
ಪಾಲಿಟಾನಾ ನಗರದಂತೆ ರಾಜ್‌ಕೋಟ್, ಬರೋಡಾ, ಜುನಾಗಢ್ ಮತ್ತು ಅಹಮದಾಬಾದ್‌ನಂತಹ ನಗರಗಳು ಸಹ ಮಾಂಸಾಹಾರವನ್ನು ನಿಷೇಧಿಸಲು ಯೋಜನೆ ನಡೆಸಿವೆ.

ಪರಿಣಾಮವಾಗಿ ಜೈನ ಸಮುದಾಯದ ಭಾವನೆಗಳನ್ನು, ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ, ಅಲ್ಲಿನ ಸರ್ಕಾರವು ಪಾಲಿಟಾನಾ ನಗರದಲ್ಲಿ ಪ್ರಾಣಿ ವಧೆ, ಮೀನು, ಮಾಂಸ, ಮೊಟ್ಟೆ ಮಾರಾಟದ ನಿಷೇಧವನ್ನು ಜಾರಿಗೆ ತಂದಿತು. ಮತ್ತು ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡವನ್ನು ಸಹ ವಿಧಿಸಿತು.

ಜೈನ ಧರ್ಮದ ಪ್ರಾಬಲ್ಯವಿರುವ ಪಾಲಿಟಾನಾದಲ್ಲಿ 2014 ರಲ್ಲಿ 200ಕ್ಕೂ ಅಧಿಕ ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿ, ನಗರದಲ್ಲಿದ್ದ 250 ಕ್ಕೂ ಹೆಚ್ಚು ಮಾಂಸದಂಗಡಿಗಳನ್ನು ಮುಚ್ಚಿಸಿದರು. ಜೊತೆಗೆ ಮಾಂಸಾಹಾರ ನಿಷೇಧಿಸಬೇಕೆಂದು ಪ್ರತಿಭಟನೆ, ಉಪವಾಸ ಸತ್ಯಾಗ್ರಹವನ್ನು ನಡೆಸಿದರು.

ದೇವಾಲಯಗಳ ನಗರ ಎಂದೂ ಕರೆಯಲ್ಪಡುವ ಈ ನಗರದಲ್ಲಿ 800 ಕ್ಕೂ ಹೆಚ್ಚು ಜೈನ ದೇವಾಲಯಗಳಿವೆ. ಇದೊಂದು ಜೈನ ಧರ್ಮದ ಯಾತ್ರಾ ಸ್ಥಳವೂ ಹೌದು. ಜೈನ ಸನ್ಯಾಸಿಗಳ ಪ್ರತಿಭಟನೆಯ ಫಲವಾಗಿ ಇಲ್ಲಿ ಸಂಪೂರ್ಣವಾಗಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ.

ಗುಜರಾತ್‌ನ ಭಾವನಗರ ಜಿಲ್ಲೆಯ ಪಾಲಿಟಾನಾ ನಗರವು ಮಾಂಸ ಮತ್ತು ಮೊಟ್ಟೆಗಳ ಮಾರಾಟ ಮತ್ತು ಸೇವನೆ ಸೇರಿದಂತೆ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ನಗರವಾಗಿದೆ. ಮತ್ತು ಇಲ್ಲಿ ನಿಮಗೆ ನಾನ್‌ವೆಜ್ ಆಹಾರಗಳು ಸಿಗೋದೇ ಇಲ್ಲ.