ಭಾರತದಲ್ಲಿ ತನ್ನ ನಾರ್ಡ್ ಸರಣಿಯ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡಿ ಮಾರುಕಟಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಒನ್ಪ್ಲಸ್ ಕಂಪನಿ ಇದೀಗ ಮತ್ತೆ ಬಂದಿದೆ. ಸತತವಾಗಿ ಹಲವಾರು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿರುವ OnePlus, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಫೋನ್ ಅನ್ನು ಅನಾವರಣ ಮಾಡಲು ಸಿದ್ಧವಾಗಿದೆ. OnePlus Nord 3 ಎಂದು ಹೆಸರಿಸಲಾದ ಫೋನ್ ಏಪ್ರಿಲ್ ಮತ್ತು ಜೂನ್ ನಡುವೆ ಬಿಡುಗಡೆಯಾಗಲಿದೆ.
OnePlus Nord 3 ಫೋನ್ 6.7-ಇಂಚಿನ ಪೂರ್ಣ HD + OLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಫೋನ್ A78 ಕೋರ್ MediaTek Dimension 8100 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದು 50 ಮೆಗಾಪಿಕ್ಸೆಲ್ ಸೋನಿ IMX766 ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 32 ಮೆಗಾಪಿಕ್ಸೆಲ್ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿರುತ್ತದೆ.
OnePlus Nord 3 ಫೋನಿನ ಪ್ರಮುಖ ಹೈಲೇಟ್ 150W ಚಾರ್ಜರ್. ಹೌದು, ಈ ಫೋನ್ 150 ವ್ಯಾಟ್ ಸೂಪರ್ VOOC ಚಾರ್ಜಿಂಗ್ ತಂತ್ರಜ್ಞಾನದಿಂದ ಚಾಲಿತವಾಗಿದೆ. ಇದು ಕೇವಲ 15 ನಿಮಿಷಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಅನುಮತಿಸುತ್ತದೆ. ಅಲ್ಲದೆ ಶೇಕಡಾ 1 ರಿಂದ 50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲು ಕೇವಲ 5 ನಿಮಿಷಗಳು ಸಾಕಂತೆ.
ಎರಡು ವಾರಗಳ ಹಿಂದೆಯಷ್ಟೆ ದೇಶದಲ್ಲಿ ಬಹುನಿರೀಕ್ಷಿತ ಹೊಸ ಒನ್ಪ್ಲಸ್ ನಾರ್ಡ್ ಸಿಇ 2 5G (OnePlus Nord CE 2 5G) ಸ್ಮಾರ್ಟ್ಫೋನ್ ಅನಾವರಣ ಮಾಡಿತ್ತು. ಇದು ಕಳೆದ ವರ್ಷ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಒನ್ಪ್ಲಸ್ ನಾರ್ಡ್ CE 5G ಯ ಉತ್ತರಾಧಿಕಾರಿಯಾಗಿದೆ.
ಭಾರತದಲ್ಲಿ ಒನ್ಪ್ಲಸ್ ನಾರ್ಡ್ CE 2 5G ಇದರ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್ಗೆ 23,999 ರೂ. ಅಂತೆಯೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಆಗಿದೆ.
Published On - 8:46 am, Thu, 3 March 22