IND vs ENG: ವಿಶ್ವ ದರ್ಜೆಯ ಬೌಲರ್! ಸಿರಾಜ್ ಬೌಲಿಂಗ್ಗೆ ಬೋಲ್ಡ್ ಆದ ಪಾಕ್ ಪತ್ರಕರ್ತೆ ಜೈನಾಬ್
TV9 Web | Updated By: ಪೃಥ್ವಿಶಂಕರ
Updated on:
Aug 20, 2021 | 2:57 PM
Mohammed Siraj: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವಿಜಯವನ್ನು ಜೈನಾಬ್ ಶ್ಲಾಘಿಸಿದರು ಮತ್ತು ಎಲ್ಲಾ ಬೌಲರ್‌ಗಳನ್ನು ಅಭಿನಂದಿಸಿದರು. ಈ ಬಗ್ಗೆ ಮಾತನಾಡಿದ ಅವರು ಬುಮ್ರಾ ಆಟವನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ.
1 / 5
ಟೆಸ್ಟ್ಗೆ ಪಾದಾರ್ಪಣೆ ಮಾಡಿದ ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಅವರು ಕೇವಲ 7 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಲಾರ್ಡ್ಸ್‌ನಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.
2 / 5
ಈ ಅದ್ಭುತ ಪ್ರದರ್ಶನದಿಂದಾಗಿ, ಮೊಹಮ್ಮದ್ ಸಿರಾಜ್ ಅವರ ಅಭಿಮಾನಿಗಳು ಪ್ರಪಂಚದಾದ್ಯಂತ ಹೆಚ್ಚಾಗಿದ್ದಾರೆ. ಇವರಲ್ಲಿ ಪಾಕಿಸ್ತಾನದ ಕ್ರೀಡಾ ಪತ್ರಕರ್ತ ಜೈನಾಬ್ ಅಬ್ಬಾಸ್ ಕೂಡ ಅವರ ಅಭಿಮಾನಿಯಾಗಿದ್ದಾರೆ.
3 / 5
ಪಾಕಿಸ್ತಾನದ ಕ್ರೀಡಾ ಪತ್ರಕರ್ತೆ ಜೈನಾಬ್ ಅಬ್ಬಾಸ್, ಕಳೆದ ಕೆಲವು ವರ್ಷಗಳಿಂದ ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಹಾಜರಾಗುತ್ತಿದ್ದು, ಸಿರಾಜ್ ಅವರನ್ನು ಹೊಗಳಿದ್ದಾರೆ. ಅವರು ಸಿರಾಜ್ಗೆ ವಿಶ್ವ ದರ್ಜೆಯ ಬೌಲರ್ ಎಂಬ ಬಿರುದನ್ನು ಕೂಡ ಕೊಟ್ಟಿದ್ದಾರೆ.
4 / 5
ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವಿಜಯವನ್ನು ಜೈನಾಬ್ ಶ್ಲಾಘಿಸಿದರು ಮತ್ತು ಎಲ್ಲಾ ಬೌಲರ್‌ಗಳನ್ನು ಅಭಿನಂದಿಸಿದರು. ಈ ಬಗ್ಗೆ ಮಾತನಾಡಿದ ಅವರು ಬುಮ್ರಾ ಆಟವನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ. ಇಶಾಂತ್ ಕೂಡ ಅದ್ಭುತ ಆಟಗಾರ. ಶಮಿ ಬೌಲಿಂಗ್ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲೂ ಉತ್ತಮ ಕೊಡುಗೆ ನೀಡಿದರು ಎಂದು ಜೈನಾಬ್ ಹೇಳಿದ್ದಾರೆ.
5 / 5
33ವರ್ಷದ ಜೈನಾಬ್, ಮೂಲತಃ ಪಾಕಿಸ್ತಾನದ ಲಾಹೋರ್‌ನವರು. ಇಂಗ್ಲೆಂಡ್‌ನಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದಾರೆ. ಜೊತೆಗೆ ತನ್ನ ಶಿಕ್ಷಣವನ್ನು ಇಂಗ್ಲೆಂಡ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದಳು. ಜೈನಾಬ್ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೊದಲ ಮಹಿಳಾ ಕಾಮೆಂಟೇಟರ್ ಎಂದು ಪ್ರಸಿದ್ಧರಾಗಿದ್ದಾರೆ.
Published On - 2:57 pm, Fri, 20 August 21