World Wildlife Day: ಇವೇ ನೋಡಿ ಭಾರತದಲ್ಲಿ ಭೇಟಿ ನೀಡಬಹುದಾದ 5 ವನ್ಯಜೀವಿ ಅಭಯಾರಣ್ಯಗಳು
ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.
Updated on: Mar 03, 2022 | 12:04 PM

ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.

ರಣಥಂಬೋರ್ ನ್ಯಾಷನಲ್ ಪಾರ್ಕ್: ರಾಜಸ್ಥಾನದ ರಣಥಂಬೋರ್ನಲ್ಲಿರುವ ಈ ವನ್ಯ ಜೀವಿ ತಾಣ ಭಾರತದ ಪ್ರಮುಖ ವನ್ಯ ಜೀವಿ ತಾಣಗಳಲ್ಲೊಂದು. ಇಲ್ಲಿಗೆ ಭೇಟಿ ನೀಡದರೆ ಸುಂದರ ಸೂರ್ಯಾಸ್ತದೊಂದಿಗೆ ವಿವಿಧ ಬಗೆಯ ಪ್ರಾಣಿಗಳನ್ನು ಸಫಾರಿ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ: ನೈನಿತಾಲದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನ ಅಪರೂಪದ ವನ್ಯ ಜೀವಿಗಳ ತಾಣವಾಗಿದೆ. ಇಲ್ಲಿಗೆ ನೀವು ಬೇಟಿ ನೀಡಿದರೆ ಅಪರೂಪದ ಬಿಳಿ ಹುಲಿ, ಆನೆ, ಜಿಂಕೆ ಎಲ್ಲವನ್ನೂ ನೋಡಬಹುದಾಗಿದೆ.

ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಭಾರತದ ಬಹು ಜನಪ್ರಿಯ ವನ್ಯ ಜೀವಿ ತಾಣವಾಗಿದೆ. ಪ್ರಪಂಚದ ಅತಿ ಹೆಚ್ಚು ಒಂದು ಕೊಂಬಿನ ಘೇಂಡಾಮೃಗದ ಜನಸಂಖ್ಯೆಯನ್ನು ಹೊಂದಿದ ಸ್ಥಳವಾಗಿದೆ. ಹೀಗಾಗಿ ಒಮ್ಮೆಯಾದರೂ ನೀವು ಇಲ್ಲಿ ಭೇಟಿ ನೀಡಲೇಬೇಕು.

ಕೊಯ್ನಾ ವನ್ಯಜೀವಿ ಅಭಯಾರಣ್ಯ: ಮಹಾರಾಷ್ಟ್ರದಲ್ಲಿರುವ ಭಾರತದ ಅತ್ಯಂತ ಸುಂದರ ವನ್ಯ ಜೀವಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹಾವು, ವಿವಿಧ ರೀತಿಯ ಪಕ್ಷಿಗಳು, ಹುಲಿ ಮುಖ್ಯವಾಗಿ ಕಾಣಸಿಗುತ್ತವೆ. ಹೀಗಾಗಿ ನಿಮ್ಮ ಪ್ರವಾಸ ಕೊಯ್ನಾದೆಡೆಗೆ ಹೋದರೆ ಸುಂದರ ಸ್ಥಳವನ್ನು ನೋಡಿದ ಅನುಭವ ಸಿಗಲಿದೆ.

ಕಾರಕೋರಂ ವನ್ಯಜೀವಿ ಅಭಯಾರಣ್ಯ: ಜಮ್ಮು ಕಾಶ್ಮೀರದಲ್ಲಿರುವ ಕಾರಕೋರಂ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ಸ್ಥಳವಾಗಲಿದೆ. ಮಂಜಿನಿಂದ ತುಂಬಿದ ಜಾಗವನ್ನು ನೋಡುವುದು ಒಂದು ಅನುಭವವಾದರೆ ಅಲ್ಲಿ ಮಾತ್ರ ಕಾಣಸಿಗುವ ಯಾಕ, ಝೀಬ್ರಾದಂತಹ ಅಪರೂಪದ ಪ್ರಾಣಿಗಳು ಕಾಣಸಿಗುತ್ತವೆ.
























