ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಹಾಗೆಯೇ ಟೋಕಿಯೋ ಒಲಿಂಪಿಕ್ಸ್​ನಲ್ಲಿ ವಡ್ಲೆಜ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಮೂವರು ಒಲಿಂಪಿಕ್ಸ್ ಪದಕ ವಿಜೇತರು ಡೈಮಂಡ್ ಲೀಗ್​ನಲ್ಲಿ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಎಷ್ಟು ಗಂಟೆಗೆ ಸ್ಪರ್ಧೆ ಶುರು?

ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರ ಜಾವೆಲಿನ್ ಥ್ರೋ ಸ್ಪರ್ಧೆಯು ಶುಕ್ರವಾರ 12:12 AM IST ಕ್ಕೆ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತದಲ್ಲಿ ಲೌಸನ್ನೆ ಡೈಮಂಡ್ ಲೀಗ್‌ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್‌ ಚಾನೆಲ್​ನಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್​ನಲ್ಲೂ ಲೈವ್ ಇರಲಿದೆ.

ಲೌಸನ್ನೆ ಡೈಮಂಡ್ ಲೀಗ್‌ಗೆ ಎಂಟ್ರಿ ಲಿಸ್ಟ್:

  • ನೀರಜ್ ಚೋಪ್ರಾ (ಭಾರತ): SB – 89.45 ಮೀ; PB – 89.94 ಮೀ
  • ರೋಡ್ರಿಕ್ ಜೆಂಕಿ ಡೀನ್ (ಜಪಾನ್): SB – 82.48 ಮೀ; PB – 84.28 ಮೀ
  • ಲಸ್ಸಿ ಎಟಲಾಟಾಲೊ (ಫಿನ್​ಲ್ಯಾಂಡ್): SB – 84.67m; PB – 86.44 ಮೀ
  • ಆರ್ಟರ್ ಫೆಲ್ಫ್ನರ್ (ಉಕ್ರೇನ್): SB – 83.95 ಮೀ; PB – 84.32 ಮೀ
  • ಆಂಡ್ರಿಯನ್ ಮರ್ಡೇರೆ (ಮೊಲ್ಡೊವ): SB – 84.13m; PB – 86.66 ಮೀ
  • ಎಡಿಸ್ ಮಾಟುಸೆವಿಸಿಯಸ್ (ಲಿಥುವೇನಿಯಾ): SB – 85.68m; PB – 89.17 ಮೀ
  • ಆಂಡರ್ಸನ್ ಪೀಟರ್ಸ್ (ಗ್ರೆನೆಡಾ): SB – 88.63m; PB – 93.07 ಮೀ
  • ಜಾಕುಬ್ ವಡ್ಲೆಜ್ (ಜೆಕ್ ರಿಪಬ್ಲಿಕ್): SB – 88.65 ಮೀ; PB – 90.88 ಮೀ
  • ಜೂಲಿಯನ್ ವೆಬರ್ (ಜರ್ಮನಿ): SB – 88.37m; PB – 89.54 ಮೀ
  • ಜೂಲಿಯಸ್ ಯೆಗೊ (ಕೀನ್ಯಾ): SB – 87.72 ಮೀ; PB – 92.72 ಮೀ

*SB- ಸೀಸನ್ ಬೆಸ್ಟ್

*PB- ಪರ್ಸನಲ್ ಬೆಸ್ಟ್

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ