Vinesh Phogat: ವಿನೇಶ್ ಫೋಗಟ್ ತೀರ್ಪು ಪ್ರಕಟ: ಕೋರ್ಟ್ ಹೇಳಿದ್ದೇನು?

Vinesh Phogat: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಕೈ ತಪ್ಪುತ್ತಿದ್ದಂತೆ ವಿನೇಶ್ ಫೋಗಟ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಬೆಳ್ಳಿ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ಆಸೆಯಲ್ಲಿದ್ದರು. ಆದರೀಗ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ವಿನೇಶ್ ಫೋಗಟ್ ಅವರ ಪದಕ ಕನಸು ಕಮರಿದೆ.

Vinesh Phogat: ವಿನೇಶ್ ಫೋಗಟ್ ತೀರ್ಪು ಪ್ರಕಟ: ಕೋರ್ಟ್ ಹೇಳಿದ್ದೇನು?
Vinesh Phogat
Follow us
ಝಾಹಿರ್ ಯೂಸುಫ್
|

Updated on:Aug 20, 2024 | 9:09 AM

ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಫೈನಲ್​ಗೆ ತಲುಪಿದರೂ, ಪದಕವಿಲ್ಲದೆ ಹಿಂತಿರುಗಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಅಂತಿಮ ಪಂದ್ಯಕ್ಕೂ ಮುನ್ನ ಅನರ್ಹಗೊಂಡಿದ್ದು. ಮಹಿಳೆಯರ 50 ಕೆಜಿ ತೂಕದ ವಿಭಾಗದಲ್ಲಿ ಫೈನಲ್​ಗೆ ಪ್ರವೇಶಿಸಿದ್ದ ಫೋಗಟ್ ಅವರು ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿತ್ತು. ಇದೇ ಕಾರಣದಿಂದಾಗಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು.

ಫೈನಲ್‌ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಈ ಮನವಿಯನ್ನು ಸಿಎಎಸ್ ವಜಾಗೊಳಿಸಿತು. ಇದೀಗ ವಿನೇಶ್ ಫೋಗಟ್ ಅವರ ಮನವಿಯನ್ನು ತಿರಸ್ಕರಿಸಲು ಕಾರಣವೇನು ಎಂಬುದರ ವಿಸ್ತೃತ ವರದಿಯನ್ನು ಸಿಎಎಸ್ ಬಿಡುಗಡೆ ಮಾಡಿದೆ. ಈ ವರದಿಯ ಮುಖ್ಯಾಂಶಗಳು ಈ ಕೆಳಗಿನಂತಿವೆ…

  • ಒಂದು ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ನಿಯಮಗಳು ಸಮಾನವಾಗಿರುತ್ತವೆ. ಇಲ್ಲಿ ಯಾರಿಗೂ ಮಿತಿಗಿಂತ ಹೆಚ್ಚಿನ ತೂಕ ಹೊಂದಲು ಅನುಮತಿಸುವುದಿಲ್ಲ. ಆ ಮಿತಿಗಿಂತ ಕೆಳಗಿರುವುದನ್ನು ಖಚಿತಪಡಿಸಿಕೊಳ್ಳುವುದು ಕ್ರೀಡಾಪಟುವಿನ ಜವಾಬ್ದಾರಿಯಾಗಿದೆ.
  • ಅರ್ಜಿದಾರರು ತೂಕದ ಮಿತಿಯನ್ನು ಮೀರಿದ್ದಾರೆ ಎಂಬುದಕ್ಕೆ ಯಾವುದೇ ವಿವಾದವಿಲ್ಲ. ಆಕೆ ಮೇಲಿನ ಸಾಕ್ಷ್ಯವನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ವಿಚಾರಣೆಯಲ್ಲಿ ನೀಡಿದ್ದಾಳೆ. ಆಕೆಯ ಪ್ರಕರಣವೆಂದರೆ ಹೆಚ್ಚುವರಿ ಪ್ರಮಾಣವು 100 ಗ್ರಾಂ ಆಗಿತ್ತು ಮತ್ತು ಇದು ಒಂದು ಸಣ್ಣ ಹೆಚ್ಚುವರಿಯಾಗಿದೆ. ನಿರ್ದಿಷ್ಟವಾಗಿ ಮುಟ್ಟಿನ ಪೂರ್ವ ಹಂತದಲ್ಲಿ ಕುಡಿಯುವ ನೀರು ಮತ್ತು ಇತರೆ ಕಾರಣಗಳಿಂದ ಇದು ಸಂಭವಿಸಬಹುದು ಎಂದು ವಿವರಿಸಿದ್ದಾರೆ. ಆದರೆ ಇದು ಇತರರಿಗೂ ಅನ್ವಾಯಿಸುತ್ತದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
  • ಸೆಮಿಫೈನಲ್‌ನಲ್ಲಿ ಸೋತ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿಯನ್ನು ನೀಡಬೇಕೆಂದು ವಿನೇಶ್ ಒತ್ತಾಯಿಸಿದ್ದರು. ಆದರೆ ಇಲ್ಲಿ ಅನರ್ಹತೆಯು ಮುಖ್ಯ ವಿಷಯವಾಗಿದೆ ಎಂದು ಕೋರ್ಟ್ ತಿಳಿಸಿದೆ.
  • ಆಗಸ್ಟ್ 6 ಮತ್ತು 7 ರಂದು ನಡೆದದ್ದು ಎರಡು ಪ್ರತ್ಯೇಕ ಸ್ಪರ್ಧೆಗಳು ಎಂಬ ತನ್ನ ವಾದಕ್ಕೆ ಬೆಂಬಲವಾಗಿ ಅರ್ಜಿದಾರರು ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ. ಆದರೆ ಇಲ್ಲಿ ಪ್ರತಿದಿನದ ತೂಕವು ಇಡೀ ಪಂದ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ.
  • ನಿಯಮಗಳ 7ನೇ ವಿಧಿಯು ಪ್ರತಿ ಸ್ಪರ್ಧಿಯು ತನ್ನ ತೂಕಕ್ಕೆ ಅನುಗುಣವಾದ ಒಂದು ತೂಕ ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಅದಕ್ಕಿಂತ ಹೆಚ್ಚಿನ ತೂಕ ಹೊಂದಿರುವುದನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಒತ್ತಿ ಹೇಳಿದೆ.
  • ಇನ್ನು ಬೆಳ್ಳಿ ಪದಕದ ಮನವಿಗೆ ಸ್ಪಷ್ಟನೆ ನೀಡಿರುವ ಕೋರ್ಟ್, ಯಾವುದೇ ಪದಕವನ್ನು ನೇರವಾಗಿ ಘೋಷಿಸುವ ಅಧಿಕಾರವಿಲ್ಲ. ಅದು ಐಒಸಿ ನಿರ್ಧಾರದ ಮೇಲೆ ನಿಂತಿದೆ. ಸ್ಪರ್ಧೆಯ ಶ್ರೇಯಾಂಕಗಳ ಆಧಾರದ ಮೇಲೆ ಪದಕಗಳನ್ನು ನೀಡಲಾಗುತ್ತದೆ. ಇಲ್ಲಿ ಅರ್ನಹಗೊಂಡಿರುವ ಕಾರಣ ವಿನೇಶ್ ಶ್ರೇಯಾಂಕವನ್ನು ಹೊಂದಿಲ್ಲ.
  • ಇದೇ ವೇಳೆ ಸ್ಪರ್ಧೆಯ ಎರಡನೇ ದಿನದಂದು ತೂಕವನ್ನು ಕಳೆದುಕೊಳ್ಳುವುದು ಕಠಿಣ ಎಂದು ಕೋರ್ಟ್ ಒಪ್ಪಿಕೊಂಡಿದೆ. ಅದೂ ಕೂಡ ಅವರು ಯಾವುದೇ ತಪ್ಪು ಅಥವಾ ಕಾನೂನುಬಾಹಿರ ವಿಧಾನವನ್ನು ಬಳಸದಿದ್ದಾಗ. ಇಲ್ಲಿ ಅರ್ಹರೆಂದು ಘೋಷಿಸಲ್ಪಟ್ಟ ಸುತ್ತಿನ ಫಲಿತಾಂಶಗಳನ್ನು ಪರಿಗಣಿಸಬೇಕು ಮತ್ತು ಅನರ್ಹತೆಯಿಂದಾಗಿ ಅವರು ಹೊರಹಾಕಲ್ಪಟ್ಟ ಸುತ್ತಿನ ಶ್ರೇಯಾಂಕವನ್ನು ಪರಿಗಣಿಸಬಾರದು. ಇದು ಸರಿಯಾದ ಮತ್ತು ನ್ಯಾಯಯುತ ಪರಿಹಾರವಾಗಿದೆ ಎಂದು ಕೋರ್ಟ್ ಐಒಸಿ ತಿಳಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕುಸ್ತಿಯ ನಿಯಮ ಬದಲಾದರೂ ಅಚ್ಚರಿಪಡಬೇಕಿಲ್ಲ.

Published On - 9:08 am, Tue, 20 August 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ