- Kannada News Photo gallery Neeraj Chopra's brand value Increase After javelin star adds silver in Paris Olympics
Neeraj Chopra: ಬರೋಬ್ಬರಿ 377 ಕೋಟಿ ರೂ..! ಗಗನಕ್ಕೇರಿದ ನೀರಜ್ ಚೋಪ್ರಾ ಬ್ರಾಂಡ್ ವ್ಯಾಲ್ಯೂ
Neeraj Chopra: ಮನಿ ಕಂಟ್ರೋಲ್ ವರದಿಯು ಈ ವರ್ಷದ ಅಂತ್ಯದ ವೇಳೆಗೆ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯವು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ಹೇಳುತ್ತದೆ. ಪ್ರಸ್ತುತ ನೀರಜ್ ಚೋಪ್ರಾ ಅವರ ಬ್ರಾಂಡ್ ಮೌಲ್ಯ 29.6 ಮಿಲಿಯನ್ ಡಾಲರ್ ಅಂದರೆ 248 ಕೋಟಿ. ಈ ವರ್ಷದ ಅಂತ್ಯದ ವೇಳೆಗೆ ಅವರ ಬ್ರಾಂಡ್ ಮೌಲ್ಯವು 50 ಪ್ರತಿಶತದಷ್ಟು ಹೆಚ್ಚಾದರೆ ಅದು 377 ಕೋಟಿ ರೂ.ಗೆ ಏರಿಕೆಯಾಗಲಿದೆ.
Updated on:Aug 17, 2024 | 7:29 PM

ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ 89.45 ಮೀಟರ್ ದೂರ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಇದರೊಂದಿಗೆ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಾಧನೆಯನ್ನು ನೀರಜ್ ಮಾಡಿದ್ದರು. ಕಳೆದ ಒಲಿಂಪಿಕ್ಸ್ನಲ್ಲಿ ಚಿನ್ನದ ಪಕದ ಗೆದ್ದಿದ್ದ ನೀರಜ್ಗೆ ಈ ಒಲಿಂಪಿಕ್ಸ್ನಲ್ಲಿ ಮತ್ತೆ ಆ ಸಾಧೆನ ಮಾಡಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಮತ್ತೊಮ್ಮೆ ದೇಶದ ಮನೆ ಮಾತನಾಗಿದ್ದಾರೆ. pದಕ ಗೆದ್ದ ನೀರಜ್ ಮೇಲೆ ಬಹುಮಾನದ ಸುರಿಮಳೆಯೂ ಆಗುತ್ತಿದೆ. ಇದರ ಜೊತೆಗೆ ನೀರಜ್ ಅವರ ನಿವ್ವಳ ಮೌಲ್ಯ, ಬ್ರಾಂಡ್ ಮೌಲ್ಯ ಮತ್ತು ಅನುಮೋದನೆ ಪೋರ್ಟ್‌ಫೋಲಿಯೊದಲ್ಲೂ ಸಾಕಷ್ಟು ಹೆಚ್ಚಳವಾಗಲಿದೆ ಎಂದು ವರದಿಯಾಗಿದೆ.

ನೀರಜ್ ಚೋಪ್ರಾ ಅವರ ಎಂಡಾರ್ಸ್‌ಮೆಂಟ್ ಪೋರ್ಟ್‌ಫೋಲಿಯೊ ಈ ವರ್ಷ 32 ರಿಂದ 34ಕ್ಕೆ ತಲುಪಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ನೀರಜ್ ಈ ವರ್ಷ 32 ರಿಂದ 34 ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಮನಿ ಕಂಟ್ರೋಲ್ ವರದಿಯ ಪ್ರಕಾರ, ನೀರಜ್ ಚೋಪ್ರಾ ಪ್ರಸ್ತುತ 24 ಬ್ರ್ಯಾಂಡ್‌ಗಳನ್ನು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದೀಗ ನೀರಜ್ 6 ರಿಂದ 8 ಹೊಸ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇದರರ್ಥ ನೀರಜ್ ಅವರು ಆಗಿ 32 ರಿಂದ 34 ಬ್ರಾಂಡ್‌ಗಳ, ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ದೊಡ್ಡ ವಿಷಯವೆಂದರೆ ಈ ಬ್ರ್ಯಾಂಡ್‌ಗಳು ಅಮೇರಿಕನ್ ಸ್ಪೋರ್ಟ್ಸ್ ವೇರ್ ಕಂಪನಿ ಅಂಡರ್ ಆರ್ಮರ್ ಮತ್ತು ಸ್ವಿಸ್ ವಾಚ್ ಕಂಪನಿ ಒಮೆಗಾವನ್ನು ಸಹ ಒಳಗೊಂಡಿವೆ. ನೀರಜ್ ಚೋಪ್ರಾ ಅವರೊಂದಿಗೆ 6 ರಿಂದ 8 ಹೊಸ ಬ್ರಾಂಡ್‌ಗಳು ಒಪ್ಪಂದ ಮಾಡಿಕೊಂಡರೆ, ಈ ವಿಚಾರದಲ್ಲಿ ನೀರಜ್, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳಿವೆ.

ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ 20 ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಪಾಂಡ್ಯ ಒಂದು ಬ್ರಾಂಡ್ ಜೊತೆ ಒಪ್ಪಂದ ಮಾಡಿಕೊಳ್ಳಲು 2.5 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ. ಆದರೆ ನೀರಜ್ ಚೋಪ್ರಾ ಇದುವರೆಗೆ ತಮ್ಮ ಎಲ್ಲಾ ಒಪ್ಪಂದಗಳಿಗೆ ವಾರ್ಷಿಕವಾಗಿ ಸುಮಾರು 3 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ತೆಗೆದುಕೊಳ್ಳುತ್ತಿದ್ದರು. ಆದರೀಗ ಈ ಶುಲ್ಕ ಸುಮಾರು 4.5 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಮನಿ ಕಂಟ್ರೋಲ್ ವರದಿಯು ಈ ವರ್ಷದ ಅಂತ್ಯದ ವೇಳೆಗೆ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯವು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಬಹುದು ಎಂದು ಹೇಳುತ್ತದೆ. ಪ್ರಸ್ತುತ ನೀರಜ್ ಚೋಪ್ರಾ ಅವರ ಬ್ರಾಂಡ್ ಮೌಲ್ಯ 29.6 ಮಿಲಿಯನ್ ಡಾಲರ್ ಅಂದರೆ 248 ಕೋಟಿ. ಈ ವರ್ಷದ ಅಂತ್ಯದ ವೇಳೆಗೆ ಅವರ ಬ್ರಾಂಡ್ ಮೌಲ್ಯವು 50 ಪ್ರತಿಶತದಷ್ಟು ಹೆಚ್ಚಾದರೆ ಅದು 377 ಕೋಟಿ ರೂ.ಗೆ ಏರಿಕೆಯಾಗಲಿದೆ.
Published On - 6:57 pm, Sat, 17 August 24



















