ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಕೆಂಪು ಬಣ್ಣದ ಒನ್ಪ್ಲಸ್ 11R 5G ಮಾರಾಟ ಆರಂಭ
OnePlus 11R 5G Solar Red Colour First Sale: ಸ್ನಾಪ್‌ಡ್ರಾಗನ್ 8+ Gen 1 SoC ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿರುವ ಒನ್ಪ್ಲಸ್ 11R 5G ಸ್ಮಾರ್ಟ್ಫೋನ್ ಇಂದಿನಿಂದ ಇ-ಕಾಮರ್ಸ್ ಸೈಟ್ ನೀಡುವ ಅತಿದೊಡ್ಡ ಮಾರಾಟಗಳಲ್ಲಿ ಒಂದಾದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಮಾರಾಟ ಕಾಣುತ್ತಿದೆ.
1 / 6
ಒನ್ಪ್ಲಸ್ ಕಂಪನಿ ಈ ವರ್ಷ ಫೆಬ್ರವರಿಯಲ್ಲಿ ಒನ್ಪ್ಲಸ್ 11R 5G (OnePlus 11R 5G) ಸ್ಮಾರ್ಟ್ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿತ್ತು. ಈಗ, ಕಂಪನಿಯು ಈ ಹ್ಯಾಂಡ್‌ಸೆಟ್ ಅನ್ನು ಸೋಲಾರ್ ರೆಡ್ ಎಂಬ ಹೊಸ ಬಣ್ಣದ ರೂಪಾಂತರದಲ್ಲಿ ಪರಿಚಯಿಸಿದೆ.
2 / 6
ಸ್ನಾಪ್‌ಡ್ರಾಗನ್ 8+ Gen 1 SoC ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿರುವ ಒನ್ಪ್ಲಸ್ 11R 5G ಸ್ಮಾರ್ಟ್ಫೋನ್ ಇಂದಿನಿಂದ ಇ-ಕಾಮರ್ಸ್ ಸೈಟ್ ನೀಡುವ ಅತಿದೊಡ್ಡ ಮಾರಾಟಗಳಲ್ಲಿ ಒಂದಾದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಮಾರಾಟ ಕಾಣುತ್ತಿದೆ.
3 / 6
ಒನ್ಪ್ಲಸ್ 11R 5G ಸ್ಮಾರ್ಟ್ಫೋನ್ನ 8GB + 12GB ರೂಪಾಂತರದ ಬೆಲೆ ರೂ. 39,999 ಇದೆ. ಅಂತೆಯೆ 16GB + 256GB ಮತ್ತು 18GB + 512GB ಸ್ಟೋರೇಜ್ಗೆ ಕ್ರಮವಾಗಿ ರೂ. 44,999 ಮತ್ತು ರೂ. 45,999. ಹೊಸ ಸೋಲಾರ್ ರೆಡ್ ಕಲರ್ 18GB ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಈ ಫೋನಿನ ಬೆಲೆಯು ರೂ. 34,999 ಆಗಿದೆ.
4 / 6
ಒನ್ಪ್ಲಸ್ 11R 5G ಫೋನ್ 6.74-ಇಂಚಿನ ಪೂರ್ಣ-HD+ (2772×1240) AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 40Hz-120Hz ನ ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ದರದೊಂದಿಗೆ ಬರುತ್ತದೆ. 1000Hz ವರೆಗಿನ ಟಚ್ ಸ್ಯಾಂಪಲ್ ದರ ಮತ್ತು ಪಿಕ್ಸೆಲ್ 5 ಸಾಂದ್ರತೆಯ ಗರಿಷ್ಠ ಸಾಂದ್ರತೆ ಇದೆ. ಈ ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 8+ Gen 1 SoC ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ OxygenOS ನೊಂದಿಗೆ ಕಾರ್ಯನಿರ್ವಹಿಸುತ್ತದೆ.
5 / 6
ಕ್ಯಾಮೆರಾ ವಿಚಾರಕ್ಕೆ ಬಂದರೆ, ಒನ್ಪ್ಲಸ್ 11R 5Gಯ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವು 50-ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಸಂವೇದಕದಿಂದ ಕೂಡಿದೆ. ಜೊತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾ ಡಿಸ್ ಪ್ಲೇಯ ಮೇಲ್ಭಾಗದಲ್ಲಿದ್ದು, ಪಂಚ್-ಹೋಲ್ ಸ್ಲಾಟ್ನೊಂದಿಗೆ 16-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.
6 / 6
ಈ ಸ್ಮಾರ್ಟ್ಫೋನ್ 100W SUPERVOOC S ಫ್ಲ್ಯಾಷ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 5G, 4G, Wi-Fi, ಬ್ಲೂಟೂತ್ 5.3, NFC ಮತ್ತು GPS ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಹ್ಯಾಂಡ್‌ಸೆಟ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಅಳವಡಿಸಲಾಗಿದೆ.