AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಲಿಂಪಿಕ್ಸ್​ ಕ್ರಿಕೆಟ್​ ಪಂದ್ಯಾವಳಿಗೆ ದಿನಾಂಕ ನಿಗದಿ

Olympics 2028: 1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಪಂದ್ಯವೊಂದನ್ನು ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಸೆಣಸಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್‌ಗಳಿಂದ ಸೋಲಿಸಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಒಲಿಂಪಿಕ್ಸ್​ ಕ್ರಿಕೆಟ್​ ಪಂದ್ಯಾವಳಿಗೆ ದಿನಾಂಕ ನಿಗದಿ
Olympics 2028
TV9 Web
| Updated By: ಝಾಹಿರ್ ಯೂಸುಫ್|

Updated on: Jul 15, 2025 | 11:54 AM

Share

2028ರ ಒಲಿಂಪಿಕ್ಸ್‌  (LA olympics 2028) ಕ್ರೀಡಾಕೂಟದಲ್ಲಿ ಕ್ರಿಕೆಟ್​ ಅನ್ನು ಸೇರ್ಪಡೆಗೊಳಿಸಲಾಗಿದೆ. ಅದರಂತೆ ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಪಂದ್ಯಾಟಗಳು ಇರಲಿದೆ. ಈ ಪಂದ್ಯಾವಳಿಯು ಜುಲೈ 12 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಜುಲೈ 29 ರಂದು ನಡೆಯಲಿದೆ.  ಕ್ಯಾಲಿಫೋರ್ನಿಯಾದ ಪೊಮೊನಾದಲ್ಲಿರುವ ಫೇರ್‌ಗ್ರೌಂಡ್ಸ್ ಕ್ರಿಕೆಟ್ ಕ್ರೀಡಾಂಗಣವು ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ

ಮೊದಲ ಹಂತದ ಕ್ರಿಕೆಟ್ ಪಂದ್ಯಗಳು ಜುಲೈ 12 ರಿಂದ 18 ರವರೆಗೆ ನಡೆಯಲಿದ್ದು, ಇದಾದ ನಂತರ ಜುಲೈ 22 ರಿಂದ 28 ರವರೆಗೆ ಎರಡನೇ ಹಂತದ ಮ್ಯಾಚ್​ಗಳು ನಡೆಯಲಿದೆ. ಇನ್ನು ಅಂತಿಮ ಪಂದ್ಯವು  ಜುಲೈ 29 ರಂದು ಫೇರ್‌ಗ್ರೌಂಡ್ಸ್ ಕ್ರಿಕೆಟ್ ಕ್ರೀಡಾಂಗಣವು ಜರುಗಲಿದೆ.

ಟಿ20 ಟೂರ್ನಿ:

ಒಲಿಂಪಿಕ್ಸ್​  ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತದೆ. ಹೀಗಾಗಿ ಐಸಿಸಿ ಟಿ20 ತಂಡಗಳ ಶ್ರೇಯಾಂಕಗಳ ಆಧಾರದ ಮೇಲೆ ತಂಡಗಳು ಅರ್ಹತೆ ಪಡೆಯಲಿವೆ. ಅಂದರೆ ಒಲಿಂಪಿಕ್ಸ್​ ಅರ್ಹತೆಗೆ ನಿಗದಿ ಮಾಡಲಾದ ಸಮಯದ ವೇಳೆ ಐಸಿಸಿ ತಂಡಗಳ ಶ್ರೇಯಾಂಕವನ್ನು ಪರಿಗಣಿಸಿ 6 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ

ಐಸಿಸಿ ಪೂರ್ಣ ಸದಸ್ಯ ತಂಡಗಳು:

  1. ಭಾರತ
  2. ಅಫ್ಘಾನಿಸ್ತಾನ್
  3. ಆಸ್ಟ್ರೇಲಿಯಾ
  4. ಬಾಂಗ್ಲಾದೇಶ್
  5. ಇಂಗ್ಲೆಂಡ್
  6. ಐರ್ಲೆಂಡ್
  7. ನ್ಯೂಝಿಲೆಂಡ್
  8. ಪಾಕಿಸ್ತಾನ್
  9. ಸೌತ್ ಆಫ್ರಿಕಾ
  10. ಶ್ರೀಲಂಕಾ
  11. ವೆಸ್ಟ್ ಇಂಡೀಸ್
  12. ಝಿಂಬಾಬ್ವೆ

ಇನ್ನು ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಆತಿಥ್ಯವಹಿಸಲಿರುವ ಯುಎಸ್​ಎ ತಂಡಕ್ಕೂ ಕ್ರಿಕೆಟ್ ಟೂರ್ನಿಯಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.

1900 ರಲ್ಲಿತ್ತು ಕ್ರಿಕೆಟ್:

1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಕ್ರಿಕೆಟ್ ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್‌ಗಳಿಂದ ಸೋಲಿಸಿದ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ 128 ವರ್ಷಗಳ ಬಳಿಕ ಮತ್ತೊಮ್ಮೆ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಕಾದಾಟಕ್ಕೆ ಅವಕಾಶ ದೊರೆಯುತ್ತಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ರವೀಂದ್ರ ಜಡೇಜಾ ಕಾರಣ..!

ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕಾದಾಟ:

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್​ನ್ನು ಸೇರಿಸಲಾಗಿತ್ತು. ಈ  ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಚಿನ್ನದ ಪದಕ ಗೆದ್ದರೆ, ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಒಲಿಂಪಿಕ್ಸ್​ ಅಂಗಳಕ್ಕೆ ಕ್ರಿಕೆಟ್ ಕಾಲಿಡುತ್ತಿರುವುದರಿಂದ ಭಾರತವು ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಿದೆ.